ಕುಷ್ಟಗಿ : ಈ ಭಾಗದಲ್ಲಿ ಸಹಜವಾಗಿ ಕಂಡು ಬರುವ ಹಸಿರು ಬಣ್ಣದ ಗಿಳಿಗಳ ಪೈಕಿ ಬಿಳಿ ಬಣ್ಣದ ಗಿಳಿ! ಗಮನಾರ್ಹ ಎನಿಸಿದೆ.
ಈಚೆಗೆ ಕುಷ್ಟಗಿ ಪಟ್ಟಣದ ಹೊರವಲಯದ ವಿದ್ಯಾಜ್ಯೋತಿ ಶಾಲಾ ಅವರಣದ ಗಿಡದಲ್ಲಿ ಈ ಬಿಳಿ ಬಣ್ಣದ ಗಿಳಿ ಕಂಡು ಬಂದಿರುವುದು ಅಚ್ಚರಿ ಸೃಷ್ಟಿಸಿದೆ.
ದಿನ ಬೆಳಗಾದರೆ ಹಸಿರು ಗಿಳಿಗಳನ್ನು ನೋಡುವವರು, ಈ ಬಿಳಿ ಬಣ್ಣದ ಗಿಳಿ ಕಂಡು ಅಶ್ಚರ್ಯ ಚಕಿತರನ್ನಾಗಿಸಿದೆ. ಚೆರ್ರಿ ಹಣ್ಣಿಗಾಗಿ ಈ ಗಿಳಿ ಇಲ್ಲಿಗೆ ಬಂದಿತ್ತು. ಇಲ್ಲಿನ ಕಿರಾಣಿ ವರ್ತಕ ಸತ್ಯನಾರಾಯಣ ಕಂದಗಲ್ ಅವರು, ತಮ್ಮ ಮಗನನ್ನು ಸದರಿ ಶಾಲೆಗೆ ಕಳುಹಿಸಲು ಬಂದಾಗ, ಗಿಡದಲ್ಲಿ ಈ ಬಿಳಿ ಬಣ್ಣ ಗಿಳಿ ನೋಡಿದ ಕೂಡಲೇ ತಮ್ಮ ಮೋಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ತೀರ ಅಪರೂಪವೆನಿಸಿದ ಬಿಳಿ ಬಣ್ಣದ ಗಿಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸದರಿ ಚಿತ್ರ ವೈರಲ್ ಆಗಿದೆ.
ಈ ಕುರಿತು ಪಕ್ಷಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ ಪ್ರತಿಕ್ರಿಯಿಸಿ ಇಂತಹ ಬಿಳಿ ಬಣ್ಣದ ಗಿಳಿ ಈ ಭಾಗದಲ್ಲಿರುವುದೇ ಅಪರೂಪವಾಗಿದೆ. ನನಗಿರುವ ಮಾಹಿತಿ ಗಿಳಿಯ ದೇಹದಲ್ಲಿ ವ್ಯತ್ಯಾಸವಾಗಿ ಬಿಳಿ ಬಣ್ಣದಲ್ಲಿರುತ್ತವೆ ಎಂಬುದನ್ನು ಕೇಳಿದ್ದೆ ಎಂದರು.
ಇದನ್ನೂ ಓದಿ : ಉಪ್ಪುಂದ ; ರೈಲು ಢಿಕ್ಕಿ, ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು