Advertisement
ನಗರದ ಹೃದಯಭಾಗ, ವಾಣಿಜ್ಯ ಪ್ರದೇಶ, ಸಂಚಾರ ಒತ್ತಡದ ಮಾರ್ಗಗಳಲ್ಲಿ ನಡೆಯುತ್ತಿರುವವೈಟ್ ಟಾಪಿಂಗ್ ಕಾಮಗಾರಿ ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, 152.24 ಕಿ.ಮೀ.ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿದೆ.ಇದರಿಂದಾಗಿ ಎರಡು ವರ್ಷಗಳಿಂದಕಾಮಗಾರಿ ಕಿರಿಕಿರಿಯಿಂದ ತೊಂದರೆಗೊಳಗಾಗಿದ್ದ ವಾಹನ ಸವಾರರು ಹಾಗೂ ಸಾರ್ವ ಜನಿಕರು ನಿಟ್ಟುಸಿರು ಬಿಡುವಂತಾಗಲಿದೆ. ಈಗಾಗಲೇ ನಗರಾದ್ಯಂತದ ಪ್ರಮುಖ ರಸ್ತೆಗಳಲ್ಲಿ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿ ಶೇ.80ಪೂರ್ಣ ಗೊಂಡಿದೆ.
Related Articles
Advertisement
22 ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣ :
ಸ್ಮಾರ್ಟ್ ಸಿಟಿ ಯೋಜನೆಯಡಿ ಎಂ.ಜಿ.ರಸ್ತೆಯಿಂದ ಕಾಮರಾಜ್ ಮಾರ್ಗವಾಗಿ ಕಮರ್ಷಿಯಲ್ ಸ್ಟ್ರೀಟ್‌ವರೆಗೆ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಿಂದ ಸೆಂಟ್‌ಜಾನ್ಸ್ ಚರ್ಚ್ ರಸ್ತೆವರೆಗೆ ರೂ.25.72 ಕೋಟಿ ವೆಚ್ಚದ1.83 ಕಿ.ಮೀ ರಸ್ತೆ ಕಾಮಗಾರಿ ಸೇರಿದಂತೆ ಒಟ್ಟು460.02 ಕೋಟಿ ರೂ. ವೆಚ್ಚದ 27.80 ಕಿಮೀ ಉದ್ದದ,32 ರಸ್ತೆಗಳನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ. 22 ರಸ್ತೆಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಐದುರಸ್ತೆಗಳು ಡಾಂಬರೀಕರಣ ಆಗಬೇಕಿದೆ. ಇದೂ ಪೂರ್ಣಗೊಂಡರೆ ನಗರದಲ್ಲಿ ಸಂಚಾರ ಸುಗಮವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೆಲವು ಕಾಮಗಾರಿ ಮುಕ್ತಾಯ :
ನಗರದ ಪ್ರಮುಖ ರಸ್ತೆಗಳಲ್ಲಿ ಒಟ್ಟು ನೂರು ರಸ್ತೆಗಳನ್ನು ವೈಟ್ ಟಾಪಿಂಗ್‌ಗೆಆಯ್ಕೆಮಾಡಿಕೊಳ್ಳಲಾಗಿತ್ತು. ಆ ಪೈಕಿ ಬಿಇಎಲ್‌ವೃತ್ತದಿಂದ ಹೆಬ್ಟಾಳದ ಮೂಲಕ ಬೆನ್ನಿಗಾನಹಳ್ಳಿಮೇಲ್ಸೇತುವೆವರೆಗಿನ 11ಕಿ.ಮೀ, ಮೈಸೂರುರಸ್ತೆಯಿಂದ ಸುಮನಹಳ್ಳಿ ಜಂಕ್ಷನ್ ಮೂಲಕತುಮಕೂರು ರಸ್ತೆವರೆಗಿನ 9.66 ಕಿ.ಮೀ, ನಾಗಾವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯರಸ್ತೆಯ ಮಾರ್ಗದ 8.65 ಕಿ.ಮೀ. ಉದ್ದದರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣಗೊಂಡಿದೆ.
ಮಳೆಗಾಲದಲ್ಲಿ ಜಲಾವೃತ, ಡಾಂಬರು ಕಿತ್ತು ಬರುವುದು, ರಸ್ತೆಗುಂಡಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಎಂಬಂತೆ ರೂಪಿಸಲಾಗಿರುವ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡರೆ ನಗರದ ಸಂಚಾರ ದಟ್ಟಣೆ ನಿವಾರಣೆಗೂ ಸಹಕಾರಿಯಾಗಲಿದೆ. –ಲೋಕೇಶ್ , ಬಿಬಿಎಂಪಿ ಮುಖ್ಯ ಎಂಜಿನಿಯರ್
-ಭಾರತಿ ಸಜ್ಜನ್