ನವದೆಹಲಿ: ಕುಡಿಯೋದು ಎಲ್ಲರ ವೀಕ್‌ನೆಸ್ಸು. ಅದು ವೈದ್ಯರೇ ಆಗಿರಬಹುದು, ಸಾಮಾನ್ಯರೇ ಆಗಿರಬಹುದು, ಬೇರೆ ಯಾರೇ ಆಗಿರಬಹುದು ಬಿಡಿ! ಇಲ್ಲಿ ವಿಚಾರ ಇದಲ್ಲವೇ ಅಲ್ಲ. ಇನ್ನು ಮುಂದೆ ವೈದ್ಯರು ತಮ್ಮ ಭೂತ – ವರ್ತಮಾನ – ಭವಿಷ್ಯದ ರೋಗಿಗಳೊಂದಿಗೆ ಕುಳಿತು ಕುಡಿಯುವಂತಿಲ್ಲ. ಅರ್ಥಾತ್, ವೈದ್ಯರನ್ನು ಬಿಟ್ಟು ಬೇರೆಯವರ ಜತೆಗೆ ಯಾವುದೇ ಕಾರಣಕ್ಕೂ ಮದ್ಯ ಸೇವಿಸುವಂತಿಲ್ಲ. ಹೀಗಂತ ಭಾರತೀಯ ವೈದ್ಯಕೀಯ ಒಕ್ಕೂಟ ಸಲಹೆ ನೀಡಿದೆ.
ಇದಷ್ಟೇ ಅಲ್ಲ, ಇದರ ಜತೆಗೆ ಇನ್ನೂ ಕೆಲವೊಂದು ಸಲಹೆ, ಸೂಚನೆಗಳನ್ನೂ ಅದು ನೀಡಿದೆ. ವೈದ್ಯರಾದವರು ಸಮಾಜಕ್ಕೇ ಆದರ್ಶವಾಗಿರಬೇಕು ಎಂಬುದು ಒಕ್ಕೂಟದ ಒನ್‌ಲೈನ್ ಸಲಹೆ. ಹೀಗಿದ್ದರೆ ಅವರು ಆರೋಗ್ಯದ ರಾಯ
ಭಾರಿ ಗಳಾಗಬಹುದು ಎಂದೂ ಹೇಳಿದೆ. ಇತ್ತೀಚೆಗಷ್ಟೇ ಆಲ್ಕೋಹಾಲ್ ಪಾಲಿಸಿ ಬಿಡುಗಡೆ ಮಾಡಿದ್ದು, ಇದರಲ್ಲಿ ಇಂಥ ಅತ್ಯಮೂಲ್ಯ ಸಲಹೆಗಳನ್ನು ನೀಡಿದೆ. ಜು. 1 ವೈದ್ಯರ ದಿನವಾಗಿದ್ದು, ಅಂದು ಯಾವುದೇ ಕಾರಣಕ್ಕೂ ಕುಡಿಯಬೇಡಿ ಎಂದಿದೆ. ಜತೆಗೆ ಸೆ.5 ಶಿಕ್ಷಕರ ದಿನವಾಗಿದ್ದು, ಅಂದೂ ಕುಡಿಯದಂತೆ ಹೇಳಿದೆ.
ಒಂದು ವೇಳೆ ಕುಡಿತ ಬಿಡಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ ಪುರುಷರು 18 ಎಂಎಲ್ (ಒಂದು ಮಧ್ಯಮ ಗಾತ್ರದ ಸಿರಿಂಜ್‌ನಲ್ಲಿ ಹಿಡಿಯುವ ಔಷಧಿಯಷ್ಟು) ಹಾಗೂ ಮಹಿಳೆಯರು 9 ಎಂಎಲ್(ಅಂದರೆ ಪುಟ್ಟ ಸಿರಿಂಜ್‌ನಲ್ಲಿ ಹಿಡಿಯುವ ಔಷಧಿಯಷ್ಟು) ಸೇವಿಸಬಹುದು. ಇದು ಸಾಕಗಲ್ಲ ಎಂದೆನಿಸಿದರೆ ಎರಡನೇ ಸಿಪ್ ತೆಗೆದುಕೊಳ್ಳಬಹುದು. ಆದರೆ ಇದು ಮೊದಲ ಸಿಪ್ ತೆಗೆದುಕೊಂಡ ಒಂದು ಗಂಟೆ ಬಳಿಕ. ಅದು ಎರಡನೇ ಸಿಪ್‌ಗೆà ಅಂತ್ಯವಾಗಬೇಕು.
