Advertisement
ಸಂಜೆ ಏಳು ಗಂಟೆಯಿಂದಲೇ ನಗರದಲ್ಲಿ ಮಳೆ ಶುರುವಾಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಮಧ್ಯರಾತ್ರಿ 2.40ರ ಸುಮಾರಿಗೆ ಒಂದು ಬಾಕ್ಸ್, 3.24 ಸುಮಾರಿಗೆ ಮತ್ತೊಂದು ಬಾಕ್ಸ್ ಬೀಗವನ್ನು ಸ್ಫೋಟಕ ಬಳಸಿ ತೆರೆಯಲಾಯಿತು. ಪ್ರತಿ ಬಾಕ್ಸ್ ನಲ್ಲೂ ಎರಡು ಚೀಲಗಳಲ್ಲಿ ಬಿಳಿ ಬಣ್ಣದ ಪೌಡರ್ ಮಾದರಿಯಲ್ಲಿ ಉಪ್ಪುನಂತಹ ವಸ್ತು ಇರುವುದು ತಿಳಿದು ಬಂದಿದೆ.
Related Articles
Advertisement
ಎಂಎಲ್‌ಎ ಅನುಮಾನ:
ಬೀಗ ಒಡೆಯಲು ಸ್ಫೋಟಕ ಬಳಕೆ ಮಾಡಿದ್ದಾರೆ. ಒಂದೊಂದು ಟ್ರಂಕ್ ನಲ್ಲಿ ಎರಡೆರಡು ಬ್ಯಾಗ್ ಗಳಿವೆ. ಪೇಪರ್ ಹಾಕಿ ಕವರ್ ಮಾಡಿದ್ದಾರೆ. ಬಿಳಿ ಬಣ್ಣದ ಪೌಡರ್ ಪತ್ತೆಯಾಗಿದೆ. ವೈಟ್ ಪೌಡರ್ ಏಕೆ ಉಪಯೋಗಿಸುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.
ದೇವರು ದೊಡ್ಡವನು, ಈ ಹಂತದಲ್ಲಿ ತಡೆ ಹಿಡಿಯುವ ಪ್ರಯತ್ನ ಆಗಿದೆ. ಇದು ಯಾವ ಪೌಡರ್ ಎಂಬ ಬಗ್ಗೆ ರಿಪೋರ್ಟ್ ಬರಬೇಕು. ಇದು ಗಂಭೀರವಾದ ಸಂಗತಿ. ಬಹಳ ಭಾರ ಇದೆ. ಒಂದೊಂದು ಬ್ಯಾಗ್ ಬಹಳ ಭಾರ ಇದೆ. ಬಹಳ ಎಚ್ಚರಿಕೆ ವಹಿಸಬೇಕು. ಇದು ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ. ರಾಜ್ಯ ಸರಕಾರ ಬಹಳ ಗಂಭೀರವಾಗಿ ಪರಿಗಣಿಸಬೇಕು.
ಸಿಕ್ಕಿಬಿದ್ದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸತ್ಯ ಸಂಗತಿ ಹೊರಬರಲಿ. ಮುಚ್ಚಿ ಹಾಕುವ ಪ್ರಯತ್ನ ಆಗಬಾರದು ಎಂದರು.