Advertisement
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲು ಸರ್ಕಾರ ರಚಿಸಿದ್ದ ಶೋಧನಾ ಸಮಿತಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಮೂವರ ಹೆಸರು ಇದೆ. ಇದರಲ್ಲಿ ಒಬ್ಬರ ಹೆಸರು ಅಂತಿಮಗೊಳಿಸುವ ಅಧಿ ಕಾರ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗಿದೆ. ಸರ್ಕಾರಕ್ಕೆ ವರದಿ ಕೈ ಸೇರಿ ಹಲವು ದಿನಗಳು ಕಳೆದರೂ ನೇಮಕ ಆಗಿಲ್ಲ. ಶೀಘ್ರದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಆಗಲಿದೆ.
ಆಗಿದ್ದು, ನಂತರದಲ್ಲಿ ಕುಲಪತಿ ನೇಮಕ ಆಗಿಲ್ಲ. ಆರು ತಿಂಗಳು ಮುಗಿಯಲು ಬಂದರೂ ಇನ್ನೂ ನೇಮಕ ಆಗದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ. ಕುಲಪತಿ ಆಗಲು ಸುಮಾರು 100ಕ್ಕೂ ಹೆಚ್ಚು ಅರ್ಜಿಗಳು ಶೋಧನಾ ಸಮಿತಿ ಬಳಿ ಇದ್ದವು. ಇದರಲ್ಲಿ ಯಾರ ಹೆಸರನ್ನು ವರದಿಯಲ್ಲಿ ಹಾಕಬೇಕು ಎಂದು ಸಮಿತಿ ಗೊಂದಲಕ್ಕೀಡಾಗಿತ್ತು. ಅನೇಕರು ಆಕಾಂಕ್ಷಿಗಳಾಗಿದ್ದರೂ ಇದರಲ್ಲಿ ಮೂವರ ಹೆಸರು ಅಂತಮಗೊಳಿಸಲಾಗಿದೆ.
Related Articles
Advertisement
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತಕ್ಕೆ ಚುರುಕು ಸಿಗಲಿ ಎಂಬ ಉದ್ದೇಶದಿಂದ ಕುಲಪತಿ ನೇಮಕ ಆಗಬೇಕೆಂಬ ಬೇಡಿಕೆ ಇದ್ದರೂ ಪ್ರಭಾರಿ ಕುಲಪತಿಗಳಿಗೂ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುತ್ತದೆ. ವಿಶ್ವವಿದ್ಯಾಲಯದ ಹಣಕಾಸು ವಿಷಯದಲ್ಲಿಯೂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದರೂ ಪ್ರಭಾರಿಗಳು ಈ ಬಗ್ಗೆ ಹಿಂದೇಟು ಹಾಕುವುದು ಸಹಜ. ಪ್ರಭಾರಿಗಳು ಶಾಶ್ವತವಾಗಿ ಕುಲಪತಿ ಆಗಿ ಇರುವುದಿಲ್ಲ ಎಂಬ ಕಾರಣಕ್ಕೆ ಮಹತ್ವದ ನಿರ್ಣಯ ಕೈಗೊಳ್ಳುವುದಿಲ್ಲ.
ವಿವಿಯ ಸ್ವತಂತ್ರ ಕಟ್ಟಡಕ್ಕಾಗಿ ಹೆಣಗಾಟಈ ಭಾಗದ ಪ್ರಾದೇಶಿಕ ಅಸಮಾನತೆ ನಿವಾರಿಸಬೇಕು ಎಂಬ ಉದ್ದೇಶದಿಂದ 1982ರಲ್ಲಿ ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ಸ್ನಾತಕೋತ್ತರ ಕೇಂದ್ರ ಆರಂಭಿಸಲಾಗಿತ್ತು. ಆದರೆ ವಿಶ್ವವಿದ್ಯಾಲಯವಾಗಿ ಪರಿವರ್ತನೆ ಆಗಲು 30 ವರ್ಷಗಳು ಬೇಕಾಯಿತು. 2010ರಲ್ಲಿ ರಾಜ್ಯ ಸರ್ಕಾರ ರಾಣಿ ಚನ್ನಮ್ಮ ಸ್ನಾತಕೋತ್ತರ ಕೇಂದ್ರವನ್ನು ಸ್ವತಂತ್ರ ವಿವಿಯಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿತು. ಈ ಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳಲ್ಲಿ ಹೊಸ ಹುರುಪು ಹಾಗೂ ಉತ್ಸಾಹಕ್ಕೆ ಕಾರಣವಾಯಿತು. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳನ್ನೊಳಗೊಂಡ ವಿವಿ ಆಯಿತು. ಆದರೆ 13 ವರ್ಷ ಕಳೆದರೂ ವಿವಿ ಆವರಣದಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಅರಣ್ಯ ಇಲಾಖೆಯ ಅಧೀನದಲ್ಲಿ ವಿವಿ ಜಾಗ ಒಳಪಟ್ಟಿದ್ದರಿಂದ ಅನೇಕ ಕೆಲಸಗಳು ಆಗಿಲ್ಲ. ಹೀಗಾಗಿ ಸರ್ಕಾರ ಹಿರೇಬಾಗೇವಾಡಿಯಲ್ಲಿ ಹೊಸ ಜಾಗ ಗುರುತಿಸಿ ಕಟ್ಟಡ ನಿರ್ಮಾಣ ಆರಂಭಿಸಿದೆ. ಈ ಹಿಂದಿನ ಕುಲಪತಿ ಡಾ. ಎಂ. ರಾಮಚಂದ್ರಗೌಡ ಅವರು ಕಟ್ಟಡ ನಿರ್ಮಾಣದಲ್ಲಿ ಆಸಕ್ತಿ ತೋರಿದ್ದು, ಕಾಮಗಾರಿ ಆರಂಭಗೊಂಡಿದೆ. ಆದರೆ ಆ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ವಿಚಾರದಲ್ಲಿ ಆರು ತಿಂಗಳು ಕಳೆಯಲು ಬಂದಿದೆ. ಇನ್ನೂ ಅಂತಿಮ ನಿರ್ಧಾರ ಆಗದಿರುವುದು ಬೇಸರದ ಸಂಗತಿ. ಈ ಭಾಗದ ಶೈಕ್ಷಣಿಕ ಸಮಸ್ಯೆಗಳನ್ನು ಅರಿತು ಸ್ಪಂದಿಸುವವರನ್ನು ನೇಮಕ ಮಾಡಬೇಕು. ಉತ್ತರ ಕರ್ನಾಟಕದವರು ಅದರಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಿ ನೇಮಕಗೊಳಿಸುವಂತೆ ಉನ್ನತ
ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ.
ಅಶೋಕ ಚಂದರಗಿ,ಕನ್ನಡ
ಹೋರಾಟಗಾರರು ರಾಣಿ ಚನ್ನಮ್ಮ ವಿವಿ ಕುಲಪತಿ ನೇಮಕ ಕೂಡಲೇ ಆಗಬೇಕು. ಇದರಿಂದ ವಿವಿಯಲ್ಲಿನ ಆಡಳಿತಾತ್ಮಕ ಹಾಗೂ ಶೈಕ್ಷಣಿಕ
ಕೆಲಸಗಳಿಗೆ ಚುರುಕು ಮುಟ್ಟುತ್ತದೆ.
ಡಾ| ಸರಜೂ ಕಾಟ್ಕರ, ಹಿರಿಯ ಸಾಹಿತಿ *ಭೈರೋಬಾ ಕಾಂಬಳೆ