Advertisement

ಯಾವುದು ಒಳ್ಳೆಯದು …ತೆಂಗಿನ ಎಣ್ಣೆಯನ್ನು ಚತುರವಾಗಿ ಉಪಯೋಗಿಸಿ 

04:06 PM Jul 14, 2021 | Team Udayavani |

ತೆಂಗಿನ ಎಣ್ಣೆ ಬಹಳ ಮಾತುಕತೆಯಲ್ಲಿ ಇರುವ ಒಂದು ಪದಾರ್ಥ . ಇತ್ತೀಚಿಗೆ ಬಹಳ ಚರ್ಚೆಗೋಳಗಾಗುವ ವಿಷಯವೇನೆಂದರೆ ತೆಂಗಿನ ಎಣ್ಣೆಯೋ, ಒಲೀವ್ ಎಣ್ಣೆ ಅಥವಾ ಇನ್ನಾವುದಾದರೂ ಎಣ್ಣೆಗಳಲ್ಲಿ ಯಾವುದು ಒಳ್ಳೆಯದು ಎಂದು. ಆದರೆ ಯಾವತ್ತೂ ಅದಕ್ಕೆ ಒಂದು ಸೂಕ್ತ ಪರಿಹಾರ ದೊರಕದು. ಏಕೆಂದರೆ, ಪ್ರತಿಯೊಂದು ಉತ್ಪನ್ನಗಳಿಗೆ ಅದರದೇ ಆದ ಸುಗುಣ ಹಾಗೂ ದುರ್ಗುಣಗಳು ಇರುತ್ತದೆ.

Advertisement

ಆಹಾರ ವಸ್ತುಗಳನ್ನು ಮತ್ತು ಪದ್ಧತಿಗಳನ್ನು ಭೌಗೋಳಿಕವಾಗಿ ವಿಂಗಡಿಸಲ್ಪಡುತ್ತದೆ. ಉದಾಹರಣೆಗೆ, ಉತ್ತರ ಭಾರತದಲ್ಲಿ, ಗೋಧಿ ಯಥೇಚ್ಚವಾಗಿ ಉಪಯೋಗಿಸಲ್ಪಡುತ್ತದೆ ಹಾಗೂ ದಕ್ಷಿಣ ಭಾರತದಲ್ಲಿ, ಅಕ್ಕಿ. ಇನ್ನು ದಕ್ಷಿಣ ಕನ್ನಡದಲ್ಲಿ, ಕುಚ್ಚಿಲು ಅಕ್ಕಿ ಬಳಸಿದರೆ, ಘಟ್ಟದ ಭಾಗದಲ್ಲಿ, ರಾಗಿ ಹಾಗೂ ಉತ್ತರ ಕರ್ನಾಟಕದಲ್ಲಿ ಜೋಳ. ಹೀಗೆ ಆಹಾರ ಆಯಾ ಪ್ರದೇಶಗಳಲ್ಲಿ ಯಾವುದು ಹೆಚ್ಚಾಗಿ ಬೆಳೆಯುವುದೋ ಅದೇ ಅಲ್ಲಿನ ಪ್ರಧಾನ ಆಹಾರ. ಹಾಗೆಯೇ, ಕೇರಳ ಹಾಗೂ ದಕ್ಷಿಣ ಕನ್ನಡದಲ್ಲಿ, ತೆಂಗಿನ ಎಣ್ಣೆ ಯಥೇಚ್ಚವಾಗಿ ಬಳಸಲ್ಪಡುತ್ತದೆ.

