Advertisement

ಯಾವ ಯಾವ ರತ್ನಗಳನ್ನು ಧರಿಸಿದರೆ ಯೋಗ?

04:13 PM Jan 27, 2018 | |

  ಹಿಂದಿನ ವಾರ ರತ್ನಗಳ ಬಗೆಗೆ ಮತ್ತು ಮನುಷ್ಯನ ಜೈವಿಕ ಕ್ರಿಯೆಗಳ ಏರಿಳಿತಗಳಲ್ಲಿ ಶಕು¤ ತುಂಬದೇ ಬೇಕಾದ ಅನಿವಾರ್ಯತೆಗಳು ಉದ್ಬವಿಸಿದಾಗ ರತ್ನಗಳು ಅನಿವಾರ್ಯತೆಗಳು ಬಗೆಗೆ  ಚರ್ಚಿಸಿದ್ದೆ. ಈ ಸಲದ ವಿಚಾರಗಳನ್ನು ಯಾವ ರತ್ನಗಳು ಯಾವ ಗ್ರಹಗಳ ಬಗೆಗೆ, ಯಾವ ಸಂದರ್ಭಗಳನ್ನು ಯುಕ್ತವಾಗಿ ಗಟ್ಟಿಗೊಳಿಸಲು, ಯಾವುದನ್ನು ಶಮನ ಗೊಳಿಸಲು ಎಂಬುದನ್ನು ವಿಶ್ಲೇಷಿಸೋಣ. ಭಾರತೀಯ ಜ್ಯೋತಿಷ್ಯಶಾಸ್ತ್ರ ಕೇವಲ ಭವಿಷ್ಯತ್ತನ್ನು ತಿಳಿಸಲು ತನ್ನನ್ನು ನಿರೂಪಿಸಿಕೊಂಡ ಶಾಸ್ತ್ರ ಎಂಬುದಾಗಿ ಜನರಲ್ಲಿ ಸಾಮಾನ್ಯವಾದ ಅಭಿಪ್ರಾಯಗಳಿವೆ. ಆದರೆ ಇಂದಿನ ಮಾನಶಾಸ್ತ್ರಜ್ಞರು ನಿಖವರಾಗಿ ಒದಗಿಸಲು ಸಾಧ್ಯವಾಗದ ಸೂಕ್ಷ್ಮಗಳನ್ನು, ಮನುಷ್ಯನ ವ್ಯಕ್ತಿತ್ವ, ವರ್ಚಸ್ಸು, ಮಾನಸಿಕ ದಾರ್ಡ್ಯತೆ, ಒತ್ತಡಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಸೂಕ್ತ ಬೆಳೆಕನ್ನು ಒದಗಿಸಿ ಕೊಡುತ್ತದೆ. ಇಂದಿನ ದಿನಗಳಲ್ಲಿ ಭಾರತೀಯರ ಬಗೆಗೆ ಹೊರ ದೇಶದವರು ಅಸೂಯೆ ಪಡುವಂತಿದ್ದ ಅವಿಭಕ್ತ ಕುಟುಂಬ ಕಲ್ಪನೆಯೇ ನಾಶವಾಗುತ್ತಿದೆ ಅಥವಾ ನಾಶವಾಗಿದೆ. ಧರ್ಮೇಚ, ಅರ್ಥೈಚ, ಕಾಮೇಚ ನಾತಿ ಚರಾಮಿ… ಎಂಬು ಧ್ಯೇಯ ವಾಕ್ಯದ ದಾಂಪತ್ಯ ಸಂಪನ್ನತೆಯೇ ಕನ್ನಡಿಯ ಹರಳು ಒಡೆದಂತೆ ತುಂಡು ತುಂಡಾಗಿದೆ. ಬೇರು ಭಾರತೀಯತೆ ತುಂಬಿದ್ದು, ಚಿಗುರು ಅಧುನಿಕವಾದರೂ ಶಿಥಿಲ ಆವರಣಗಳನ್ನು ಮೈಗೂಡಿಸಿಕೊಂಡ ದುರ್ಭರತೆಗಳದ್ದು. ಹೆಳವನ ಮೇಲೆ ಕುರುಡನ ಸವಾರಿಯಂತಿದೆ.

