Advertisement

ಮುಕ್ತಿ ಪಡೆಯಲು ಸುಲಭ ಮಾರ್ಗ ಯಾವುದು?

10:59 AM Dec 08, 2018 | |

ಪರಮ ಪದವನ್ನು ಪಡೆಯುವುದೆಂದರೆ ದೇವರನ್ನು ಸೇರುವುದು. ಅಂದರೆ ಮುಕ್ತನಾಗುವುದು. ದಾಸರು ಹಾಡಿದ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ನೀ ದೇಹದೊಳಗೋ ನಿನ್ನೊಳು ದೇಹವೋ ಎಂಬಂತೆ ದೇವನು ಮಾಯೆಯಾಗಿದ್ದಾನೋ ಅಥವಾ ದೇಹವೇ ಆಗಿದ್ದಾನೋ? ಎಂಬ ಪ್ರಶ್ನೆ ಹುಟ್ಟಿಕೊಂಡಾಗ ಸರ್ವವೂ ಅವನೇ ಆಗಿದ್ದಾನೆ, ಆತ್ಮಸ್ವರೂಪವೂ ಅವನೇ ಎಂದೇ ಪುರಾಣಗಳು, ವೇದಗಳಿಂದ ತಿಳಿಯುತ್ತದೆ. ಮಾನವನು ಗೃಹಸ್ಥಾಶ್ರಮವನ್ನು ದಾಟಿ ವಾನಪ್ರಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಂತೆ ದೇಹ ಸೊರಗುತ್ತ ಹೋಗಿ ಆತ್ಮವು ದೇವರಲ್ಲಿ ಐಕ್ಯ ಹೊಂದುವ ಆಸೆಯನ್ನು ಸಹಜವಾಗಿಯೇ ಇರಿಸಿಕೊಂಡಿರುತ್ತದೆ. ಆದರೆ, ಈ ಪರಮ ಪದವನ್ನು ಸೇರುವುದಾದರೂ ಹೇಗೆ? ಎಂಬ ಚಿಂತೆಗೆ ದೇವತಾಕಾರ್ಯಗಳೇ ದಾರಿ ಎಂಬ ಉತ್ತರವನ್ನು ಕಂಡುಕೊಂಡು ಯಜ್ಞ, ಯಾಗಾದಿ ಪೂಜೆ-ಪುನಸ್ಕಾರಗಳನ್ನು ಮಾಡಿಸುವುದನ್ನು ನೋಡಿದ್ದೇವೆ. ಇದೂ ಕೂಡ ದೇವರನ್ನು ಸೇರಲು ಇರುವ ಒಂದು ಮಾರ್ಗವಾಗಿದೆ. ಆದರೆ ತುಂಬಾ ಸುಲಭವಾದ ಇನ್ನೊಂದು ಮಾರ್ಗವೂ ಇದೆ!

Advertisement

ಮಧಾºಗವತದ ಏಕಾದಶ ಸ್ಕಂಧದ ಹನ್ನೆರಡನೆಯ ಅಧ್ಯಾಯದಲ್ಲಿ ಅತಿ ಸುಲಭವಾಗಿ ದೇವರನ್ನು ಸೇರುವುದು ಹೇಗೆಂದು ಹೇಳಲಾಗಿದೆ. ಈ ಸುಲಭ ಹಾಗೂ ಸರಳವಾದ ಮಾರ್ಗವೇ ಸತ್ಸಂಗ.
ಸತ್ಸಂಗ ಎಂಬ ಪದದ ಅರ್ಥ ಸಜ್ಜನರ ಸಹವಾಸ ಅಥವಾ ಒಳ್ಳೆಯವರ ಗೆಳೆತನ. ಸನ್ಮಾರ್ಗಿಗಳ ಸ್ನೇಹವೂ ಹೌದು. ಮಧಾºಗವತದ ಈ ಅಧ್ಯಾಯದಲ್ಲಿ ಶ್ರೀ ಕೃಷ್ಣನು ಯಜ್ಞ, ಯಾಗ, ತಪಸ್ಸು, ಮಂತ್ರ,
ಧರ್ಮ ಮೊದಲಾದ ಸಾಧನೆಗಳಿಗಿಂತಲೂ ಮತ್ತು ಇವುಗಳಿಂದ ಪಡೆಯಲಾಗದಂತಹ ದೇವರ ಸಾನ್ನಿಧ್ಯ ಅಥವಾ ನನ್ನನ್ನು ಸೇರಲು ಸತ್ಸಂಗವೇ ಸುಲಭಮಾರ್ಗವೆಂದಿದ್ದಾ ನೆ. ಎಲ್ಲ ಯುಗಗಳಲ್ಲಿಯೂ ರಾಕ್ಷಸರೂ, ಪಶುಪಕ್ಷಿ$ಗಳೂ, ಗಂಧರ್ವಅಪ್ಸರೆಯರೂ ಮೊದಲಾದವರೆಲ್ಲರೂ ಸತ್ಸಂಗದಿಂದಾಗಿಯೇ ನನ್ನನ್ನು ಸೇರಿರುವರು.

