Advertisement

ವಾಜಪೇಯಿ ಮೃಗಾಲಯಕ್ಕೆ ಬಂತು ಬಿಳಿ ಹುಲಿ-ತೋಳ

08:23 PM Aug 29, 2020 | Suhan S |

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಬಳಿ ನೂತನವಾಗಿ ತಲೆ ಎತ್ತಿರುವ ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಅಪರೂಪದ ಅತಿಥಿಗಳು ಬಂದಿದ್ದಾರೆ.

Advertisement

ತಾಲೂಕಿನ ಕಮಲಾಪುರ ಬಿಳಿಕಲ್ಲು ಅರಣ್ಯ ಪ್ರದೇಶದಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ 7 ವರ್ಷದ ಅರ್ಜುನ್‌ ಎಂಬ ಬಿಳಿ ಹುಲಿ ಹಾಗೂ ಎಂಟು ಬಿಳಿ ತೋಳಗಳ ಆಗಮನವಾಗಿದೆ. ಉತ್ತರ ಕರ್ನಾಟಕ ಜನತೆ ಇನ್ನು ಮುಂದೆ ಬಿಳಿ ಹುಲಿಯನ್ನು ವೀಕ್ಷಣೆ ಮಾಡಲು ಮೈಸೂರು ಮೃಗಾಲಯಕ್ಕೆ ಹೋಗಬೇಕಿಲ್ಲ. ತಾಲೂಕಿನ ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿದೆ. ಸದ್ಯ ಮೃಗಾಲಯದಲ್ಲಿ ಪಟ್ಟೆ ಹುಲಿ, ಜಿರಾಫೆ, ಕಾಡುಕೋಣ, ಸಿಂಹ ಸೇರಿದಂತೆನಾನಾ ಪ್ರಾಣಿಗಳ ಜೊತೆಯಲ್ಲಿ ಹೊಸದಾಗಿ ಬಂದಿರುವಬಿಳಿ ಹುಲಿ ಹಾಗೂ ಬಿಳಿ ತೋಳಗಳನ್ನು ವೀಕ್ಷಣೆ ಮಾಡುವ ಅವಕಾಶ ಪ್ರವಾಸಿಗರಿಗೆ ದೊರೆತಿದೆ.

ಹೊಸದಾಗಿ ಮೃಗಾಲಯಕ್ಕೆ ಹುಲಿ ಬಂದಿರುವುದರಿಂದ ನಿಗಾವಹಿಸಿದ್ದು, ಸದ್ಯ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶವನ್ನು ನೀಡಿಲ್ಲ. ಹುಲಿ ಇಲ್ಲಿನ ವಾತಾವರಣಕ್ಕೆ ಹೊಂದಿದ ಬಳಿಕವಷ್ಟೆ ವೀಕ್ಷಣೆ ಪ್ರವಾಸಿಗರ ವೀಕ್ಷಣೆ ಅವಕಾಶ ನೀಡುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತಾದರೆ ಇದೇ ಸೆ.1ರಂದು ಪ್ರಾಣಿ ಪ್ರೀಯರಿಗೆ ನೋಡಲು ಅವಕಾಶ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಉತ್ತರ ಕರ್ನಾಟಕದ ಕಮಲಾಪುರ ಹಾಗೂ ಬಿಂಕದಕಟ್ಟಿಯಲ್ಲಿ ಮೃಗಾಲಯವಿದೆ. ಆದರೆ, ಅಲ್ಲಿ ಬಿಳಿ ಹುಲಿಯ ಭಾಗ್ಯವಿಲ್ಲ. ಕೆಲ ಪ್ರಾಣಿಗಳನ್ನು ನೋಡಬಹುದಾಗಿದೆ. ರಾಜ್ಯದಲ್ಲಿ ಒಟ್ಟು 9 ಪ್ರಾಣಿ ಮೃಗಾಲಯಗಳಿವೆ. ಈ ಪೈಕಿ ಮೈಸೂರು ಮೃಗಾಲಯದಲ್ಲಿ ಮಾತ್ರ ಬಿಳಿ ಹುಲಿಯನ್ನು ಕಾಣಬಹುದಾಗಿತ್ತು. ಆದರೆ, ಕ್ರಾಸ್‌ ಬ್ರಿಡ್‌ ಮಾಡಿದ 7 ವರ್ಷದ ಗಂಡು ಬಿಳಿ ಹುಲಿಯನ್ನು ಇಲ್ಲಿನ ಪ್ರಾಣಿ ಮೃಗಾಲಯದಲ್ಲಿಯೂ ನೋಡಬಹುದು. ಸದ್ಯ ಮೃಗಾಲಯದಲ್ಲಿ ಪಟ್ಟೆ ಹುಲಿ, ಜಿರಾಫೆ, ಕಾಡುಕೋಣ, ಸಿಂಹ ಸೇರಿದಂತೆ ವಿವಿಧ ಪ್ರಾಣಿಗಳ ಜೊತೆಯಲ್ಲಿ ಇದೀಗ ಸ್ಥಳೀಯ ಮಟ್ಟದಲ್ಲಿ ಇಂತಹ ಅಪರೂಪದ ಪ್ರಾಣಿಗಳನ್ನು ನೋಡುವ ಅವಕಾಶ ಲಭ್ಯವಾಗಿರುವುದು ಪ್ರವಾಸಿಗರಿಗೆ ಸಂತಸ ತಂದಿದೆ.

ಬಿಳಿ ಹುಲಿ ಈ ಮುಂಚೆ ಮೈಸೂರು ಮೃಗಾಯಲದಲ್ಲಿತ್ತು. ಈಗ ಬಳ್ಳಾರಿ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ. ಕೆಲ ದಿನಗಳ ಕಾಲ ಹುಲಿಯ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು. ಈಗ ಹುಲಿ ನಿಧಾನಕ್ಕೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ. -ಮಂಜುನಾಥ, ಸಹಾಯಕ ಅರಣ್ಯಾಧಿಕಾರಿ, ವಾಜಪೇಯಿ ಮೃಗಾಲಯ, ಕಮಲಾಪುರ

 

Advertisement

-ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next