Advertisement

 ಆಲ್‌ ಬರ್ಟ್‌ ಐನ್‌ಸ್ಟೈನ್‌ ಶ್ರೇಷ್ಠ ಮಾನವತಾವಾದಿಗಯಾದುದರ ಹಿನ್ನೆಲೆಗಳೇನು? ಭಾವುಕತೆಗಳು ಅವನ ಜೀವನದ ಅತಿ ಸೂಕ್ಷ್ಮ ಶಕ್ತಿ ಹಾಗೂ ಮಿತಿ ಎರಡೂ ಆಗಿತ್ತೇ?  ಕೌಟುಂಬಿಕ ವಿಚಾರಗಳಲ್ಲಿನ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದರೆ ಇತ್ಯಾದಿ ಎಲ್ಲ ಐನ್‌ಸ್ಟೈನ್‌ ಪಚ್ಛೆ ಹರಳನ್ನು ಹಾಕಬೇಕಾದ ಅನಿವಾರ್ಯತೆಗಳನ್ನು ಸೂಚಿಸುತ್ತಿದ್ದವೆ? ಹಾಗೆಯೇ ವೈವಾಹಿಕ ಜೀವನದ ಸಂದರ್ಭವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಅದೇಕೆ ಸೂಕ್ಷ್ಮ ಒಂದಕ್ಕೆ ಕಟ್ಟಿರಿಸಿಗೊಂದಲ ಮೂಡಿಸಿತು? ಕ್ರಾಂತಿಕಾರಕ ಬುದ್ಧಿ, ಅನಪೇಕ್ಷಿತ ಪ್ರತಿರೋಧಗಳನ್ನುಂಟು ಮಾಡುವ ವಿಷಮ ಶಕ್ತಿಗಳನ್ನು ಎದುರು ಹಾಕಿಕೊಂಡೇ ತೀರುವ ಛಲ ಇತ್ಯಾದಿ ಉತ್ತಮವಾದ ಹವಳವನ್ನು ಧರಿಸಿದ್ದಲ್ಲಿ ಇನ್ನಿಷ್ಟು ಯಶಸ್ಸನ್ನು ಸಂಪಾದಿಸಿಕೊಡುವಲ್ಲಿ, ಸ್ವಕೀಯರೇ ಹಿತ ಶತ್ರುಗಳಾಗಿ ಪರಿವರ್ತನಗೊಳ್ಳುವುದನ್ನು ನಿಯಂತ್ರಿಸುವಲ್ಲಿ ಸಫ‌ಲವಾಗುತ್ತಿತ್ತೇ? ಸತ್ಯ. ಪ್ರತಿ ವ್ಯಕ್ತಿಯ ಜೀವ ರಸಾಯನ ಪಂಚಭೂತಾತ್ಮಕವಾದ್ದು. ಈ ಪಂಚಭೂತಾತ್ಮಕವಾದ್ದನ್ನು ಜೀನ್‌ಗಳಿಂದ ಒದಗಿ ಬರುತ್ತವೆ. ಪಿತೃ ಪಿತಾಮಹರ ವಾಹಿನಿ ತಲೆಮಾರಿನಿಂದ ತಲೆಮಾರಿನವರೆಗೆ ಸಾಗಿಬರುತ್ತವೆ. ಕೌತುಕಮಯವಾಗಿದೆ ಜೀವನ. ಜನ್ಮಜನ್ಮಾಂತರಗಳ ಯಾವುದೋ  ವಾಸನಾ ಫ‌ಲ ಸಿಂಹಕ್ಕೆ ಕನಿಕರ. ಇನ್ನು ಮನುಷ್ಯರ ಪಾಡೇನು ಹಾಗಾದರೆ? 

