Advertisement

ಚಿಕ್ಕ ಹುಡುಗಿಯ ನಿಧನಕ್ಕೆ ಕಣ್ಣೀರಾದ ಮಿಲ್ಲರ್; ಮೃತ ಬಾಲಕಿ ಮಿಲ್ಲರ್ ಮಗಳೆಂದು ತಪ್ಪು ಪ್ರಚಾರ

09:22 AM Oct 09, 2022 | Team Udayavani |

ರಾಂಚಿ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸದ್ಯ ಭಾರತದಲ್ಲಿದೆ. ಟಿ20 ಸರಣಿಯ ಬಳಿಕ ಇದೀಗ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದೆ. ಮೊದಲ ಪಂದ್ಯವನ್ನು ಜಯಿಸಿರುವ ಹರಿಣಗಳು ಇಂದು ರಾಂಚಿಯಲ್ಲಿ ಎರಡನೇ ಪಂದ್ಯವನ್ನು ಆಡಿಲಿದೆ. ಈ ನಡುವೆ ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್ ಅವರ ಸಾಮಾಜಿಕ ಜಾಲತಾಣದ ಪೋಸ್ಟೊಂದು ಸದ್ದು ಮಾಡುತ್ತಿದೆ.

Advertisement

ಶನಿವಾರ ಸಂಜೆ ಡೇವಿಡ್ ಮಿಲ್ಲರ್ ಅವರು ಅತ್ಯಂತ ದುಃಖಕರ ಸುದ್ದಿಯೊಂದನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಗತ್ತಿಗೆ ತಿಳಿಸಿದರು. ಬಾಲಕಿಯೊಬ್ಬರ ನಿಧನದ ಸುದ್ದಿಯೊಂದನ್ನು ಪ್ರಕಟ ಮಾಡಿದ ಮಿಲ್ಲರ್ “ನನ್ನ ಸ್ಕಟ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ! ನಾನು ತಿಳಿದಿರುವ ವಿಶಾಲ ಹೃದಯಿ ನೀವು. ನೀವು ಹೋರಾಟವನ್ನು ಬೇರೆಯ ಮಟ್ಟಕ್ಕೆ ತೆಗೆದುಕೊಂಡಿದ್ದೀರಿ. ಯಾವಾಗಲೂ ನಂಬಲಾಗದಷ್ಟು ಧನಾತ್ಮಕತೆ ಮತ್ತು ನಿಮ್ಮ ಮುಖದ ಮೇಲೆ ನಗು, ಕೆನ್ನೆಯ ಮತ್ತು ಕಿಡಿಗೇಡಿತನದ ಕಡೆ, ನಿಮ್ಮ ಪ್ರಯಾಣದಲ್ಲಿ ನೀವು ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿ ಸವಾಲನ್ನು ಸ್ವೀಕರಿಸಿದ್ದೀರಿ. ನೀವು ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುವ ಬಗೆಯನ್ನು ನನಗೆ ಕಲಿಸಿದ್ದೀರಿ. ನಿಮ್ಮೊಂದಿಗೆ ಪ್ರಯಾಣವನ್ನು ನಡೆಸಿದ್ದಕ್ಕಾಗಿ ನಾನು ವಿನಮ್ರನಾಗಿದ್ದೇನೆ. ಐ ಲವ್ ಯು ಸೋ ಮಚ್, ಆರ್ ಐಪಿ” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ದಸರಾ ರಜೆ ಹಿನ್ನೆಲೆ : ಕರಾವಳಿಯ ದೇಗುಲ, ಪ್ರವಾಸಿ ತಾಣಗಳಲ್ಲಿ ಜನ ದಟ್ಟಣೆ

ನಂತರ ಅವರು ಅವಳೊಂದಿಗೆ ಇನ್ಸ್ಟಾಗ್ರಾಮ್ ರೀಲ್ ಅಪ್ಲೋಡ್ ಮಾಡಿ: “ಆರ್ ಐಪಿ ಯೂ ಲಿಟಲ್ ರಾಕ್‌ಸ್ಟಾರ್. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ.” ಎಂದು ಬರೆದಿದ್ದರು.

ಮಿಲ್ಲರ್ ಪೋಸ್ಟ್ ನೋಡಿದ ಅಭಿಮಾನಿಗಳು ಮಿಲ್ಲರ್ ಪುತ್ರಿಯೇ ನಿಧನರಾಗಿದ್ದಾರೆಂದು ತಪ್ಪು ಭಾವಿಸಿದ್ದರು. ಮಿಲ್ಲರ್ ಅಂತ್ಯಕ್ರಿಯೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬಹುದು ಎಂದು ಕೆಲವರು ಸಾಮಾಜಿಕ ಜಾಲತಾಗಳಲ್ಲಿ ಬರೆದಿದ್ದರು. ಆದರೆ ಇದು ನಿಜವಲ್ಲ. ಮೃತಪಟ್ಟ ಹುಡುಗಿ ಮಿಲ್ಲರ್ ಮಗಳಲ್ಲ. ಆಕೆ ಮಿಲ್ಲರ್ ಗೆ ತುಂಬಾ ಹತ್ತಿರವಾಗಿದ್ದ ಅಭಿಮಾನಿ. ಆಕೆ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಳು. ಹೀಗಾಗಿ ಕ್ರಿಕೆಟಿಗ ಮಿಲ್ಲರ್ ಅವಳೊಂದಿಗೆ ವಿಶೇಷ ಪ್ರೀತಿಯನ್ನು ಬೆಳೆಸಿಕೊಂಡಿದ್ದರು.

Advertisement

ಮಿಲ್ಲರ್ ಭಾರತದಲ್ಲಿದ್ದು, ರಾಂಚಿಯಲ್ಲಿ ರವಿವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಆಡಲಿದ್ದಾರೆ. ಲಕ್ನೋದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಿಲ್ಲರ್ ಅಜೇಯ ಅರ್ಧಶತಕ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next