Advertisement

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

12:32 AM Dec 24, 2024 | Team Udayavani |

ಸ್ಯಾನ್‌ ಫ್ರಾನ್ಸಿಸ್ಕೊ: ಚೆನ್ನೈ ಮೂಲದ ಭಾರತೀಯ ಅಮೆರಿಕನ್‌ ಉದ್ಯಮಿ, ಲೇಖಕ ಶ್ರೀರಾಮ ಕೃಷ್ಣನ್‌ರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ (ಎಐ) ವಿಭಾಗದ ಹಿರಿಯ ನೀತಿ ಸಲಹೆಗಾರರನ್ನಾಗಿ ಅಮೆರಿಕ ನಿಯೋಜಿತ ಅಧ್ಯಕ್ಷ ಟ್ರಂಪ್‌ ನೇಮಿಸಿದ್ದಾರೆ.

Advertisement

ಇದಕ್ಕೂ ಮೊದಲು ಮೈಕ್ರೋಸಾಫ್ಟ್, ಟ್ವಿಟರ್‌, ಯಾಹೂ, ಫೇಸ್‌ಬುಕ್‌ ಮತ್ತು ಸ್ನಾಪ್‌ ಸಂಸ್ಥೆಗಳ ಉತ್ಪನ್ನ ತಂಡಗಳನ್ನು ಕೃಷ್ಣನ್‌ ಮುನ್ನಡೆಸಿದ್ದರು.

ಇತ್ತೀಚೆಗೆ ಭಾರತೀಯ ಮೂಲದ ಜಯ್‌ ಭಟ್ಟಾಚಾರ್ಯ ಅವರನ್ನು ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆಫ್ ಹೆಲ್ತ್‌ (ಎನ್‌ಐಎಚ್‌)ನ ನಿರ್ದೇಶಕರನ್ನಾಗಿ ಮತ್ತು ಕಾಶ್‌ ಪಟೇಲ್‌ರನ್ನು ಎಫ್ಬಿಐ ನಿರ್ದೇಶಕರನ್ನಾಗಿ ಟ್ರಂಪ್‌ ಆಯ್ಕೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next