Advertisement

ನಿಮ್ಮ ಮನೆ ದುರ್ಗಾ, ಸರಸ್ವತಿ, ಲಕ್ಷ್ಮೀಯರ ತಾಣವಾಗಬೇಕೆ?

02:45 AM Jul 17, 2017 | Harsha Rao |

ಭಾರತೀಯ ವಾಸ್ತುಕಲೆ, ವಸ್ತು ಸಂಯೋಜನೆಗಳನ್ನು ಸೂಕ್ತ ರೀತಿಯಲ್ಲಿ ಹೊಂದಿಸಿಡಲು ಒತ್ತಿ ಹೇಳುತ್ತದೆ. ಉದಾಹರಣೆಗೆ ಪವಿತ್ರವಾದ ತುಳಸಿ, ದೂರ್ವಾಂಕುರ ಗಂಧ, ರುದ್ರಾಕ್ಷಿ, ಶಂಖ, ಸಾಲಿಗ್ರಾಮ, ಗಂಟೆ, ಸುವಾಸನಾ ಬತ್ತಿ, ಆರತಿಯ ಸಲಕರಣೆಗಳು ದೇವರ ಮನೆಯಲ್ಲಿಯೇ ಇರಬೇಕೇ ವಿನಃ ಅದನ್ನು ಇನ್ನೆಲ್ಲಿಯೋ ಇಡಕೂಡದು. ಪುಸ್ತಕಗಳನ್ನು ಓದುವ ಕೋಣೆ, ಮಲಗುವ ಕೋಣೆ, ಹಜಾರದಲ್ಲಿ ಇಡಬೇಕೇ ವಿನಃ ಬೇರೆಲ್ಲಿಯೂ ಇಡಬಾರದು.
ಅಲ್ಲಿಯೂ ಸಹ ಪುಸ್ತಕಗಳ ರಾಶಿ ತುಂಬಿಸಿರಬಾರದು. ಪುಸ್ತಕಗಳು ನಮ್ಮ ಸಂಸ್ಕೃತಿಯಲ್ಲಿ ದೇವಿ ಸರಸ್ವತಿಯ ವಾಸಸ್ಥಾನ. ಪ್ರತ್ಯಕ್ಷವಾಗಿ ಅದು ಸರಸ್ವತಿಯೇ ಆಗಿದೆ. ಹೀಗಾಗಿ ಪವಿತ್ರತೆಯನ್ನು ಉಳಿಸಿಕೊಳ್ಳುವ ವಿಚಾರ ಪುಸ್ತಕಗಳ ಬಗ್ಗೆ ಅನಿವಾರ್ಯವಾಗಿದೆ. ನಿಯತಕಾಲಿಕೆಗಳು ಹಜಾರದಲ್ಲಿರುವುದು ಸೂಕ್ತ. ನಿಯತಕಾಲಿಕೆಗಳು ಹೊಸ ಕಾಲದ ಆವಿಷ್ಕಾರ. ಅವು ರದ್ದಿಗೆ ಸೇರಲ್ಪಡುವ ವಿಚಾರವನ್ನು ಗಮನಿಸಿ, ಅವನ್ನು ಹಜಾರದಲ್ಲಿಡುವುದು ತಾರ್ಕಿಕವಾಗಿ ಸರಿ. ಸಂಗ್ರಹಯೋಗ್ಯ ಪುಸ್ತಕಗಳನ್ನು ಓದಿನ ಕೋಣೆಯಲ್ಲಿ ಶಿಸ್ತಾಗಿ ಜೋಡಿಸಿಡಬೇಕು.

Advertisement

ರದ್ದಿ ಪೇಪರುಗಳು, ಉಪಯೋಗವಿರದ ಬಾಟಲು, ಕರಡಿಗೆ, ಪೊಟ್ಟಣ, ಪ್ಲಾಸ್ಟಿಕ್‌ ತ್ಯಾಜ್ಯ, ಟೂತ್‌ ಪೇಸ್ಟ್‌ ಟ್ಯೂಬುಗಳು, ಟಿನ್ನು, ತುಕ್ಕು ಹಿಡಿದ ವಸ್ತುಗಳು, ಉಪಯೋಗಕ್ಕೆ ಬಾರದ ಆದರೆ ಇರಲಿ ಎಂದು ಇಟ್ಟುಕೊಂಡ ಹರಗಣಗಳನ್ನು
ಸೂಕ್ತವಾಗಿ ವಿಲೇವಾರಿ ಮಾಡಿ. ಮನೆಯಿಂದ ದೂರವಿಡುವುದೇ ಕ್ಷೇಮ. ಪೀಠೊಪಕರಣಗಳ ವಿಚಾರದಲ್ಲಿ ಜಾಗ್ರತೆ ಇರಲಿ. ಎಂಥೆಂಥದೋ ರೀತಿಯಲ್ಲಿ ಜೋಡಿಸಿಡಬಾರದು. ಹಲವು ಸಲ ಸೋಫಾಗಳು ಕುರ್ಚಿಗಳು ಮನೆಗೆ ಬರುವ ಅಭ್ಯಾಗತರನ್ನು ಒಂದು ದಿವ್ಯದ ಕಲ್ಪನಾಲಹರಿಗೆ ಒಯ್ಯುವ ಹಾಗೆ ಇರಲಾರದು. ಬೇಕಾಬಿಟ್ಟಿ ಇರುತ್ತದೆ.

