Advertisement

ಟ್ರೆಂಡಿಂಗ್‌ನಲ್ಲಿ ರಷ್ಯಾ ಅಧ್ಯಕ್ಷ ಪುತಿನ್‌ ಗರ್ಲ್ ಫ್ರೆಂಡ್‌

01:05 AM Mar 24, 2022 | Team Udayavani |

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧ ಮುಂದುವರಿ­ಯು­ತ್ತಿರುವಾಗಲೇ ರಷ್ಯಾ ಅಧ್ಯಕ್ಷ ಪುತಿನ್‌ ಅವರ ಗರ್ಲ್ ಫ್ರೆಂಡ್‌ ಎನ್ನಲಾದ ಅಲೀನಾ ಕಬೇವಾ ಟ್ರೆಂಡಿಂಗ್‌ನಲ್ಲಿದ್ದಾರೆ.

Advertisement

ಯುದ್ಧದ ಹಿನ್ನೆಲೆ ಅಲೀನಾರನ್ನು ಪುಟಿನ್‌ ಸ್ವಿಟ್ಸರ್‌ಲೆಂಡ್‌ನ‌ಲ್ಲಿ ಅಡಗಿಸಿಟ್ಟಿದ್ದಾರೆ ಎನ್ನಲಾಗಿದ್ದು, ಅವರಿಗೆ ವಸತಿ ನೀಡಬಾರದು ಎಂದು ಉಕ್ರೇನ್‌ ಬೆಂಬಲಿಗರು ಸ್ವಿಟ್ಸರ್‌ಲೆಂಡ್‌ ಸರಕಾರಕ್ಕೆ ಮನವಿ ಮಾಡಲಾರಂಭಿಸಿ­ದ್ದಾರೆ.

ಈ ವಿಚಾರವಾಗಿ change.org ಅಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, 55 ಸಾವಿರಕ್ಕೂ ಅಧಿಕ ಜನರು ಅದಕ್ಕೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ:ಇನ್‌ಸ್ಟಾಗ್ರಾಂನಲ್ಲಿ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ ನಟಿ ಸಮಂತಾ

ಒಲಿಂಪಿಕ್ಸ್‌ ಪದಕ ವಿಜೇತ ಜಿಮ್ನಾಸ್ಟ್‌ ಅಲೀನಾ ಕಬೇವಾರನ್ನು ಹಿಟ್ಲರ್‌ನ ಪತ್ನಿಗೆ ಹೋಲಿಸಿ ಚರ್ಚೆ ಮಾಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next