 ಮಾಣಿಕ್ಯ

 ಮಾಣಿಕ್ಯವನ್ನು ಸೂರ್ಯನ ಸಂಬಂಧವಾಗಿ ಧರಿಸಬೇಕಾಗುತ್ತದೆ. ಹೀಗೆಂದ ಮಾತ್ರಕ್ಕೆ ಸೂರ್ಯನ ಬಗೆಗೆ ಎಂದು ಜನ್ಮ ಕುಂಡಲಿಯ ವಿಶ್ಲೇಷಣೆ ಆಗದೆಯೇ ಧರಿಸಿ ಬಿಡುವುದು ಸರ್ವಥಾ ಸಲ್ಲ. ಕ್ರಿಕೆಟ್‌ ವಿಚಾರದಲ್ಲಿ ಹೇಳುವುದಾದರೆ ಸಚಿನ್‌  ತೆಂಡೂಲ್ಕರ್‌ ಮಾಣಿಕ್ಯ ಧರಿಸುವುದು ಸೂಕ್ತ. ಅವರು ನಿವೃತ್ತ ಗೊಳ್ಳುವ ಮೊದಲು ಈ ಕೆಲಸ ಮಾಡಿದ್ದರೆ ಒಳಿತಿತ್ತು. ಗಮನಿಸಿ, ಸಚಿನ್‌ ಹೆಲ್ಮೆಟ್‌ ತೆಗೆದು ಆಕಾಶಕ್ಕೆ ಮುಖ ಮಾಡುತ್ತಿದ್ದದ್ದನ್ನು ನೋಡಿರಬಹುದು. ಅವರ ಸೂರ್ಯ ಒಂದು ವಿಧದಲ್ಲಿ ಶುಕ್ರನ ಜೊತೆಗಾರಿಕೆಯಿಂದಾಗಿ ದುರ್ಬಲನಾದರೂ ಸೂರ್ಯನ ಜೊತೆಗೆ ಗೂಡಿ ಶುಕ್ರ ಒದಗಿಸಿದ ರಾಜಯೋಗದ ಶಕ್ತಿ ಸಾಮಾನ್ಯ ವಿಷಯವಲ್ಲ. ಸಚಿನ್‌ ಸೂರ್ಯನನ್ನು ಗಗನದಲ್ಲಿ ಹುಡುಕಿ ನೋಡುತ್ತಿದ್ದುದು ಏನೋ ಒಂದು ತನ್ನ ಸೆ¾„ಲ್‌ ನಿರ್ಮಾಣಕ್ಕೆ ಆಗಿರಲಿಲ್ಲ. ಸೂಕ್ತವಾದರೂ ಅವರ ಜಾತಕದ ಸೂರ್ಯನ ಅನುಪಮತೆಯ ಬಗೆಗೆ ತಿಳಿಸಿದ್ದರು. ಧೈರ್ಯದಿಂದ ನುಗ್ಗುವ ಮನೋಬಲ ಚಿಕ್ಕಂದಿನಿಂದಲೇ ಒದಗಿ ಬಂದಿದ್ದರಿಂದ ಸಚಿನ್‌ ಆಕಾಶವನ್ನು ವ್ಯರ್ಥಗೊಳಿಸಲಿಲ್ಲ. ಹಾಗೆಂದು ಮಾಣಿಕ್ಯ ಅವರಿಗೆ ಯುಕ್ತ ಎಂದು ಅದು ಎಂ..ಎಸ್‌. ಧೋನಿಯವರಿಗೆ ಸೂಕ್ತವಾಗದು. ಅವರಿಗೆ ಸೂರ್ಯ ದುಷ್ಟನಾದರೂ ಕೀರ್ತಿ ಒದಗಿಸುವ ಅನನ್ಯತೆ ಹೊಂದಿದ್ದಾನೆ. ಇಷ್ಟಾದರೂ ಮಾಣಿಕ್ಯ ದೋನಿಯವರಿಗೆ ನಿಷಿದ್ಧ. ಅದನ್ನುಧರಿಸಿದರೆ ಅವರಿಗೆ ಹಿನ್ನಡೆಗಳೇ ಸಾಧ್ಯ. ಹಾಗೆಂದು ವೀರೇದಂದ್ರ ಸೆಹ್ವಾಗ್‌ ಗೆ ಮಾಣಿಕ್ಯವೇ ಪರಮಭೂಷಣ. ಅವರ ಜಾತಕದ ಸೂರ್ಯನ ಪಾಲಿಗೆ ಮಾಣಿಕ್ಯ ಅಪೇಕ್ಷಣೀಯ. ಸಚಿನ್‌ ಆಟವನ್ನು ಸೆಹ್ವಾಗ್‌ ಆದರಿಸಿದರು. ಸಚಿನ್‌ರನ್ನೂ ಮೀರಿಸಿದ ಶಕ್ತಿ ಅವರ ಬ್ಯಾಂಟಿಂಗ್‌ಗೆ ಇತ್ತು. ಆದರೂ ಸಚಿನ್‌ ಸಚಿನ್‌ ಆದರು. ಸೆಹ್ವಾಗ್‌ ಸಚಿನ್‌ ಆಗಲಿಲ್ಲ. ಏನೋ ಇಷ್ಟು ಕಡಿಮೆಯೇ ಆಯ್ತು. ಇದು ವಿಧಿ. ಸೆಹ್ವಾಗ್‌ರನ್ನು ಶನೈಶ್ಚರ ಹಾಗೂ ರಾಹು ಕಾಡಿದ್ದರು. 

