ನವದೆಹಲಿ: “ಇಂಥ ಹಗರಣಗಳು ಬೆಳಕಿಗೆ ಬರುತ್ತಿದ್ದರೆ ದೇಶದಲ್ಲಿ ಯಾರು ಹೂಡಿಕೆ ಮಾಡಲು ಮುಂದೆ ಬರುತ್ತಾರೆ’? ಹೀಗೆಂದು ಪ್ರಶ್ನೆ ಮಾಡಿದ್ದು ಸಿಬಿಐ ವಿಶೇಷ ಕೋರ್ಟ್‌ನ ನ್ಯಾಯಾಧೀಶ.
ಅವ್ಯವಹಾರಗಳ ಬಗ್ಗೆ ಮಾಹಿತಿ ಇದ್ದರೂ, ಅದರ ವಿರುದ್ಧ ಕ್ಷಿಪ್ರವಾಗಿ ಕ್ರಮ ಕೈಗೊಳ್ಳದೇ ಇದ್ದ ಕಾರಣಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಲ್ಕು ವರ್ಷಗಳಿಂದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಹಿರಿಯ ಅಧಿಕಾರಿಗಳೇ ಹಗರಣದಲ್ಲಿ ಭಾಗವಹಿಸಿದ್ದ ಬಗ್ಗೆ ಗೊತ್ತಿದ್ದರೂ, ಅದರ ಬಗ್ಗೆ ಮೌನ ವಹಿಸಿ, ಕ್ರಮ ಕೈಗೊಳ್ಳದೇ ಇದ್ದ ಬಗ್ಗೆ ಆಕ್ಷೇಪ ಮಾಡಿದೆ ಕೋರ್ಟ್. ಇಂಥ ಹಗರಣಗಳು ಬೆಳಕಿಗೆ ಬರುತ್ತಿದ್ದರೆ, ದೇಶದಲ್ಲಿ ಹೂಡಿಕೆ ಮಾಡಲು ಯಾರು ಮುಂದಾಗುತ್ತಾರೆ? ಕೇಂದ್ರ ತನಿಖಾ ಸಂಸ್ಥೆ, ಸಿಬಿಐ ತನಿಖೆ ನಡೆಸುತ್ತಾ ಇದ್ದೇವೆ ಎಂದು ಯಾವತ್ತೂ ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದೇ ವೇಳೆ, ಎನ್‌ಎಸ್‌ಇನ ಮಾಜಿ ಅಧಿಕಾರಿ ಆನಂದ ಸುಬ್ರಹ್ಮಣ್ಯನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ.