Advertisement

ಯಾರೇ ನೀ, ಟಿಯಾರಾ?: ಕಿರೀಟ ತೊಟ್ಟ ಕಿನ್ನರಿಯ ವೈಯ್ನಾರ

12:04 PM Nov 07, 2020 | |

ನೋಡಿದ ತಕ್ಷಣ ಕಿರೀಟದಂತೆ ಕಾಣುವ ಟಿಯಾರ, ಇತ್ತೀಚಿನ ಟ್ರೆಂಡಿ ಫ್ಯಾಶನ್‌. ಹೇರ್‌ಬ್ಯಾಂಡ್‌ನ‌ಂತೆ ಇರುವ ಈ ಟಿಯಾರಗಳನ್ನು ಧರಿಸಿ ನೀವು ರಾಜಕುಮಾರಿಯಂತೆ ಕಂಗೊಳಿಸಬಹುದು. ಹಣೆ ಮತ್ತು ಕಣ್ಣಿನ ಮೇಲೆ ಆಗಾಗ್ಗೆ ಕೂದಲು ಬೀಳುವುದನ್ನೂ ತಡೆಯಬಹುದು… 

Advertisement

ಮಳೆಗಾಲದಲ್ಲಿ ಹೇರ್‌ ಸ್ಟ್ರೇಟ್ನಿಂಗ್‌ ಮಾಡಿಸಿದರೆ, ತಲೆಕೂದಲು ಒದ್ದೆ ಆಗದಂತೆ ತುಂಬಾ ಕಾಳಜಿ ವಹಿಸಬೇಕಾಗುತ್ತದೆ. ಕೂದಲು ಒ¨ªೆ ಆಗಿಬಿಟ್ಟರೆ ಮತ್ತೆ ತನ್ನ ಮೂಲ ಸ್ವರೂಪಕ್ಕೆ ಮರಳುತ್ತದೆ, ಸ್ಟ್ರೇಟ್ನಿಂಗ್‌ ಮಾಡಿಸಿದ್ದು ವ್ಯರ್ಥವಾಗುತ್ತದೆ. ಹೇರ್‌ಸ್ಟೈಲ್‌ ಹೆಸರಿನಲ್ಲಿ ಸ್ಟ್ರೇಟ್ನಿಂಗ್‌ ಮಾಡಿಸುವ ಬದಲು ಭಿನ್ನ ಭಿನ್ನವಾದ ಹೇರ್‌ ಆಕ್ಸೆಸರೀಸ್‌ಗಳನ್ನು ಬಳಸುವುದು ಉತ್ತಮ ಉಪಾಯ.

ಕ್ಲಿಪ್‌, ಬ್ಯಾಂಡ್‌, ರಿಬ್ಬನ್‌ ಅಷ್ಟೇ ಅಲ್ಲ!
ಹೇರ್‌ ಆಕ್ಸೆಸರೀಸ್‌ ಅಂದಾಗ ಕಣ್ಮುಂದೆ ಬರುವುದು ಹೇರ್‌ ಕ್ಲಿಪ್‌, ಹೇರ್‌ ಬ್ಯಾಂಡ್‌ ಅಥವಾ ರಿಬ್ಬನ್‌ಗಳು. ಆದರೆ, ಫ್ಯಾಶನ್‌ ಜಗತ್ತು ಇವೆಲ್ಲವನ್ನೂ ದಾಟಿ ಮುಂದಕ್ಕೆ ಹೋಗಿದೆ. ಟಿಯಾರ, ಡಯಡೆಮ… ಮತ್ತು ಕ್ರೌನ್‌ (ಕಿರೀಟ) ನಂಥ ಆಯ್ಕೆಗಳಿಂದ ತುರುಬು ವಿನ್ಯಾಸ (ಬನ್‌ ಹೇರ್‌ಸ್ಟೈಲ್‌) ಮತ್ತಷ್ಟು ಮೆರುಗು ಪಡೆದಿದೆ. ಇವು ಕೇವಲ ತುರುಬಿಗೆ ಸೀಮಿತವಾಗದೆ, ಜಡೆ, ಜುಟ್ಟು ಅಥವಾ ಗಾಳಿಗೆ ಬಿಟ್ಟ ಉದ್ದ ಕೂದಲಿನ ವಿನ್ಯಾಸಕ್ಕೂ ಬಳಸಬಹುದು. ಅಷ್ಟೇ ಅಲ್ಲ! ಹೆಡ್‌ ಸ್ಕಾಫ್ì ಮೇಲೂ ಬಳಸಬಹುದು.

ಕಿರೀಟವಲ್ಲ, ಇದು ಟಿಯಾರ
ಕಿರೀಟವನ್ನು ಹೋಲುವ ಟಿಯಾರಗಳು ಚಿಕ್ಕದಾಗಿ, ಚೊಕ್ಕವಾಗಿರುತ್ತವೆ. ಪ್ರಾಚೀನ ಗ್ರೀಕ್‌ ಮತ್ತು ರೋಮನ್ನರು ತೊಡುತ್ತಿದ್ದ ಈ ಟಿಯಾರ ನಂತರ ರಷ್ಯನ್ನರ ಕೋಕುಶನಿಕ…ಗೂ ಪ್ರೇರಣೆಯಾಯಿತು. ಮುತ್ತು, ರತ್ನ, ಹಕ್ಕಿ ಪುಕ್ಕ, ಹೂವು… ಮುತ್ತಿನ ಮಣಿಗಳು, ಅಮೂಲ್ಯ ರತ್ನಗಳನ್ನು ಹೋಲುವ ಕಲ್ಲುಗಳು, ಚಿನ್ನ- ಬೆಳ್ಳಿಯಂತೆ ಮಿನುಗುವ ವಸ್ತುಗಳು, ಪುಕ್ಕಗಳು, ಗರಿಗಳು, ದಾರ, ಹೂವು ಅಥವಾ ಹೂವನ್ನು ಹೋಲುವ ಆಕೃತಿಗಳಿಂದ ಪೋಣಿಸಿದ ಟಿಯಾರಗಳು ಮಾರ್ಕೆಟ್‌ನಲ್ಲಿ ಲಭ್ಯ. ಮಾಲೆಯಂತೆ ಅಥವಾ ಹೇರ್‌ ಬ್ಯಾಂಡ್‌ನ‌ಂತೆ ಇರುವ ಈ ಟಿಯಾರಗಳನ್ನು ಕಿರೀಟದಂತೆ ತೊಡಲಾಗುತ್ತದೆ.

