ಕೋಲ್ಕತ್ತಾ: ಈ ಬಾರಿಯ ವಿಶ್ವಕಪ್ ನಲ್ಲಿ ಇದುವರೆಗೆ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದ ಭಾರತ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೆಮಿ ಫೈನಲ್ ಪ್ರವೇಶಿಸಿದೆ. ರವಿವಾರ ಕೋಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಭಾರತ 243 ರನ್ ಅಂತರದ ಗೆಲುವು ಸಾಧಿಸಿದೆ.
ಈ ವಿಶ್ವಕಪ್ ನಲ್ಲಿ ಪ್ರತಿ ಪಂದ್ಯದ ನಂತರ ಭಾರತ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಬೆಸ್ಟ್ ಫೀಲ್ಡರ್ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು ಪ್ರತ್ಯೇಕ ಅಭಿಮಾನಿ ವರ್ಗ ಹೊಂದಿದೆ. ಪ್ರತಿ ಪಂದ್ಯದ ಬಳಿಕ ಯಾವ ಆಟಗಾರ ಈ ಪ್ರಶಸ್ತಿ ಪಡೆಯುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಬಳಿಕ ವಿಭಿನ್ನವಾಗಿ ಈ ಆಯ್ಕೆ ನಡೆಯಿತು. ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮಾ ನಡುವೆ ಪ್ರಶಸ್ತಿಗೆ ಸ್ಪರ್ಧೆಯಿತ್ತು. ಬಳಿಕ ರೋಹಿತ್ ಶರ್ಮಾ ಅವರು ವಿಜೇತ ಎಂದು ಘೋಷಿಸಲಾಯಿತು.
ಕೇವಲ ಕ್ಯಾಚ್ ಮತ್ತು ರನ್ ಔಟ್ ಗಳು ಮಾತ್ರವಲ್ಲದೆ, ಫೀಲ್ಡಿಂಗ್ ನಲ್ಲಿ ಒಟ್ಟಾರೆ ಪ್ರದರ್ಶನ ನೀಡುವ ಆಟಗಾರರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಫೀಲ್ಡಿಂಗ್ ಕೋಚ್ ದಿಲೀಪ್ ಹೇಳಿದರು.