Advertisement
ಶರೀರದ ಸಂರಕ್ಷಣೆಗಾಗಿ ಕಾಲಕ್ಕನುಗುಣವಾಗಿ ಸೇವಿಸಬೇಕಾದ ಆಹಾರ ಪದಾರ್ಥಗಳನ್ನು ಪ್ರಕೃತಿಯೇ ನಮಗೆ ನೀಡುತ್ತದೆ. ಅದನ್ನು ಉಪಯೋಗಿಸಿಕೊಂಡು ಬದುಕುವ ಬುದ್ಧಿವಂತಿಕೆಯೂ ನಮಗಿದೆಯಾದರೂ ಅತ್ತ ಗಮನ ಕೊಡದೆ ಎಲ್ಲವನ್ನೂ ವಿಕೃತಗೊಳಿಸುವಲ್ಲಿ ಜನರು ಆಸಕ್ತರಾಗಿದ್ದಾರೆ. ಹಿಂದಿನ ಆಹಾರ ಪದ್ಧತಿಯು ಔಷಧವಾಗಿತ್ತು. ಅಡುಗೆ ಮನೆಗಳು ಔಷಧಾಲಯಗಳಾಗಿದ್ದುವು. ಆದರೆ ಬೇಜವಾಬ್ದಾರಿತನದಿಂದ ಇಂದು ಆಸ್ಪತ್ರೆಗಳೇ ನಮ್ಮ ಆಶ್ರಯ ತಾಣವಾಗಿ ಬದಲಾಗಿದೆ. ಶಾರೀರಿಕ ಸ್ವಾಸ್ಥ್ಯ ಸಂರಕ್ಷಣೆಗೆ ಆದ್ಯತೆ ನೀಡದಿರುವುದರಿಂದ ನೂರಾರು ರೋಗಗಳಿಗೆ ದಾಸರಾಗಬೇಕಾಗುತ್ತದೆ ಎಂದು ಕೊಂಡೆವುರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.
Related Articles
Advertisement
ಪ್ರೇಮಾನಂದ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಸಂಘಟಕ ಪ್ರೇಮಾನಂದ ಶೆಟ್ಟಿ ಕುಂದಾಪುರ ಮುಖ್ಯ ಅತಿಥಿಗಾಳಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಶಿಧರ ಶೆಟ್ಟಿ ಮುಟ್ಟ, ಡಾ,ಸಜೀವನ್ ಪಾಲಕ್ಕಾಡ್. ಹರಿಪ್ರಸಾದ್ ಶೆಟ್ಟಿ ಉದ್ಯಮಿ ಕುಂದಾಪುರ, ಡಾ| ಶ್ರೀಧರ ಬಾಯಿರಿ ಉಡುಪಿ ಉಪಸ್ಥಿತರಿದ್ದರು.
ಗಾಯತ್ರಿ ಪ್ರಾರ್ಥನೆ ಗೀತೆ ಹಾಡಿದರು. ಹರೀಶ್ ಮಾಡ ಸ್ವಾಗತಿಸಿ ಪುಷ್ಪರಾಜ ಐಲ ಧನ್ಯವಾದ ಸಮರ್ಪಿಸಿದರು. ನಾಗನ ಕಟ್ಟೆಯಲ್ಲಿ ವಿಶೇಷ ನಾಗಪೂಜೆ ಜರಗಿತು. ಅನ್ನ, ಅಕ್ಷರ, ಆಹಾರ, ಆಧಾರ ಮತ್ತು ಆರೋಗ್ಯ ಎಂಬ ಐದು ತತ್ವಗಳ ಮೂಲಕ ಜನರಿಗೆ ನೆರವಾಗುವ ರೀತಿಯಲ್ಲಿ ವಿದ್ಯಾದಾನ, ಮನೆದಾನ ಮುಂತಾದ ಚಟುವಟಿಕೆಗಳು ಆಶ್ರಮದ ಆಶ್ರಯದಲ್ಲಿ ನಡೆಯುತ್ತಿದೆ. ಧ್ಯಾನಿ, ಜ್ಞಾನಿ ಮತ್ತು ದಾನಿಗಳಿಂದ ಸಂಪನ್ನವಾದ ವೇದಿಕೆಯನ್ನು ವಿವಿಧ ಔಷಧೀಯ ಗಿಡಮೂಲಿಕೆಗಳಿಂದ ಅಲಂಕರಿಸಲಾಗಿತ್ತು.