ಬದಲು ಅಂದವಾಗಿ ಜೋಡಿಸಿಟ್ಟರೆ ಅತಿಥಿಗೆ ಒಂದು ಸುಂದರ ತಾಣಕ್ಕೆ ಹಾರ್ದಿಕವಾದ ತೃಪ್ತಿಯೊಂದಿಗೆ ಬಂದ ಅನುಭವವಾಗುತ್ತದೆ. ಒಳ್ಳೆಯ ವಿಚಾರವನ್ನು ಹಂಚಿಕೊಳ್ಳಬಹುದು. ಮನೆಗೆ ಬರುತ್ತಿರುವಂತೆ ಹೊರಗೆ ಓಡಿಹೋಗುವ
ಅನುಭವ ಆಗಬಾರದು. ಅಡುಗೆ ಮನೆಯಲ್ಲಿ ಅಗ್ನಿಗೆ ಸಂಬಂಧಿಸಿದ ಸಲಕರಣೆಗಳು, ಒಲೆಯ ಬೆಂಕಿಯಲ್ಲಿ ಅಡುಗೆಗೆ ಒದಗಿ ಬರುವ ಸರಂಜಾಮುಗಳು ಇರಬೇಕು. ಆಗ್ನೇಯ ದಿಕ್ಕನ್ನು ಅಡುಗೆಯ ಕೋಣೆಯ ಒಳಗೆ, ಅಡುಗೆಗೆ ಬೇಕಾದ ಇತರ ಘಟಕ ಗ್ಯಾಸ್‌, ವಿದ್ಯುತ್‌ ಸ್ಟೌವ್‌, ಒಲೆಯ ಹತ್ತಿರವೇ ಆಗಿರದ ಹಾಗೆ, ಆದರೂ ಆಗ್ನೇಯದ ಸಮೀಪ μÅಡುj,
ಪಾತ್ರೆ, ಹರಿವಾಣ ಲೋಟ, ಮುಚ್ಚಳ ಇತ್ಯಾದಿ ವಸ್ತುಗಳನ್ನು ಅಂದವಾಗಿ ಜೋಡಿಸಿರಬೇಕು. ಅಡುಗೆ ಮನೆಯಲ್ಲೇ ಅಥವಾ ಹಜಾರದಲ್ಲೇ ಊಟದ ಸ್ಥಳ ಇರಬಾರದು. ದೇವರ ಮನೆ ಅಥವಾ ಪೀಠ ಕೂಡಾ. ಊಟದ ಸ್ಥಳಕ್ಕೂ, ದೇವರ ಪೀಠಕ್ಕೂ, ದೇವರ ಪೀಠದಿಂದ ಸ್ನಾನ ಗೃಹಗಳಿಗೂ, ಶೌಚಾಲಯಗಳಿಗೂ ಅಂತರ ಇರಬೇಕು. ಒಂದು ಕಡೆಯ ವಸ್ತುಗಳು ಇನ್ನೊಂದು ಕಡೆ ಬಂದಿರಬಾರದು. ಊಟದ ಟೇಬಲ್ಲನ್ನೇ ಗಮನಿಸಿ, ಹಲವರಿಗೆ ಊಟದ ಟೇಬಲ್‌ ಮೇಲೆ ಪುಸ್ತಕ ಪೇಪರ್‌ ಓದದಿದ್ದರೆ ಸಮಾಧಾನವೇ ಆಗದು. ಊಟದ ಎಂಜಲು ಮುಸುರೆಗಳಿರುವ ತಿನಿಸು, ಅನ್ನ ಸಾಂಬಾರ್‌ ಪುಸ್ತಕ ಅಥವಾ ಪೇಪರುಗಳಿಗೆ ಅಂಟಿಕೊಂಡು ಕೊಳೆಯಾಗುತ್ತದೆಂಬ ಅರಿವು ಇವರಿಗಿರುವುದಿಲ್ಲ.

ಇನ್ನು ಕೆಲವರು ಟೂತ್‌ ಬ್ರಷ್‌, ಪೇಸ್ಟ್‌ ತಂದು ಮಲಗುವ ಕೋಣೆಯಲ್ಲಿ ಇಡುವುದೂ ಇದೆ. ದವಸ ಧಾನ್ಯಗಳನ್ನು
ಹಜಾರದಲ್ಲಿಡುವುದೂ ಇದೆ. ಅಂದವಾದ ಜೋಡಣೆಗಾಗಿ ಸಹನೆಯಿಂದ ಮುಂದಾಗದಿರುವ ಪರಿಸ್ಥಿತಿ ಇದೆ. ಇದರಿಂದ ಸಕಾರಾತ್ಮಕ ಸುಳಿಗಳು, ಅಲೆಗಳು, ಹೊಯ್ದಾಟಗಳು ತರಂಗ ದಾಡ್ಯìತೆಗಳು ಸೊರಗುತ್ತವೆ.

ಒಳಗೆ ಮನೆಯೊಂದು ಪುಟ್ಟ ಅಮರಾವತಿಯಾಗಿರಬೇಕು. ಇರಬೇಕಾದ್ದು ಅರಬೇಕಾದ ಸ್ಥಳದಲ್ಲಿದ್ದರೆ ಸೊಗಸು ಪುಟಿಯುತ್ತದೆ. ದುರ್ಗಾ, ಸರಸ್ವತಿ, ಲಕ್ಷಿ$¾ ರಿಗೆ ತಾಣ ಒದಗುತ್ತದೆ. 

Advertisement

– ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next