ಹೊಸದಿಲ್ಲಿ: ಕೆಲವರು ಇತಿಹಾಸವನ್ನು ತಿರುಚಿದರು. ತಮಗೆ ಬೇಕಾದದ್ದನ್ನು ಬರೆದರು. ಆದರೆ ಈಗ ನಾವು ಇತಿಹಾಸ ಬರೆಯುವುದನ್ನು ತಡೆಯಲು ಯಾರಿಂ ದಲೂ ಸಾಧ್ಯವಿಲ್ಲ…
ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಖಡಕ್ ಮಾತು. ಹೊಸದಿಲ್ಲಿಯ ಎನ್‌ಡಿಎಂಸಿ ಹಾಲ್‌ನಲ್ಲಿ ಶುಕ್ರವಾರ “ಮಹಾರಾಣಾಸ್: ಎ ತೌಸಂಡ್ ಇಯರ್ ವಾರ್ ಫಾರ್ ಧರ್ಮ’ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಕರ್ನಾಟಕದಲ್ಲಿ ಶಾಲಾ ಮಕ್ಕಳ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿರುವ ಮತ್ತು ಇತಿಹಾಸ ಪಠ್ಯಗಳನ್ನು ಎಡಪಂಥೀಯ ಇತಿಹಾಸಕಾರರು ಬರೆದದ್ದು, ಅದರಲ್ಲಿ ಹಿಂದೂ ರಾಜರು, ಹಿಂದೂ ಸಾಮ್ರಾಜ್ಯಗಳ ಕೊಡುಗೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೆಸ್ಸೆಸ್, ಬಿಜೆಪಿ ಆರೋಪ ಮಾಡುತ್ತಿರುವ ನಡುವೆಯೇ ಶಾ ನೀಡಿ ರುವ ಈ ಹೇಳಿಕೆ ಮಹತ್ವ ಪಡೆದಿದೆ.
ಸತ್ಯವನ್ನು ಪ್ರಚುರಪಡಿಸುತ್ತೇವೆ ಇತಿಹಾಸಗಳನ್ನು ಸರಕಾರಗಳಿಗೆ ಸೃಷ್ಟಿಸಲು ಆಗದು. ಏಕೆಂದರೆ ಅವುಗಳನ್ನು ಸತ್ಯ ಘಟನೆ ಆಧರಿಸಿ ಬರೆದಿರ ಲಾಗುತ್ತದೆ. ಭಾರತದ ಬಹುತೇಕ ಇತಿಹಾಸಕಾರರು ಪಾಂಡ್ಯರು, ಚೋಳರು, ಮೌರ್ಯರು, ಗುಪ್ತರು ಮತ್ತು ಅಹೋಮರ ಭವ್ಯ ಆಡಳಿತವನ್ನು ನಿರ್ಲಕ್ಷಿಸಿ, ಕೇವಲ ಮೊಘಲರಿಗಷ್ಟೇ ಆದ್ಯತೆ ನೀಡಿದ್ದರು. ಆಕ್ರಮಣಕಾರರ ವಿರುದ್ಧ ಭಾರತೀಯ ರಾಜರು ಮಾಡಿರುವಂಥ ಹಲವಾರು ಯು ದ್ಧಗಳು, ಹೋರಾಟಗಳನ್ನು ಜನರು ಮರೆತೇ ಬಿಟ್ಟಿದ್ದಾರೆ.
ಅಸ್ಸಾಂನ ಅಹೋಮ್ ರಾಜರು, ವಾಯವ್ಯ ಭಾಗದಲ್ಲಿ ಶಿವಾಜಿ ನೇತೃತ್ವದ ಮರಾಠರು ನಡೆಸಿದ ಹೋರಾಟದಿಂದಾಗಿ ದೇಶವು ಈಗ ಇಲ್ಲಿಗೆ ಬಂದು ನಿಂತಿದೆ. ಇಂಥ ಯುದ್ಧಗಳ ಬಗ್ಗೆ ಮುಂದಿನ ತಲೆಮಾರಗಳಿಗೆ ತಿಳಿಸ ಬೇಕಾದ್ದು ನಮ್ಮ ಕರ್ತವ್ಯ. ಅದನ್ನು ತಡೆಯಲು ಯಾರಿಂ ದಲೂ ಸಾಧ್ಯವಿಲ್ಲ.
ಹೊಸ ಇತಿಹಾಸ ಪುಸ್ತಕಗಳಲ್ಲಿ ಸತ್ಯವನ್ನು ಪ್ರಚುರಪಡಿಸುವ ನಮ್ಮ ಪ್ರಯತ್ನವು ದೊಡ್ಡ ಮಟ್ಟಿನ ದ್ದಾಗಿರುತ್ತದೆ ಮತ್ತು ಪರಿಣಾಮಕಾರಿಯೂ ಆಗಿರುತ್ತದೆ ಎಂದೂ ಶಾ ಹೇಳಿದ್ದಾರೆ. ನಮ್ಮ ದೇಶದ ವೈಭವಯುತ ಇತಿಹಾಸವನ್ನು ಸಾರ್ವಜನಿಕರ ಮುಂದಿಡಬೇಕಿದೆ. ನಾವು ದೊಡ್ಡಮಟ್ಟದಲ್ಲಿ ಶ್ರಮಿಸಿದರೆ ಸುಳ್ಳಿನ ಕಂತೆಗಳು ತನ್ನಿಂತಾನೇ ಅಳಿಯಲಾರಂಭಿಸುತ್ತವೆ. ದೇಶವನ್ನಾಳಿದ ಹಿಂದೂ ಸಾಮ್ರಾಟರ ಪರಾಕ್ರಮಗಳನ್ನು ಬರೆಯ ತೊಡಗಿದಾಗ ಸತ್ಯ ಹೊರಹೊಮ್ಮಲು ಶುರುವಾಗುತ್ತದೆ. ಇಂಥ ಸತ್ಯವನ್ನು ಬರೆಯುವುದರಿಂದ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮ ಇತಿಹಾಸ ವನ್ನು ನಾವೇ ಬರೆಯುತ್ತೇವೆ ಎಂದೂ ಗುಡುಗಿದ್ದಾರೆ ಶಾ.