ಸೋಮಾರಿಗಳಿಗೆ ಟಿಯಾರ ವರ
ಇದನ್ನು ತಲೆಯ ಮೇಲ್ಭಾಗದಲ್ಲೇ ಧರಿಸಬೇಕೆಂದೇನಿಲ್ಲ. ಕಿವಿಯ ಹಿಂಬದಿ ಟಿಯಾರಾದ ಮುದ್ರೆ ಕಾಣುವಂತೆ ಅಥವಾ ಜುಟ್ಟಿನ ಮೇಲೆ, ಜುಟ್ಟಿನ ಕೆಳಗೆ, ಎಲ್ಲೂ ಕಟ್ಟಿಕೊಳ್ಳಬಹುದು. ಟಿಯಾರ ಧರಿಸಿದರೆ ಮಾಮೂಲಿ ಜಡೆ, ಜುಟ್ಟು, ತುರುಬಿಗೂ ಹೊಸ ಮೆರುಗು ಸಿಗುತ್ತದೆ. ತಲೆ ಬಾಚಿಕೊಳ್ಳಲು ಸಮಯವೇ ಇಲ್ಲದಿದ್ದರೆ ಅಥವಾ ಮನಸ್ಸಿಲ್ಲದಿದ್ದರೆ ಟಿಯಾರ ಧರಿಸಿ ತಲೆ ಕೂದಲಿನ ಅಂದ ಹೆಚ್ಚಿಸಬಹುದು.

Advertisement

ಸರಳ, ಸುಂದರ…
ತಲೆಗೆ ಟಿಯಾರಗಳನ್ನು ತೊಡುವುದರಿಂದ ಹಣೆ ಮತ್ತು ಕಣ್ಣ ಮೇಲೆ ಆಗಾಗ್ಗೆ ಕೂದಲು ಬೀಳುವುದನ್ನು ತಡೆಯಬಹುದು. ಕೇಶ ವಿನ್ಯಾಸ ಸರಳವಾಗಿದ್ದರೂ, ಎಲ್ಲರ ಗಮನ ಸೆಳೆಯಬಲ್ಲ ಟಿಯಾರ ನೀವು ಉಟ್ಟ ಉಡುಪಿನ ಸೊಬಗನ್ನೂ ಹೆಚ್ಚಿಸುತ್ತದೆ. ಎಲ್ಲಕ್ಕಿಂತ ದೊಡ್ಡ ಲಾಭ ಏನೆಂದರೆ, ಟಿಯಾರು ಧರಿಸಿದಾಗ ಟ್ರೆಂಡಿ ಮತ್ತು ಸ್ಟೈಲಿಶ್‌ ಆಗಿ ಕಾಣಿಸುತ್ತೀರಿ.

ನಟಿಯರ ಫೇವರಿಟ್‌
ಥೀಮ… ಪಾರ್ಟಿ, ಫ್ಯಾನ್ಸಿ ಡ್ರೆಸ್‌ ಅಥವಾ ಫ್ಯಾಷನ್‌ ಶೋನಲ್ಲಿ ಈ ರೀತಿ ಟಿಯಾರಗಳನ್ನು ತೊಟ್ಟು ಶೋಸ್‌ ಟಾಪರ್‌ನಂತೆ ಮಿಂಚಬಹುದು. ಈಗ ಮುತ್ತು ರತ್ನಗಳಿಂದ ಹೆಣೆದ ಟಿಯಾರಗಳಿಗೆ ಬಹಳ ಬೇಡಿಕೆ ಇದೆ. ಹ್ಯಾಟ್‌ ತಯಾರಕರು ಮತ್ತು ವಿನ್ಯಾಸಕರಾದ ಮೆಸೋನ್‌ ಮಿಶೆಲ… ಅವರ ಸ್ಕಾಫ್ì ಟಿಯಾರಗಳೂ ಪ್ರಸಿದ್ಧಿ ಪಡೆದಿವೆ. ಇವುಗಳನ್ನು ಹಾಲಿವುಡ್‌, ಬಾಲಿವುಡ್‌ ನಟಿಯರು ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ಸಿನಿಮಾದ ಪ್ರಮೋಷನ್‌ಗಳಲ್ಲಿ ತೊಡುವ ಮೂಲಕ ಅಭಿಮಾನಿಗಳಲ್ಲಿ ಟಿಯಾರ ಹುಚ್ಚು ಹೆಚ್ಚಿಸಿ¨ªಾರೆ. ನೀವು ಕೂಡ ಟಿಯಾರ ತೊಟ್ಟು ರಾಜಕುಮಾರಿಯಂತೆ ಮೆರೆಯಿರಿ.

ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next