Advertisement
ವಿಟ್ಲ ಪಟ್ಟಣ ಪಂಚಾಯತ್ ನೀರು ಸರಬರಾಜು ವ್ಯವಸ್ಥೆಯನ್ನು ಹಿಂದೆ ಒದಗಿಸಿತ್ತು. ಇತ್ತೀಚೆಗೆ ತಾಂತ್ರಿಕ ಸಮಸ್ಯೆಯಿಂದ ಅಲ್ಲಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ಅಧಿಕೃತವಾಗಿ ಹಾಗೂ ನೇರವಾಗಿ ದೂರು ನೀಡಲಾಗಿದೆ. ನೀರು ಬಿಡುವ ಸಿಬಂದಿ, ಮುಖ್ಯಾಧಿಕಾರಿ, ಜನಪ್ರತಿನಿಧಿಗಳಿಗೂ ಇಲ್ಲಿ ನೀರಿಲ್ಲ ಎಂಬ ಮಾಹಿತಿಯಿದೆ. ಆದರೆ ಎತ್ತರ ಪ್ರದೇಶ ವಾದುದರಿಂದ ನೀರು ಅಲ್ಲಿಗೆ ಏರುತ್ತಿಲ್ಲ ಎಂಬ ಕಾರಣವಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ಸಾಕುಪ್ರಾಣಿ ಮಾಲಕರ ಆಗ್ರಹ.
Related Articles
Advertisement
ಚಿಕಿತ್ಸೆಗಾಗಿ ನಾಯಿಯನ್ನು ತೆಗೆದು ಕೊಂಡು ಹೋದೆ. ನಾಯಿ ಮುಟ್ಟಿದ ಬಳಿಕ ಕೈತೊಳೆಯಬೇಕೆಂದು ಕೇಳಿದಾಗ ಸಿಬಂದಿ, ತಾನು ಕುಡಿಯಲು ತಂದ ನೀರಿನ ಬಾಟ್ಲಿಯನ್ನು ನೀಡಿದರು. ಇಲ್ಲಿಗೆ ನೀರು ಸರಬರಾಜಾಗುವುದಿಲ್ಲ ಎಂದರು. -ಚಂದ್ರಶೇಖರ
ಶೇ. 20ರಷ್ಟು ಸಿಬಂದಿ :
ಇಲ್ಲಿ ಪಶು ವೈದ್ಯಾಧಿಕಾರಿಯಿಲ್ಲ. 8 ತಿಂಗಳ ಹಿಂದೆ ಇದ್ದ ವೈದ್ಯರು ಭಡ್ತಿ ಹೊಂದಿ ಮಡಿಕೇರಿಗೆ ವರ್ಗಾಯಿಸಲ್ಪಟ್ಟಿದ್ದಾರೆ. ಆ ಬಳಿಕ ಆ ಹುದ್ದೆ ಖಾಲಿಯಾಗಿದೆ. ಅಡ್ಯನಡ್ಕದ ವೈದ್ಯಾಧಿಕಾರಿ ಇಲ್ಲಿ ಪ್ರಭಾರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ. ಇವರನ್ನು ಸೇರಿಸಿ ಇಲ್ಲಿ ಮೂವರೇ ತಾಂತ್ರಿಕ ಸಿಬಂದಿಯಿದ್ದು, ಓರ್ವ ಗ್ರೂಪ್ ಡಿ ನೌಕರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯ ಜಾನುವಾರು ವೈದ್ಯಾಧಿಕಾರಿ ಕನ್ಯಾನ ಮತ್ತು ಪರಿಯಾಲ್ತಡ್ಕ ಕೇಂದ್ರದ ಜವಾಬ್ದಾರಿಯನ್ನು ಹೊರಬೇಕು. ಹಿರಿಯ ಪಶು ವೈದ್ಯ ಪರೀಕ್ಷಕರಿಗೆ ಕುಡ್ತಮುಗೇರು ಕೇಂದ್ರವನ್ನು ನಿಭಾಯಿಸಬೇಕು. ಈ ಮೂವರು ತಾಂತ್ರಿಕ ಸಿಬಂದಿ 14 ಗ್ರಾಮಗಳ ಭಾರವನ್ನು ಹೊರಬೇಕು. ವಿಟ್ಲ, ವಿಟ್ಲಮುಟ್ನೂರು, ವಿಟ್ಲಪಟ್ನೂರು, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ, ಪೆರುವಾಯಿ, ಮಾಣಿಲ, ಅಳಿಕೆ, ಕೇಪು, ಪುಣಚ, ಇಡಿRದು, ಕುಳ ಗ್ರಾಮಗಳಲ್ಲಿ ವಿಟ್ಲ, ಕುಡ್ತಮುಗೇರು, ಕನ್ಯಾನ, ಪರಿಯಾಲ್ತಡ್ಕದಲ್ಲಿ ಪಶು ಚಿಕಿತ್ಸಾ ಕೇಂದ್ರಗಳಿದ್ದು ಶೇ. 20ರಷ್ಟು ಸಿಬಂದಿಯಿದ್ದಾರೆ. ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವವರೂ ಇಲ್ಲವಾಗಿದೆ.
-ಉದಯಶಂಕರ್ ನೀರ್ಪಾಜೆ