ಮಣಿಪಾಲ: ಬಾಲಿವುಡ್ ನಟ ಇರ್ಫಾನ್ ಖಾನ್ ನಟನೆಯ ಹೆಚ್ಚು ಇಷ್ಟವಾದ ಸಿನಿಮಾ ಯಾವುದು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ಶಾಲಿವಾಹನ ಶಾಲಿವಾಹನ:ಡೆಡ್ ಲೈನ್ ಸಿರ್ಫ್ 24 ಗಂಟೆ ವೈದ್ಯಲೋಕದ ಮತ್ತೊಂದು ಮುಖ ಬಿಚ್ಚಿಟ್ಟು, ತಂದೆಯಾಗಿ ನೊಂದು ಪ್ರತಿಕಾರದಿಂದ ಪಾಠ ಕಲಿಸಿ, ದಯೆ ಯಿಂದ ಜವಾಬ್ದಾರಿ ನಿರ್ವಹಿಸುವ ಆದರ್ಶ ವ್ಯಕ್ತಿತ್ವ… ಉತ್ತಮ ಸಂದೇಶ ಚಿತ್ರ.
ರವಿಕುಮಾರ್ ಕೋಟೆಮನೆ: “ಪಾನ್ ಸಿಂಗ್ ತೋಮರ್”ದೇಶ ಕಾಯುವ ಸೈನಿಕನಾಗಿ,ನಂತರ ದೇಶದೊಳಗಿನ,ತನ್ನದೇ ಸಮಾಜ,ದೇಶ ಕಾಯುವ ಸೈನಿಕರಿಗೆ ಕಿಂಚಿತ್ತೂ ಬೆಲೆ ನೀಡದ, ದುಷ್ಟ ವ್ಯವಸ್ಥೆಯ ವಿರುದ್ಧ ಬಂಡೆದ್ದರೂ,ತನ್ನ ಮಗನನ್ನು ಸೈನ್ಯಕ್ಕೆ ಸೇರಿಸಿ, ತನ್ನ ಹೋರಾಟದಲ್ಲಿ ಸೋತು, ಮರಣ ಹೊಂದುವ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ್ದಾರೆ
ಜಿಕೆ ಸಂದೀಪ್ ಭಟ್: ಅವರ ಅಷ್ಟೂ ಸಿನೆಮಾಗಳೂ ಇಷ್ಟ,ಅದ್ಭುತ ನಟ, ಅದರಲ್ಲಿಯೂ ಆರಿಸುವುದಾದರೆ..”ಪಾನ್ ಸಿಂಗ್ ತೋಮರ್” “ಬ್ಲಾಕ್ ಮೇಲ್” “ಹಿಂದಿ ಮೀಡಿಯಂ” “ತಲ್ವಾರ್” “ಕರ್ವಾನ್”
ಲಾಯ್ಡ್ ಕೊರಿಯ: ನಾನಾ ಪಾಟೇಕರ್ ಅವರ ನಂತರ ನನಗಿಷ್ಟವಾದ ನಟ ಇರ್ಫಾನ್… ನಾ ನೋಡಿದ ಇವರ ಎಲ್ಲಾ ಚಿತ್ರಗಳಲ್ಲಿ ಇವರ ನಟನೆ ಅತ್ಯಧ್ಭುತ
ಚಿ. ಮ. ವಿನೋದ್ ಕುಮಾರ್: ತಲ್ವಾರ್.ಇವರು ಎಲ್ಲಾ ಚಿತ್ರಗಳಲ್ಲೂ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ.ಇವರ ಆತ್ಮಕ್ಕೆ ಶಾಂತಿ ದೊರೆಯಲಿ.
ಆರಿಫ್ ಜ್ ಆಜ್: ಎಲ್ಲಾ ಸಿನೆಮಾಗಲು ಇಷ್ಟ ವಿಭಿನ್ನವಾಗಿ ನಟನೆ
ಮೊಹಮ್ಮದ್ ಸಿದ್ದಿಕ್: ಬಿಲ್ಲೂ, ಪಿಕೋ, ಕರೀಬ್ ಕರೀಬ್ ಸಿಂಗಲ್, ಪಾನ್ ಸಿಂಗ್ ತೋಮರ್, ಹಿಂದಿ ಮೀಡಿಯಮ್, ಇಂಗ್ಲೀಷ್ ಮೀಡಿಯಂ ಮತ್ತು ಎಲ್ಲಕ್ಕಿಂತ ಹೆಚ್ಚು ಲಂಚ್ ಬಾಕ್ಸ್.