ಮುತ್ತು
ಮುತ್ತುಗಳು ಚಿಪ್ಪಿನ ಕಲ್ಲಿನಲ್ಲಿ ಮರಳುಗಟ್ಟಬೇಕು. ಚಂದ್ರನ ಹದಿ ಬಣ್ಣ ನಮಗೆ ಪೃಥ್ವಿಯಿಂದ ಹೇಗೆ ಗೋಚರಿಸುತ್ತದೋ ಅಂಥ ಬಣ್ಣದಿಂದ ಕೂಡಿದ ಸಂಪನ್ನ ಮುತ್ತುಗಳು ಈ ಚಿಕ್ಕ ಚಿಪ್ಪಿನ ಪ್ರಾಣಿಯ ಮೂಲಕ ಸೃಷ್ಟಿಗೊಳ್ಳುವಂಥದ್ದು. ಮುತ್ತುಗಳೊಳಗೋ ಬಹಳ ರೀತಿಯ ಮುತ್ತುಗಳಿವೆ. ಆದರೆ ಜಯ್‌ಸ್ಟನ್‌ ಜನ್ಯ ಮುತ್ತುಗಳು ಉತ್ತಮವಾದದ್ದು. ಇತ್ತೀಚೆಗೆ ಕಲ್ಚರ್ಡ್‌ ಮುತ್ತುಗಳು ( ಕೃತಕವಾಗಿ ಜಯ್‌ಸ್ಟರ್‌ನಲ್ಲಿ ಘನೀಭವಿಸಿದ ಹಾಗೆ) ಬರುತ್ತದೆ. ಇದು ದಧಿ ಶಂಖ ತುಷಾರಾಭಾಂ ಆದ ಚಂದ್ರನನ್ನು ಸೂಕ್ತವಾಗಿ ಸಂಭ್ರಮಿಸುವಂಥದ್ದಲ್ಲ. ಮುತ್ತುಗಳ ಸೃಷ್ಟಿಯ ಬಗೆಗೆ ಅನೇಕಾನೇಕ ನಂಬಿಗೆಗಳು, ಕಥೆಯ ಪದರುಗಳಂತೆ ಅನಿಸುವ ಕವಿ ಸಮಯಗಳೂ ಉಂಟು. ಆದರೆ ಚಿಪ್ಪಿನ ಮುತ್ತು ಒಂದು ತೂಕ ಮೇಲೆಯೇ. ಆದರೆ ಚಂದ್ರನ ಗಟ್ಟಿತನಕ್ಕೆ ಹೇಗೆ, ಯಾಕೆ, ಎಷ್ಟು ಬೇಕೆಂಬುದನ್ನು ಅರಿತೇ ಮುತ್ತನ್ನು ಬೆಳ್ಳೆಯಲ್ಲಿ ಕೂಡ್ರಿಸಿ ತೊಡಬೇಕು. 

