Advertisement

ಬಿಳಿಹೊಟ್ಟೆ ಮರ ಹಕ್ಕಿ

12:12 PM Feb 24, 2018 | |

ಇದು ಸದಾ ಮರದ ತುದಿಯಲ್ಲಿ ಕುಳಿತು ಬಾಟಲಿಯಲ್ಲಿ ಗಾಳಿ ಉದಿ ಹೊರಡಿಸುವ ಸಿಳ್ಳಿನಂತೆ -ಕೆಲವೊಮ್ಮೆ ಮೆಲುದನಿಯಲ್ಲಿ, ಕೆಲವೊಮ್ಮೆ ಕರ್ಕಶವಾಗಿ ಕೂಗಿ- ತನ್ನ ಇನಿಯನ ಜೊತೆ ಸಂಭಾಷಿಸುತ್ತದೆ.WHITE Bellied treepie (Dendrocitta leucogastra (Gould)  R- Myna +   

Advertisement

ಬಿಳಿ ಹೊಟ್ಟೆ ಕದುಗ, ಕಂದು ಬೆನ್ನಿನ ಮರ ಹಕ್ಕಿ ಎಂದೂ ಇದನ್ನು ಕರೆಯುತ್ತಾರೆ. ಹೆಚ್ಚು ಚಿರಪರಿಚಿತವಾದ ಭಾರತದ ಕದುಗ ಅಥವಾ ಮರಹಕ್ಕಿಯನ್ನು ಇದು ತುಂಬಾ ಹೋಲುತ್ತದೆ. ಆದರೆ ಈ ಹಕ್ಕಿಯ ಬಾಲ, ಪರಿಚಿತ ಕದುಗ ಹಕ್ಕಿಯ ಬಾಲಕ್ಕಿಂತ ಉದ್ದ ಇದೆ. ಕದುಗ ಹಕ್ಕಿಯ ಬಾಲದ, ಕಪ್ಪು ಗರಿಯಂತೆ ಮೇಲಿನಿಂದ ಕೆಳಗೆ ಕಟ್ಟಾದಂತೆ ಕಾಣುತ್ತದೆ. ಬಾಲದ ತುದಿಯಲ್ಲಿ ಪೂರ್ತಿ ಕಪ್ಪು ಗರಿ ಇದೆ. ಆದರೆ ಈ ಬಿಳಿ ಕದುಗದ -ಹಕ್ಕಿಯ ಬಾಲ ಅದಕ್ಕಿಂತ ಉದ್ದ ಇದೆ.  ಕದುಗಿನ ಹಕ್ಕಿಯ ಬೆನ್ನು, ಬಾಲದ ಪುಕ್ಕದ ಆರಂಭ ಬೊಟ್ಟೆ ಕೇಸರಿ ಮಿಶ್ರಿತ ಹಳದಿ ಬಣ್ಣದಿಂದ ಕೂಡಿದೆ.

ಕದುಗನ ಹಕ್ಕಿಯ ಚುಂಚು, ಕಾಲು, ಕೇಸರಿ ಮಿಶ್ರಿತ ಹಳದಿ ಬಣ್ಣ ಇದೆ. ಆದರೆ ಬಿಳಿ ಕದುಗದ ಕೊಕ್ಕು ಕಪ್ಪಿದೆ.  ಕಾಗೆಯ ಕೊಕ್ಕಿಗಿಂತ ಗಾತ್ರ ಹೆಚ್ಚಿದ್ದು, ಕುಳ್ಳಾಗಿದೆ. ತುದಿಯಲ್ಲಿ ಬಾಗಿ ಚೂಪಾಗಿದೆ. ಇದರಲ್ಲಿ ಇನ್ನೊಂದು ಉಪಜಾತಿ ಸಹ ಪಶ್ಚಿಮ ಘಟ್ಟದ ಭಾಗದಲ್ಲಿ ಇದೆ. ಅದರ ತಲೆ, ಬೆನ್ನು, ಬೂದು ಬಣ್ಣ ಇರುವುದರಿಂದ ಇದನ್ನು -ಬೂದು ಕದುಗ ಎಂತಲೂ ಕರೆಯುತ್ತಾರೆ. ಬಿಳಿಕದುಗದ ಚುಂಚಿನ ಬುಡದಲ್ಲಿ ಮೀಸೆಯಂತೆ ಉದ್ದ ಕೂದಲು ಇದೆ. ಬಾಲದ ಪಾರ್ಶ್ವದ ಕಪ್ಪು ಗರಿಯಲ್ಲಿ ಮೂರು ಕುಚ್ಚು ಇದೆ. ನಡುವೆ ಬಾಲ, ಬುಡದಲ್ಲಿ ಬಿಳಿ ಬಣ್ಣವಿದ್ದು – ತುದಿಗೆ ಬಂದಂತೆ ಕಪ್ಪಾಗಿದೆ.  ರೆಕ್ಕೆಯ ತುದಿಭಾಗ ಕಪ್ಪಗಿದ್ದು -ರೆಕ್ಕೆಯಲ್ಲಿರುವ ಬಿಳಿ ಬಣ್ಣ ಹಾರುವಾಗ ಸ್ಪಷ್ಟವಾಗಿ ಕಾಣುತ್ತದೆ. ಇದು ಹಾರುವಾಗ- ಕಪ್ಪು ಬಿಳಿ ಬೀಸಣಿಕೆಯಂತೆ ಸುಂದರವಾಗಿ ಕಾಣುತ್ತದೆ.ಗಾತ್ರದಲ್ಲಿ ಪಾರಿವಾಳ ಇಲ್ಲವೇ ಮೈನಾ ಹಕ್ಕಿಯಷ್ಟಿದೆ.  ಮುಂದೆಲೆ -ಕುತ್ತಿಗೆ, ಕಪ್ಪು ಬಣ್ಣದಿಂದ ಕೂಡಿದೆ. 

