ನುಂಗಲಾರದ ತುತ್ತಾಗಿದೆ.
Advertisement
ಜಿಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಅಂಗೀಕಾರಗೊಂಡು ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಪದಚ್ಯುತಗೊಳಿಸಿದ ನಂತರ ತೆರವಾಗಿದ್ದ ಜಿಪಂ ಅಧ್ಯಕ್ಷ ಗಾದಿಗೆ ಮಾ. 23 ರಂದು ಚುನಾವಣೆ ನಡೆಯಲಿದ್ದು ಎಲ್ಲರ ಚಿತ್ತ ಜಿಪಂನತ್ತ ನೆಟ್ಟಿದೆ. ಜಿಪಂ ಒಟ್ಟು 37 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 23 ಸ್ಥಾನ(ಉಚ್ಚಾಟಿತ ಸೌಭಾಗ್ಯ ಹೊರತು ಪಡಿಸಿದರೆ 22 ಸ್ಥಾನ) ಬಿಜೆಪಿ 10, ಜೆಡಿಎಸ್ 2, ಪಕ್ಷೇತರರು 2 ಸ್ಥಾನ ಬಲಾಬಲ ಹೊಂದಿವೆ. 2016ರ ಮೇ 4ರಂದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಸೌಭಾಗ್ಯ ಬಸವರಾಜನ್ ಅಧ್ಯಕ್ಷೆಯಾಗಿ ಆಯ್ಕೆಯಾದರು.
Related Articles
Advertisement
ಈಗ ಒಡಂಬಡಿಕೆಯಂತೆ 2ನೇಯವರಾಗಿ ಅಧಿಕಾರ ಹಿಡಿಯಬೇಕಿರುವ ಉಪ್ಪಾರ ಸಮುದಾಯದ ವಿಶಾಲಾಕ್ಷಿ ನಟರಾಜ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು. ಆದರೆ, ತೆರೆಮರೆಯ ಆಟದಲ್ಲಿ ಮಾಜಿ ಶಾಸಕರಿಬ್ಬರು ಬೇರೆ ರೀತಿಯಲ್ಲೇ ಆಟಕಟ್ಟಿದ್ದು, ಹಿರಿಯೂರು ಕ್ಷೇತ್ರದ ಶಶಿಕಲಾ ಸುರೇಶ್ ಬಾಬು ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದು ಉಪ್ಪಾರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಡೀ ಸಮುದಾಯ ಕಾಂಗ್ರೆಸ್ವಿರುದ್ಧ ತಿರುಗಿ ಬೀಳುವ ಸಾಧ್ಯತೆ ತಂದೊಡ್ಡಿದೆ. ಹೊಸ ಬೆಳವಣಿಗೆ ಚಳ್ಳಕೆರೆ ತಾಲೂಕಿನ ಜಾಜೂರು ಜಿಪಂ ಕ್ಷೇತ್ರದ ಚಂದ್ರಿಕಾ ಶ್ರೀನಿವಾಸ್ ಅವರು ಕಾಂಗ್ರೆಸ್, ಜೆಡಿಎಸ್
ಮತ್ತು ಬಿಜೆಪಿ ಸದಸ್ಯರೊಂದಿಗೆ ರೆಸಾರ್ಟ್ ಪ್ರವಾಸ ಕೈಗೊಂಡಾಗ ಇಡೀ ಖರ್ಚು ವೆಚ್ಚ ಭರಿಸಿದ್ದರು ಎನ್ನಲಾಗಿದ್ದು ನನಗೇ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಉಳಿದ ಮೂವರು ಆಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವಿಷಯ ಮುಂದಿಟ್ಟು ಚಂದ್ರಿಕಾ ಶ್ರೀನಿವಾಸ್ ಅವರು ಬಂಡಾಯ ಎದ್ದರೂ ಅಚ್ಚರಿ ಪಡಬೇಕಿಲ್ಲ. ವಿರೋಧಿ ಗುಂಪು ಬಿಜೆಪಿ ಮತ್ತು ಸೌಭಾಗ್ಯ ಬಸವರಾಜನ್ ಅವರ ಗುಂಪಿನಲ್ಲಿ 10 ರಿಂದ 12 ಜಿಪಂ ಸದಸ್ಯರಿದ್ದಾರೆ.
ಯಾರೇ ಅಧ್ಯಕ್ಷರಾರಬೇಕೆನ್ನುವ ಆಕಾಂಕ್ಷಿಗಳು ಅವರೊಂದಿಗೆ 8 ಜನ ಜಿಪಂ ಸದಸ್ಯರನ್ನು ಕರೆತಂದರೆ ಒಮ್ಮತದಿಂದ ಅವರನ್ನ ನಾವು ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎನ್ನುವ ವಿಚಾರ ಎಲ್ಲ ಕಡೆ ಹರಿದಾಡುತ್ತಿದ್ದು ಈ ವಿಷಯ ಕಾಂಗ್ರೆಸ್‌ಗೆ ಮುಟ್ಟಿದೆ. ಒಂದು ವೇಳೆ ಈ ರೀತಿಯಾದರೆ ಕಾಂಗ್ರೆಸ್ ಸದಸ್ಯರು ಛಿದ್ರವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಾರೆ ಇಡೀ ಬೆಳವಣಿಗೆ ತೆರೆ ಮರೆಯಲ್ಲಿ ನಡೆಯುತ್ತಿದ್ದು, ಯಾವುದೇ ತಿರುವು ಪಡೆಯುವ ಸಾಧ್ಯತೆಯಿದೆ. ಹರಿಯಬ್ಬೆ ಹೆಂಜಾರಪ್ಪ