ಮಾನವರಲ್ಲಿಯೂ ಬಹಳಷ್ಟು ಜನರು  ಸತ್ಸಂಗದಿಂದಲೇ ಪರಮ ಪದವನ್ನು ಪಡೆದುಕೊಂಡಿದ್ದಾರೆ. ವೃತಾಸುರ, ಬಲಿ, ಪ್ರಹ್ಲಾದ, ವಿಭೀಷಣ, ಜಟಾಯು, ಹನುಮಂತ, ಸುಗ್ರೀವ, ಜಾಂಬವಂತ ಮೊದಲಾದವರು ಇದಕ್ಕೆ ಉದಾಹರಣೆಯಾಗಿದ್ದಾರೆ. ಸತ್ಸಂಗವಿದ್ದಲ್ಲಿ ವಿಷಯಾಸಕ್ತಿಗಳು ನಾಶವಾಗಿ ಸಹಜವಾಗಿಯೇ ದೃಢವಾದ ಭಕ್ತಿ ಬೆಳೆಯುವುದರಿಂದ ಪರಮ ಪದವನ್ನುಪಡೆಯುವುದು ಸುಲಭವೆಂದು ಶ್ರೀಕೃಷ್ಣ ಇಲ್ಲಿ ಹೇಳಿದ್ದಾನೆ.

ಲೋಕದಲ್ಲೊಂದು ಮಾತಿದೆ: ಸಜ್ಜನರ ಸಂಗವದು ಹೆಜ್ಜೇನು  ಸವಿದಂತೆ, ದುರ್ಜನ ಸಂಗ ಹೆಜ್ಜೇನು  ಕಡಿದಂತೆ ಎಂಬಂತೆ ನಮ್ಮ ಜೀವನವು ಸನ್ಮಾರ್ಗದಲ್ಲಿದೆಯೋ ಅಥವಾ ದುರ್ಮಾರ್ಗದಲ್ಲಿದೆಯೋ ಎಂಬುದಕ್ಕೆ ಸಾಕ್ಷಿ ನಮ್ಮ ಸಂಗವೇ ಆಗಿದೆ. ಇದು ಮುಖ್ಯವಾಗಿ ಮನಸ್ಸಿನ ಚಂಚಲತೆಯ ಸೂಚಕ. ಕೆಟ್ಟದೊಂದನ್ನು ಕಾಣದೇ ಇದ್ದವನು ಕೆಟ್ಟವರ ಸಹವಾಸದಿಂದ ಕೆಟ್ಟ ಸಂಗತಿಗಳತ್ತ ಒಲವು ತೋರಬಹುದು. ಆಗ ಜೀವನಕ್ರಮವೂ ವಿಹಿತವಾದ ಮಾರ್ಗದಲ್ಲಿ ಸಾಗತೊಡಗುತ್ತದೆ. ಸಹಜವಾಗಿಯೇ ಪಾಪಕಾರ್ಯಗಳಿಗೆ ಅವಕಾಶ ದೊರೆಯುವಂತಾಗುತ್ತದೆ. ಇದರಿಂದ ಪಾರಾಗಲು ಯಾವ ಯಜ್ಞಯಾಗಗಳಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಭಕ್ತಿಯೇ ಇರದು. ನಿಶ್ಚಲವಾದ ಭಕ್ತಿಗೆ ಮನಸ್ಸು ಶುದ್ಧವಾಗಿರಬೇಕು. ಆಗ ಮಾತ್ರ ಪೂಜಾದಿಗಳಿಂದ ಫ‌ಲ ಸಿಗುತ್ತದೆ. ಶುದ್ಧವಾದ ಮನಸ್ಸು ಸತ್ಸಂಗದಿಂದ ಮಾತ್ರ ಸಾಧ್ಯ.

ಸತ್ಸಂಗ ಎಂಬುದು ಕೇವಲ ಒಳ್ಳೆಯವರ ಸಂಗ ಎಂಬರ್ಥಕ್ಕೆ ಮೀಸಲಾಗಿರದೆ ಒಳ್ಳೆಯ ತಣ್ತೀಗಳನು,° ಯೋಚನೆಗಳನ್ನು ಹೊಂದಿರುವುದೂ ಆಗಿವೆ. ದೇವನ ಸಂಗವನ್ನು ಬಯಸುವುದೂ ಸತ್ಸಂಗದ ರೂಪವೇ. ವಿಷಯಾಸಕ್ತಿಗಳನ್ನು ಕಡೆಗಣಿಸಿ ಸತ್ಸಂಗವನ್ನು ಹೊಂದಿ ಬದುಕಿದರೆ ಯಾವ ಮಹಾನ್‌ ಯಾಗದಿಂದಲೂ ದೊರೆಯದ ಪರಮ ಪದವನ್ನು ಹೊಂದುವುದು ಖಂಡಿತ.

Advertisement
Advertisement

Udayavani is now on Telegram. Click here to join our channel and stay updated with the latest news.

Next