Advertisement

  ನಮ್ಮ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಮುತ್ತು ಒಳಿತಾಗಿತ್ತು. ಆದರೆ ಅವರು ಧರಿಸಿದ್ದರೋ ಇಲ್ಲವೋ ಎಂಬುದು ತಿಳಿದಿಲ್ಲ. ಅವರ ಕುರಿತಾದ ಜೀವನ ಚರಿತ್ರೆಯಲ್ಲೂ ಈ ಬಗೆಗೆ ಉಲ್ಲೇಖಗಳಿಲ್ಲ. ರುದ್ರಾಕ್ಷಾ ಮಣಿಗಳನ್ನು ಅವರು ಧರಿಸುತ್ತಿದ್ದುದು ಕೆಲವು ಚಿತ್ರಗಳಲ್ಲಿ ಕಂಡು ಬರುತ್ತಿತ್ತು. ದಾರ್ಡ್ಯತೆ ಇದ್ದರೂ ಗೊಂದಲಗಳು, ಮಕ್ಕಳು ಯೋಗಕ್ಷೇಮದ ವಿಚಾರದಲ್ಲಿ ಬಿಕ್ಕಟ್ಟುಗಳು, ತೀವ್ರತಮವಾದ ಅಂಜುಬುರುಕುತನ, ಇನ್ನಿಲ್ಲದ ನಾಚಿಕೆ ಇತ್ಯಾದಿ ಸಂಕಟಗಳು ಚಂದ್ರನ ಮೂಲಕವಾಗಿ ನಿಯಂತ್ರಣಗೊಳ್ಳಬೇಕಾದಾಗ ಮುತ್ತು ಅನಿವಾರ್ಯ. ಇಂಗ್ಲೆಂಡಿನ ಪ್ರಿನ್ಸ್‌ ಚಾರ್ಲ್ಸ್‌ ಎದುರಿಸಿದ ಬಿಕ್ಕಟ್ಟುಗಳ ನಿವಾರಣೆಗೆ ಮುತ್ತು ಅವಶ್ಯವಾಗಿತ್ತು. ಲಾಲು ಪ್ರಸಾದ್‌ ಯಾದವ್‌ ಜಾತಕದಲ್ಲಿ ಚಂದ್ರ ( ಕರ್ನಾಟಕ) ಅದ್ಬುತವಾಗಿದ್ದರೂ ಮುತ್ತನ್ನು ಧರಿಸಿದರೆ ತೊಳಲಾಟಗಳೇ ಅಧಿಕವಾಗುತ್ತವೆ. ಶನೈಶ್ಚರ ವ್ಯತಿರಿಕ್ತವಾಗಿ ದಯನೀಯ ಸ್ಥಿತಿ ತರುತ್ತಾನೆ. ಈಗ ಅವರಿಗೆ ಶನಿಕಾಟವಿದೆ. ಗೆಲುವಿನ ಅಲೆಯಲ್ಲಿದ್ದರೂ ಅಧಿಕಾರ ನಿತೀಶ್‌ ಬಳಿ. ಒಂದು ಕಾಲದ ಕಡು ವಿರೋಧಿ. ಆದರೆ ವರ್ತಮಾನ ಕಡು ವಿರೋಧಿಯನ್ನೇ ಪರಮೋನ್ನತ ಮುಖ್ಯಮಂತ್ರಿ ಖುರ್ಚಿಯಲ್ಲಿ (ಬಿಹಾರ ರಾಜ್ಯಕ್ಕೆ) ಕಳಿಸುವ ಕೈಂಕರ್ಯವನ್ನು ಲಾಲು ಪ್ರಸಾದ್‌ ಪಾಲಿಗೆ ತಂದೊದಗಿಸಿತು. ಶನೈಶ್ಚರನ ಪ್ರಭಾವ. ಹಗರಣಗಳ ಹೊರೆ ಇದ್ದಾಗಲೂ ಚಂದ್ರ ಅವರನ್ನು ಕೇಂದ್ರದ ರೈಲ್ವೇ ಸಚಿವರನ್ನಾಗಿಸಿದ. ಆದರೆ ರಾಹು ಭುಕ್ತಿ ಬಂದಾಗ, ಈಗ ಶನಿಕಾಟದ ತನಕ ಲಾಲು ಹಿಂದೆ ಬಿದ್ದಿದ್ದರು. ಆದರೆ ಕುಜ ದಶಾ ಬರುತ್ತಿದ್ದಂತೆ ಮತ್ತೆ ಮುಖ್ಯರಾಗಿದ್ದಾರಾದರೂ, ಜೊತೆಗಿರುವ ಶುಕ್ರ ಪೂರ್ಣ ಪ್ರಮಾಣದ ಚೈತನ್ಯ ಒದಗಿಸುವುದು ಕಷ್ಟ. ಮುತ್ತನ್ನು ಧರಿಸಲೇಬಾರದು. ಮುತ್ತು ಧರಿಸಿದರೆ ಶನೈಶ್ಚರ ಹಾದಿ ಹಿಡಿಯುವ ವ್ಯಾಘ್ರನಾಗುತ್ತಾನೆ. 

