Advertisement
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಹೇಳಿರುವುದನ್ನು ಗಮನಿಸಿದರೆ ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ. ಶಾಸಕ ಗೌರಿಶಂಕರ್‌ಗೆ ಇರುವ ನೀರನ್ನು ಹರಿಸಿಕೊಳ್ಳಲು ಶಕ್ತಿ ಇಲ್ಲ. ನರ ಸತ್ತು ಹೋಗಿದೆ ಎಂದು ಹರಿಹಾಯ್ದರು. ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಕುಡಿಯುವ ನೀರಿಗಾಗಿ ಅನುಷ್ಠಾನಗೊಂಡಿದೆ. ಕೂಡಲೇ ಅಗತ್ಯ ಇರುವಷ್ಟು ನೀರನ್ನು ಹರಿಸಬೇಕು.
Related Articles
ಇದನ್ನೂ ಓದಿ:- ಹಗ್ಗ-ಸೀಮೆ ಎಣ್ಣೆ ಹಿಡಿದು ಗ್ರಾಮಸ್ಥರ ಪ್ರತಿಭಟನೆ
Advertisement
ಕೆರೆಗಳನ್ನು ನೋಡಿದರೆ ನೋವಾಗುತ್ತಿದೆ: ಶಾಸಕ ಗೌರಿಶಂಕರ್‌ಗೆ ಹೆಬ್ಬೂರು- ಗೂಳೂರು ಏತ ನೀರಾ ವರಿ ಮೂಲ ಯೋಜನೆ ಬಗ್ಗೆಯೇ ಅರಿವಿಲ್ಲ. ಆದರೆ ನಾವು ಈ ಯೋಜನೆ ಅನುಷ್ಠಾನವಾಗುವವರೆಗೂ ನಿದ್ದೆ ಮಾಡಿಲ್ಲ. ಪ್ರತಿ ಹಂತದ ಮಾಹಿತಿಯೂ ತಮಗೆ ಗೊತ್ತಿದೆ. ಪಕ್ಕದ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಕೆರೆಗಳು ಹೇಮಾವತಿ ನೀರಿನಿಂದ ತುಂಬಿ ಕಂಗೊಳಿಸುತ್ತಿವೆ. ನಮ್ಮ ಕ್ಷೇತ್ರದ ಕೆರೆಗಳು ಖಾಲಿ ಇರುವುದನ್ನು ನೋಡಿದರೆ ನೋವಾಗುತ್ತದೆ ಎಂದರು.
ದುರುದ್ದೇಶ: ಹೇಮಾವತಿ ನದಿ ನೀರು ಕ್ಷೇತ್ರಕ್ಕೆ ಹರಿ ಯುವುದು ಅವರಿಗೆ ಬೇಕಾಗಿಲ್ಲ. ಹೀಗಾಗಿಯೇ ಯೋಜನೆಯೇ ಅವೈಜ್ಞಾನಿಕ ಎಂದು ಹೇಳುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸಿ ಮಕ್ಮಾಲ್ ಟೋಪಿ ಹಾಕುತ್ತಿದ್ದಾರೆ. ಯೋಜನೆಯನ್ನು ಹಾಳು ಮಾಡುವ ದುರುದ್ದೇಶದಿಂದಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಮುಖಂಡ ರಾದ ನರಸಿಂಹಮೂರ್ತಿ, ಗೂಳೂ ರು ಶಿವ ಕುಮಾರ್, ವಿಜಯಕುಮಾರ್, ಸಿದ್ದೇಗೌಡ, ಪ್ರಭಾಕರ್, ಅರಕೆರೆ ರವೀಶ್ ಮತ್ತಿತರರಿದ್ದರು.
“ಗ್ರಾಮಾಂತರ ಕ್ಷೇತ್ರಕ್ಕೆ ಸಮರ್ಪಕವಾಗಿ ಬರಬೇಕಾಗಿರುವ ಹೇಮಾವತಿ ನೀರು ಬಿಡಿಸಲು ತಾಕತ್ ಇಲ್ಲದಿದ್ದರೆ ರಾಜೀನಾಮೆ ನೀಡಲಿ. ನೀರು ಬಿಡಿಸುವ ಯೋಗ್ಯತೆ ಇಲ್ಲದವರಿಗೆ ಶಾಸಕ ಸ್ಥಾನ ಏಕೆ ಬೇಕು. ಶಾಸಕರು ಮೊದಲು ಕ್ಷೇತ್ರಕ್ಕೆ ನೀರು ಹರಿಸಿಕೊಳ್ಳುವತ್ತ ಚಿತ್ತ ಹರಿಸಲಿ. ಕ್ಷೇತ್ರಕ್ಕೆ ನೀರು ಹರಿಸಬೇಕು ಎಂಬುದನ್ನು ನಮ್ಮ ಉದ್ದೇಶವಷ್ಟೆ.” – ಬಿ.ಸುರೇಶ್ಗೌಡ, ಮಾಜಿ ಶಾಸಕ.