Advertisement

ಸೆಬಿಗೆ ಮೊದಲ ಮಹಿಳಾ ಅಧ್ಯಕ್ಷೆ ಮಾಧವಿ ಪುರಿ ಬುಚ್‌

12:29 AM Mar 01, 2022 | Team Udayavani |

ನವದೆಹಲಿ: ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷ ಹುದ್ದೆಗೆ ಮಾಧವಿ ಪುರಿ ಬುಚ್‌ ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಕ ಮಾಡಿದೆ. ಷೇರು ಮಾರುಕಟ್ಟೆ ವ್ಯವಹಾರಗಳನ್ನು ನಿಯಂತ್ರಿಸುವ ಸಂಸ್ಥೆಗೆ ಇದೇ ಮೊದಲ ಬಾರಿಗೆ ಮಹಿಳೆಯನ್ನು ಮುಖ್ಯಸ್ಥರನ್ನಾಗಿ ಮಾಡಿರುವುದು ಗಮನಾರ್ಹ.

Advertisement

ಇದುವರೆಗೆ ಅಧ್ಯಕ್ಷರಾಗಿದ್ದ ಅಜಯ್‌ ತ್ಯಾಗಿ ಅವರ ಐದು ವರ್ಷಗಳ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೇಮಕಕ್ಕಾಗಿ ಇರುವ ಕೇಂದ್ರ ಸಂಪುಟ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಬುಚ್‌ ಅವರ ಅಧಿಕಾರದ ಅವಧಿ ಮೂರು ವರ್ಷಗಳು ಇರುತ್ತವೆ. ನಂತರದ ಎರಡು ವರ್ಷಗಳಿಗೆ ವಿಸ್ತರಿಸಲು ಅವಕಾಶ ಉಂಟು.

ಬುಚ್‌ ಅವರು ಚೀನಾದ ಶಾಂಘೈನಲ್ಲಿರುವ ನ್ಯೂ ಡೆವಲಪ್‌ಮೆಂಟ್‌ ಬ್ಯಾಂಕ್‌ನ ಕನ್ಸಲ್ಟೆಂಟ್‌ ಆಗಿ ಕೆಲಸ ಮಾಡಿದ್ದಾರೆ. ಜತೆಗೆ ಸೆಬಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಸೈಂಟ್‌ ಸ್ಟೀಫ‌ನ್ಸ್‌ ಕಾಲೇಜಿನಿಂದ ಪದವಿ ಮತ್ತು ಐಐಎಂ ಅಹ್ಮದಾಬಾದ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next