Advertisement

Dalit President: ಜೆಎನ್‌ಯು ವಿದ್ಯಾರ್ಥಿ ಸಂಘಟನೆಗೆ 30 ವರ್ಷ ಬಳಿಕ ದಲಿತ ನಾಯಕ

09:03 PM Mar 25, 2024 | Team Udayavani |

ನವದೆಹಲಿ: ಸುಮಾರು 30 ವರ್ಷಗಳ ಬಳಿಕ ದೆಹಲಿಯ ಪ್ರತಿಷ್ಠಿತ ಜವಾಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ (ಜೆಎನ್‌ಯುಎಸ್‌ಯು)ಗೆ ದಲಿತ ವಿದ್ಯಾರ್ಥಿ ಧನಂಜಯ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 1996-97ರಲ್ಲಿ ಭಟ್ಟಿ ಲಾಲ್‌ ಭೈರವ್‌ ಎಂಬ ದಲಿತ ಸಮುದಾಯದ ವಿದ್ಯಾರ್ಥಿ ಅಧ್ಯಕ್ಷರಾಗಿದ್ದರು. ಆ ಬಳಿಕ, ಈ ಸಮುದಾಯದ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿರಲಿಲ್ಲ.

Advertisement

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 4 ಸ್ಥಾನಗಳನ್ನು ಎಡ ಪಕ್ಷಗಳ ಬೆಂಬಲಿತ ಎಐಎಸ್‌ಎ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ.  ಬಿಹಾರದ ಗಯಾ ವಾಸಿ ಧನಂಜಯ್‌ ಅವರು ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳು ದ್ವೇಷ ಮತ್ತು ಹಿಂಸೆಯ ರಾಜಕಾರಣವನ್ನು ತಿರಸ್ಕರಿಸಿರುವುದನ್ನು ಈ ಫ‌ಲಿತಾಂಶ ತೋರಿಸುತ್ತಿದೆ. ಕ್ಯಾಂಪಸ್‌ನಲ್ಲಿ ಹೆಣ್ಣುಮಕ್ಕಳ ಸುರಕ್ಷತೆ, ದೇಣಿಗೆ ಕಡಿತ, ಸ್ಕಾಲರ್‌ಶಿಪ್‌ ಏರಿಕೆ, ಮೂಲಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ನಮ್ಮ ಉದ್ದೇಶ ಎಂದಿದ್ದಾರೆ ಧನಂಜಯ್‌.

ಇದನ್ನೂ ಓದಿ: Wedding Invitation: ಮಗನ ಮದುವೆಗೆ ಉಡುಗೊರೆ ಬೇಡ, ಮೋದಿಗೆ ಮತ ನೀಡಿ: ವ್ಯಕ್ತಿ ಮನವಿ

Advertisement

Udayavani is now on Telegram. Click here to join our channel and stay updated with the latest news.

Next