ಇದು ಸದಾ ಮರದ ತುದಿಯಲ್ಲಿ ಕುಳಿತು ಬಾಟಲಿಯಲ್ಲಿ ಗಾಳಿ ಉದಿ ಹೊರಡಿಸುವ ಸಿಳ್ಳಿನಂತೆ -ಕೆಲವೊಮ್ಮೆ ಮೆಲುದನಿಯಲ್ಲಿ, ಕೆಲವೊಮ್ಮೆ ಕರ್ಕಶವಾಗಿ ಕೂಗಿ- ತನ್ನ ಇನಿಯನ ಜೊತೆ ಸಂಭಾಷಿಸುತ್ತದೆ. ಇಲ್ಲವೇ, ಅದನ್ನು ಅನುಸರಿಸಿ, ಮರದಿಂದ ಮರಕ್ಕೆ ಹಾರುತ್ತಾ -ಇಲ್ಲವೇ ಮರದ ಎತ್ತರದ ಟೊಂಗೆಯಮೇಲೆ ಬಗ್ಗಿ ಕುಳಿತು -ಒಳಗೆ ಉಸಿರು ತೆಗೆದುಕೊಂಡು ಬಾಲ ಕೆಳಗೆ ಬಗ್ಗಿಸಿ ಸಿಳ್ಳುಹಾಕುತ್ತದೆ. 

 ಕೀರಲು ದನಿಯಲ್ಲಿ ಕೆಲವೊಮ್ಮೆ- ಕ್ರೇ,ಕ್ರೇ, ಕ್ರೇ, ಕೆಕ್ಕೆ ಕ್ಕೆಕೇ ಎಂದು ಮೂರು ಇಲ್ಲವೇ 4 ಆವರ್ತದಲ್ಲಿ ಕೂಗುವುದರಿಂದ ಇದಕ್ಕೆ ಕೆಕ್ಕೆಕ್ಕೆ ಹಕ್ಕಿ ಎಂಬದು ಹಳ್ಳಿಗರು ಹೆಸರಿಟ್ಟಿದ್ದಾರೆ.  ಇದರ ಬಾಲ  50 ಸೆಂ.ಮೀ ಉದ್ದವಿದೆ.  ಈ ಹಕ್ಕಿಯ ಬಾಲವೇ ಹೆಚ್ಚು ಉದ್ದ ಇದೆ. ಹಾಗಾಗಿ ಇದರ ಇತರ ಪ್ರಬೇಧದ ಹಕ್ಕಿಯಿಂದ ಇದನ್ನು ಬಣ್ಣ ಮತ್ತು ಉದ್ದ ಬಾಲ ನೋಡಿ ಪ್ರತ್ಯೇಕಿಸಬಹುದು. ಪಶ್ಚಿಮ ಘಟ್ಟದ ಪ್ರದೇಶಗಳಾದ ದಾಂಡೇಲಿ, ಕುಮಟಾ, ಮೂರೂರು, ಹೊನ್ನಾವರ, ಸಪ್ಪಿನ ಹೊಸಳ್ಳಿ- ಬಡಾಳದ ಕಾಡಿನಲ್ಲಿ ಮತ್ತು ತಮಿಳುನಾದು ತೆಕ್ಕಟ್ಟು ಪ್ರದೇಶದಲ್ಲಿ ಇವುಗಳನ್ನು ಕಾಣಬಹುದು. ಈ ಪ್ರದೇಶದಲ್ಲಿ ಒಂಟಿಯಾಗಿ, ಜೊಡಿಯಾಗಿ ಕೆಲವೊಮ್ಮೆ -ಚಿಕ್ಕ ಗುಂಪಿನಲ್ಲೂ -ಮರದಿಂದ ಮರಕ್ಕೆ ಹಾರುತ್ತಾ, ತನ್ನ ಭಿನ್ನವಾಗಿ ಕೂಗುತ್ತಿರುತ್ತದೆ. 

Advertisement

ಕೆಲವೊಮ್ಮೆ ಇದರ ಕೂಗು -ಸಿಳ್ಳಿ ಕೇಕೆಯಂತೆ ಕೇಳುತ್ತದೆ. ಇನ್ನು ಕೆಲವೊಮ್ಮೆ ತಮಟೆ ಹೊಡೆದಂತೆ -ಇಲ್ಲವೇ ಗಂಟೆ ಬಾರಿಸಿದಂತೆ ಟಂಟಂ ಎಂದು ಕೂಗುತ್ತದೆ.  ಇದರ ಮಿಲನದ ಸಮಯ,  ಇದರ ದನಿ ಅಧ್ಯಯನಕ್ಕೆ ಒಳ್ಳೆಯ ಸಮಯ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ.
 

Advertisement

Udayavani is now on Telegram. Click here to join our channel and stay updated with the latest news.

Next