Advertisement

ಮನೆ ಪೇಂಟಿಂಗ್‌ ಇರಲಿ ಉಳಿತಾಯ

04:46 PM Mar 17, 2018 | |

ಬಣ್ಣ ಬಳಿಯುವ ಗೋಡೆಯ ಸೀಲಿಂಗ್‌ ಮಟ್ಟವಾಗಿದೆಯೇ?, ಓರೆಕೋರೆಗಳಿವೆಯೇ? ಎಂದು ಗಮನಿಸದೆ ಬಣ್ಣ ಬಳಿದರೆ, ಈ ಹಿಂದೆ ಕಾಣದ ನ್ಯೂನತೆಗಳು ಅನಂತರ ಕಾಣಲು ಶುರುವಾಗುತ್ತವೆ. ಅದನ್ನು ಸರಿಪಡಿಸಲು ಹೊರಟರೆ ಈಗಾಗಲೇ ಹೊಡೆದಿರುವ ಬಣ್ಣ ನಷ್ಟವಾಗುತ್ತದೆ. ಹೀಗಾಗಿ ಬಣ್ಣ ಬಳಿಯುವಾಗ ಉಳಿತಾಯದ ಬಗ್ಗೆಯೂ ಕೊಂಚ ಯೋಚಿಸಿ.

Advertisement

ಬಣ್ಣದ ಬಳಕೆ
ಗಾಢವಾದ ಬಣ್ಣಗಳು ಹೆಚ್ಚು ಲೀಟರ್‌ ಬಣ್ಣಗಳನ್ನು ಬೇಡುತ್ತವೆ. ಅದೇ ತೆಳುವಾದ ಬಣ್ಣ ಕಡಿಮೆ ಖರ್ಚು ಮಾಡಿಸುತ್ತದೆ. ಇದಕ್ಕೆ ಕಾರಣ ಬಣ್ಣ ಡಾರ್ಕ್‌ ಆದಷ್ಟೂ ಕವರಿಂಗ್‌ ಸರಿಯಾಗಿ ಆಗದೆ ಎರಡು ಮೂರು ಪದರದಲ್ಲಿ ಬಣ್ಣವನ್ನು ಹಚ್ಚಬೇಕಾಗುತ್ತದೆ. ಅದೇ ಲೈಟ್‌ ಕಲರ್‌ ಅದರೆ ಎರಡು ಪದರಗಳಲ್ಲಿ ಮುಗಿಸಿ ಬಿಡಬಹುದು. ಜತೆಗೆ ಗಾಢಬಣ್ಣವನ್ನು ಮಿಶ್ರಣ ಮಾಡುವಾಗ ಮಂದವಾಗಿರಬೇಕಾಗುತ್ತದೆ. ಅದೇ ತೆಳು ಬಣ್ಣಗಳಿಗೆ ಹೆಚ್ಚು ಮಂದವಾಗಿರುವ ಅಗತ್ಯ ಇರುವುದಿಲ್ಲ.

ಫಿನಿಶ್‌ ನೋಡಿಕೊಳ್ಳಿ
ರಿಪೇರಿ ಹೆಚ್ಚಿದ್ದಷ್ಟೂ ಬಣ್ಣ ಹೆಚ್ಚು ಹೊಳೆಯಲು ತೊಡಗುತ್ತದೆ. ಆದ್ದರಿಂದ ಬಣ್ಣ ಹೊಡೆಯುವ ಮೊದಲು, ಗೋಡೆಗಳನ್ನು ಪರಿಶೀಲಿಸುವುದು ಒಳ್ಳೆಯದು.

ಬಣ್ಣ ಹೀರದಂತೆ ಮಾಡಿ
ಸಿಮೆಂಟ್‌ ಗಾರೆ ಮುಗಿಸಿ ಗೋಡೆಗಳ ನ್ಯೂನತೆಗಳನ್ನು ತುಂಬಿಸಿ ಸರಿ ಮಾಡಬೇಕು. ಇಲ್ಲವಾದರೆ ಸಿಮೆಂಟ್‌ ಗೋಡೆಗಳು ಸ್ವಾಭಾವಿಕವಾಗಿಯೇ ಪೈಂಟ್‌ ಹೀರಿಕೊಳ್ಳುತ್ತವೆ. ಹೀಗಾಗದಂತೆ ನೋಡಿಕೊಳ್ಳಿ.

ಬಣ್ಣ ಬಳಿಯುವ ವಿಧಾನ
ಸಿಮೆಂಟ್‌ ಪ್ಲಾಸ್ಟರ್‌ ಚೆನ್ನಾಗಿ ಕ್ಯೂರ್‌ ಆಗಿ ಒಣಗಿದ ಅನಂತರವೇ ಪೇಂಟ್‌ ಕೆಲಸವನ್ನು ಶುರುಮಾಡುವುದು ಉತ್ತಮ.

Advertisement

ಲೇಬರ್‌ ಲೆಕ್ಕಾಚಾರ
ಬಣ್ಣದಷ್ಟೇ ದುಬಾರಿ ಲೆಕ್ಕಾಚಾರ ಕುಶಲ ಕರ್ಮಿಗಳ ಕೂಲಿಗೂ ಬೇಕಾಗುತ್ತದೆ. ಇವರಿಗೆ ಕೆಲಸ ಹೆಚ್ಚಿದಷ್ಟೂ ಅವರು ಹೆಚ್ಚು ಹೆಚ್ಚು ಕೂಲಿ ಕೇಳುತ್ತಾರೆ. ಆದ್ದರಿಂದ ನಾವು ಪೇಂಟರ್‌ ಗಳಿಗೆ ಹೆಚ್ಚು ಹೊರೆ ಆಗದಂತೆ ನಿಗಾವಹಿಸುವುದು ಮುಖ್ಯ. ದಿನದ ಹೊತ್ತು ಪ್ಲಾಸ್ಟರ್‌ ಪೇಂಟಿಂಗ್‌ ನಲ್ಲಿ ಕಾಣದ ನ್ಯೂನತೆಗಳು ರಾತ್ರಿ ವಿದ್ಯುತ್‌ ದೀಪದಲ್ಲಿ ಕಾಣುತ್ತದೆ. ಇದನ್ನು ಪತ್ತೆ ಹಚ್ಚಿ ಕೂಡಲೇ ಸರಿಪಡಿಸಿ ಬಳಿಕ ಪೈಂಟ್‌ ಹೊಡೆದರೆ ಬಣ್ಣ, ಹಣ ಸಾಕಷ್ಟು ಉಳಿತಾಯ ಸಾಧ್ಯ. 

Advertisement

Udayavani is now on Telegram. Click here to join our channel and stay updated with the latest news.

Next