  ಹವಳ
 ಶುಕ್ರನ ಭಾಧೆಯ ಕಾರಣದಿಂದ ಒಳ್ಳೆಯವನಾಗಬೇಕಾದ ಕುಜನು ಮದುವೆಯಾದ ಜೀವನದಲ್ಲಿ ಹುಳಿ ಹಿಂಡುತ್ತಾನೆ. ಸ್ವಮೋಹವೇ ಬಾಧೆಯಾಗುವ, ಅನಾವಶ್ಯಕ ಕೋಪ, ಹಿಂದೆ ಮುಂದೆ ನೋಡದೆ ಮುಂದಕ್ಕೆ ಧಾವಿಸುವುದು ಇತ್ಯಾದಿ ಪ್ರಮಾದಗಳನ್ನು ಸೃಷ್ಟಿಸುವ ಜನರಿಗೆ ಹವಳ ಬೇಕು. ಆದರೆ ಜಾತಕ ಕುಂಡಲಿಯ ಸ್ವರೂಪ ಗಮನಿಸದೆ ಮುಂದುವರಿದು ತೊಡಲು ಮುಂದಾಗಬಾರದು. ತಾಮ್ರದಲ್ಲಿ ಧರಿಸಬೇಕು. ಭಾರತದ ಪ್ರಸ್ತುತ ವರ್ತಮಾನವನ್ನು, ಸಾಡೇಸಾತಿಯ ವಿಪುಲ ತೊಂದರೆಗಳನ್ನು ಕಳಕೊಳ್ಳುತ್ತ ದಾಢìÂತೆಗಾಗಿ ನಮ್ಮ ಪ್ರಧಾನಿ ಮೋದಿ, ಹವಳ ಧರಿಸುವುದು ಉತ್ತಮ. ನಮ್ಮವರೇ ಆದ ಗಿರೀಶ್‌ ಕಾರ್ನಾಡ್‌ ಹವಳ ಧರಿಸುವುದು ಸೂಕ್ತ. ತೊಟ್ಟರೆ ಯತನಾಮಯನಾಗುವ ರಾಹು ದೋಷ ನಿಶಿfತ. 

 ಒಟ್ಟಿನಲ್ಲಿ ಹವಳ ಬಲು ಬೆಳೆ ಬಾಳುವ ರತ್ನಗಳಲ್ಲಿ ಒಂದಲ್ಲವಾದರೂ ಇದಕ್ಕೆ ಇದರದೇ ಆದ ಸಕಾರಾತ್ಮಕವಾದ, ಬಲವಾದ ಮಿಡಿತಗಳು, ಸಂವೇದನೆಗಳನ್ನುಂಟು ಮಾಡುವ ಶಕ್ತಿ ಉಂಟು. ಬಹುತೇಕವಾಗಿ ಕ್ಯಾಲಿÒಯಂ ಸಂಯುಕ್ತ ಘಟಕಗಳು ಹವಳಗಳಲ್ಲಿ ಅಡಕವಾಗಿದ್ದು ಇವುಗಳನ್ನು ಸ್ರವಿಸಿ ಕಟ್ಟುವ ಮೃದ್ವಂಗಿ ( ಬಸವನ ಹುಳುವಂಥ ಕೀಟಗಳು) ಗಳುಂಟು. ಭಾರತದಲ್ಲೂ ವಿಶಿಷ್ಟವಾದ ಹವಳದ ನಿಕ್ಷೇಪ ರಾಶಿಗಳು ಪ್ರಸಿದ್ಧವಾಗಿಯೇ ಇತ್ತಾದರೂ ಈಗ ಭಾರತದಲ್ಲಿದು ಅಪರೂಪ. ನಮ್ಮ ಕರ್ನಾಟಕದಲ್ಲೇ ಭಟ್ಕಳದ ಸಮೀಪದ ಮಾವಿನ ಕುರ್ವೆ. ದ್ವೀಪ ಸಮೂಹದಲ್ಲಿ ಹವಳಗಳಿವೆ ಎಂಬುದನ್ನು ಕೇಳಿದ್ದೇವೆ. 

  ನವರತ್ನಗಳನ್ನು ಬಿಡಿಬಿಡಿಯಾಗಿ ಧರಿಸಲು ಯೋಗ್ಯ. ಆದರೆ ಅವಸರ ಮಾಡದೆ ತಿಳಿದು, ಕೂಲಂಕಷವಾಗಿ ಅರಿತುಕೊಂಡೇ ಧರಿಸುವ ವಿಚಾರ ಕೈಗೊಳ್ಳಬೇಕು. ರತ್ನಗಳನ್ನು ಧರಿಸಿ ಗೆದ್ದವರುಂಟು. ಕೊಹಿನೂರ್‌ ಅಂಥ ರತ್ನಗಳು ಸಾಮ್ರಾಜ್ಯ ಉರುಳಿಸಿದ್ದುಂಟು. 

ಅನಂತಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next