ಸಭೆಗಳಲ್ಲಿ ನಿಷೇಧ: ಇಷ್ಟು ಮಾತ್ರವಲ್ಲ, ಒಕ್ಕೂಟದ ಯಾವುದೇ ಸಭೆಯಲ್ಲಿ ಮದ್ಯ ಪೂರೈಕೆ ಮಾಡದೇ ಇರಲು ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಒಕ್ಕೂಟ ದೇಶಾದ್ಯಂತ ನಡೆಸುವ ಸಭೆ ಮತ್ತಿತರ ಕಾರ್ಯಕ್ರಮಗಳಲ್ಲಿ ಗುಂಡು ಹಾಕುವ ವ್ಯವಸ್ಥೆ ಇಲ್ಲ ಎಂದು ನಿರೀಕ್ಷಿಸಲಾಗುತ್ತಿದೆ. ವೈದ್ಯರು ರೋಗಿಗಳಿಗೆ ಮದ್ಯ ಸೇವಿಸದಂತೆ ಬೋಧನೆ
ಮಾಡುವಂತೆ, ಅದನ್ನೂ ವೈದ್ಯರೂ ಪಾಲಿಸಬೇಕು ಎಂದು ಹೇಳಿದೆ. ಜೊತೆಗೆ ರೋಗಿಗಳ ಎದುರು ವೈದ್ಯರು ಗೌರವ ಕಾಪಾಡುವಂತೆ, ಐಎಂಎಯ ನೀತಿ ಸಂಹಿತೆಯನ್ನು ಪಾಲಿಸುವಂತೆ ಹೇಳಿದೆ.
ವೃತ್ತಿ ಘನತೆ ಕಾಪಾಡಿ: ಇತ್ತೀಚಿನ ದಿನಗಳಲ್ಲಿ ವೈದ್ಯರ ಬಗ್ಗೆ ವ್ಯಕ್ತವಾಗುತ್ತಿರುವ ಪ್ರತಿಕೂಲ ಅಭಿಪ್ರಾಯ, ಹಲ್ಲೆಯಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ವೈದ್ಯ ಒಕ್ಕೂಟ ವೈದ್ಯರು, ವೃತ್ತಿಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಸಲಹೆ ನೀಡಿದೆ. ರೋಗಿಗಳು ವೈದ್ಯರನ್ನು ನಂಬುವಂತೆ ಮತ್ತು ಅವರ ಮೇಲೆ ವಿಶ್ವಾಸ ಇರಿಸುವಂತೆ ಇರಬೇಕು. ಸಾರ್ವಜನಿಕವಾಗಿ ವೈದ್ಯರು ಕೆಟ್ಟ ನಡತೆಯನ್ನು ಪ್ರದರ್ಶಿಸಿದರೆ, ಅಥವಾ ಅಗೌರವ ಪೂರ್ವಕವಾಗಿ ನಡೆದುಕೊಂಡರೆ, ಅದು ವೈದ್ಯರ ಅಗೌರವಕ್ಕೆ ಕಾರಣವಾಗುತ್ತದೆ. ಜೊತೆಗೆ ಅವರ ಹೆಸರೂ
ಹಾಳಾಗುತ್ತದೆ ಎಂದು ಐಎಂಎಯ ಅಧ್ಯಕ್ಷ ಡಾ.ಕೆ.ಕೆ. ಅಗರ್‌ವಾಲ್ ಅವರು ಹೇಳಿದ್ದಾರೆ.