ತೆಂಗಿನ ಎಣ್ಣೆ ಏಕೆ ಬಳಸಬೇಕು?
*ಅದರಲ್ಲಿ medium chain fatty acids ಇರುವುದರಿಂದ, ಅದು ನಮ್ಮ ಯಕ್ರುತನಲ್ಲಿ ಸುಲಭವಾಗಿ ಚಯಾಪಚಯವಾಗಿ, ನಮ್ಮ ದೇಹದಲ್ಲಿ ಉಪಯೋಗಿಸಲ್ಪಡುವುದು.
*ಇದು ನಮ್ಮ ರಕ್ತದಲ್ಲಿ ಒಳ್ಳೆ ಕೊಲೆಸ್ಟೆರೋಲ್ ಹೆಚ್ಚಿಸಿ ಕೆಟ್ಟ ಕೊಲೆಸ್ಟೆರೋಲ್ ಅನ್ನು ತಗ್ಗಿಸುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುವುದು.
*ಲಾರಿಕ್ ಆಸಿಡ್ (lauric acid) ಎಂಬ ಅಂಶವು ಜೀವಿರೋಧಿ (antibacterial) ಗುಣ ಹೊಂದಿರುವುದು. ಇದರಿಂದಾಗಿಯೇ, ನಮ್ಮಲ್ಲಿ, ಗಾಯಗಳಿಗೆ, ಅಥವಾ ಚರ್ಮ ರೋಗಗಳಲ್ಲಿ, ತೆಂಗಿನ ಎಣ್ಣೆ ಹಚ್ಚುವ ಅಭ್ಯಾಸ ಇರುವುದು.
*ಬೆಳಿಗ್ಗೆ, ಒಂದು ಚಮಚ ತೆಂಗಿನ ಎಣ್ಣೆ ಬಾಯಲ್ಲಿ ಇಟ್ಟು ಬಾಯಿ ಮುಕುಳಿಸುವುದರಿಂದ ಹಲ್ಲು ಮತ್ತು ವಸಡಿನ ತೊಂದರೆ ಭಾದಿಸದು.
*ವಾರಕ್ಕೊಮ್ಮೆ ಈ ಎಣ್ಣೆ ಹಚ್ಚಿ, ಒಂದರ್ಧ ತಾಸಿನ ನಂತರ ಬಿಸಿ ನೀರಲ್ಲಿ ಸ್ನಾನ ಮಾಡುವುದರಿಂದ, ಚರ್ಮ ಕಾಂತಿಯುತವಾಗುವುದು ಮತ್ತು ಅಗತ್ಯ ತೇವಾಂಶವನ್ನು ಕಾಪಾಡುವುದು.
*ವಾರದಲ್ಲಿ 2 ಬಾರಿಯಂತೆ, ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪು ಆಗುವುದು, ನೆತ್ತಿಯ ಆರೋಗ್ಯ ವೃದ್ಧಿಸುವುದು.

ಯಾರು ಉಪಯೋಗಿಸಬಾರದು?
*ಯಾರು dyslipidemia ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆಯೋ, ಅವರು ಒಂದು ದಿನಕ್ಕೆ 5 – 8 ml ಗಿಂತ ಹೆಚ್ಚು ಬಳಸಬಾರದು.

*ತೂಕ ತಗ್ಗಿಸಲು ಬಯಸುತ್ತಿರುವವರಿಗೆ ಇದು ಅಷ್ಟು ಸೂಕ್ತವಲ್ಲ.

Advertisement

ತೆಂಗಿನ ಎಣ್ಣೆಯಲ್ಲಿ ಏನಿದೆ?

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ತೆಂಗಿನ ಎಣ್ಣೆ ಉಪಯೋಗಿಸಿ ಮಾಡಿದ ಅಡುಗೆ ರುಚಿಕರವಾಗಿರುತ್ತದೆ. ಹಾಗೆಯೇ ಅದು ನಮ್ಮ ದೇಹಕ್ಕೆ ಅಗತ್ಯವಿದ್ದ ಪೋಷಕಾಂಶಗಳನ್ನು ಹೊಂದಿರುತ್ತದೆ . ಹಾಗೆಂದು ಅದು ತುಪ್ಪ, ಮೊಸರು, ಇತ್ಯಾದಿ ಆಹಾರ ಪದಾರ್ಥಗಳಿಗೆ ಪರ್ಯಾಯವಲ್ಲ. ಇದು ನಮ್ಮ ದೈನಂದಿನ ಆಹಾರದಲ್ಲಿ ಒಂದು. ಹೆಚ್ಚಿನ ವಿಷಯ ಅಥವಾ ನಿಮಗೆ ಎಷ್ಟು ಸೂಕ್ತ ಎಂದು ನಿಮ್ಮ ವೈದ್ಯರಲ್ಲಿ ಮಾತನಾಡಿ ನಿರ್ಧರಿಸುವುದು ಸೂಕ್ತ.

ಡಾ. ಭಾವನಾ. ಎಂ,
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯೆ,
bhavanabaradka@gmail.com

Advertisement

Udayavani is now on Telegram. Click here to join our channel and stay updated with the latest news.

Next