ಆಯು ಸಂಭ್ರಮದಲ್ಲಿ ಔಷಧಯುಕ್ತ ಆಹಾರ ಕಾರ್ಯಾಗಾರವನ್ನು ಡಾ| ಶ್ರೀಧರ ಬಾ„ರಿ ಉಡುಪಿ ಹಾಗೂ ಕೇರಳ ನಿತ್ಯಾನಂದ ಆಯುರ್ವೇದಸಂರಕ್ಷಣಾ ಸಮಿತಿಯ ರವೀಂದ್ರ ವೈದ್ಯರು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಉಂಟಾಗುವ ಪ್ರಯೋಜನಗಳು, ತೆಂಗಿನ ಕಾಯಿಯ ಪ್ರತ್ಯೇಕತೆ ಮತ್ತು ಉಪಯೋಗಗಳು, ಭಾರತೀಯ ಆಹಾರ ಪದ್ಧತಿ ಮತ್ತು ವೈಜ್ಞಾನಿಕ ಹಿನ್ನೆಲೆ, ಮಳೆ ನೀರಿನ ಮಹತ್ವ, ತೆ„ಲ ಅಭ್ಯಂಗ, ಸ್ನಾನ, ವ್ಯಾಯಾಮ, ತಾಯಿ ಹಾಲಿನ ಬಗ್ಗೆ ಮಾಹಿತಿ ನೀಡಲಾಯಿತು. ಡಾ.ಸಜೀವನ್ ಔಷಧೀಯ ಸಸ್ಯಗಳ ಪರಿಚಯ ಮತ್ತು ಉಪಯೋಗಗಳನ್ನು ಮಲಯಾಳಂನಲ್ಲಿ ವಿವರಿಸಿದರು. ಡಾ| ಗೋಪಿನಾಥ್ ಕನ್ನಡಲ್ಲಿ ಮಾಹಿತಿ ನೀಡಿದರು.
ಔಷಧೀಯ ಆಹಾರಬೆಳಗ್ಗಿನ ಉಪಹಾರದಲ್ಲಿ ದಾಸವಾಳದ ಚಹಾ, ಕಡಿಗೋಧಿಯ ಉಪ್ಪಿಟ್ಟು, ಹೆಸರಿನ ಉಸ್ಲಿ ಹಾಗೂ ಮಧ್ಯಾಹ್ನದ ಊಟಕ್ಕೆ ದಾಸವಾಳ ಎಲೆ ಸಾಂಬಾರ್, ಬಾಳೆ ಎಲೆ ಉಪ್ಪಿನಕಾಯಿ, ಹಾಗಲ ಕಾಯಿ ಇಂಚಿ ಥೆ„ರು, ಅಗ್ನಿ ಬಳ್ಳಿ ರಸ, ತುಳಸಿ ಮಸಾಲಾ, ಬಾಳೆದಿಂಡು ಸಲಾಡ್, ಕುಂಬಳ ಕಾಯಿ ಚಟ್ನಿ, ಕುಂಬಳಕಾಯಿ ಫ್ರೈ, ಕುಂಬಳಕಾಯಿ ಪಾಯಸ ವಿಶೇಷವಾಗಿತ್ತು. ಪಾರಂಪರಿಕ ವೈದ್ಯರು ಸಿದ್ಧಪಡಿಸಿದ ಆಹಾರವನ್ನು ಸೇವಿಸಿದ ಭಕ್ತರಲ್ಲಿ ಧನ್ಯತಾ ಭಾವ ಮೂಡಿತು. ಸಭಾಂಗಣದಲ್ಲಿ ನೆರೆದಿದ್ದ ಜನಸಾಗರ ಆಯುರ್ವೇದ ಔಷಧಗಳನ್ನು ಮತ್ತು ಆಹಾರ ವಸ್ತುಗಳನ್ನು ಮಾರಾಟಮಾಡುತ್ತಿದ್ದ ಸ್ಟಾಲ್‌ಗಳತ್ತ ಆಕರ್ಷಿತರಾದರು. ಸಂಸ್ಕೃತಿ ನೆನಪಿಸುವ ಕಾರ್ಯ
ಅತಿರಾತ್ರ ಸೋಮಯಾಗ ಮೊದಲಾದ ಅತ್ಯಪೂರ್ವವಾದ ಹೋಮ, ಯಾಗಾದಿ ಗಳಿಗೆ ಹೆಸರಾದ ಗಾಯತ್ರಿ ಮಾತೆ ನೆಲೆಸಿರುವ ಈ ಆಶ್ರಮದಲ್ಲಿ ನಡೆಯುವ ಪುಣ್ಯ ಕಾರ್ಯಗಳು ನಮ್ಮನ್ನು ಈ ಆಶ್ರಮಕ್ಕೆ ಬರುವಂತೆ ಮಾಡಿದೆ. ಗೋಸೇವೆ, ಜನಸೇವೆಯೊಂದಿಗೆ ಭಾರತೀಯ ಸಂಸ್ಕೃತಿ ಯನ್ನು ಎತ್ತಿಹಿಡಿಯುವ ಕೆಲಸ ಇಲ್ಲಿ ನಡೆಯುತ್ತಿದೆ. ವಿದ್ಯಾದಾನ, ಮನೆದಾನ ಸೇರಿದಂತೆ ನೊಂದವರ ಆಶಾಕಿರಣವಾಗಿ ಬೆಳಗುತ್ತಿರುವ ಈ ಕ್ಷೇತ್ರವು ಆರೋಗ್ಯ ಸಂರಕ್ಷಣೆಯತ್ತ ಜನರ ಚಿತ್ತವನ್ನು ಸೆಳೆಯುತ್ತಿರುವುದು ಇನ್ನೊಂದು ವಿಶೇಷ
-ಪ್ರೇಮಾನಂದ ಶೆಟ್ಟಿ,
ಕುಂದಾಪುರ.