ಕಾಲೇಜು ಜೀವನ ಎಂದಾಕ್ಷಣ ನೆನಪಗುವುದೇ ಎಕ್ಸಾಮ್ಸ್ ಟೆನ್‌ಷನ್, ಸೆಮಿನಾರ್ ಪ್ರಿಪರೇಷನ್, ಅಸೈನ್‌ಮೆಂಟ್ ಸಬ್‌ಮಿಟ್, ನೋಟ್ಸ್ ಕಂಪ್ಲೀಟ್. ಇವೆಲ್ಲದರೊಂದಿಗೆ ಹೆಚ್ಚು ಮನದಲ್ಲಿ ಉಳಿಯುವುದು “ಸ್ನೇಹ’ವೆಂಬ ವಿಸ್ತಾರವಾದ ಕಡಲು ಮಾತ್ರ. ಸ್ನೇಹವೆಂಬುದೇ ಹಾಗೆ ಸಾಗರದಷ್ಟೇ ವಿಶಾಲವಾದದ್ದು. ಅದಕ್ಕೆ ಆರಂಭವೂ ಇಲ್ಲ , ಅಂತ್ಯವೂ ಇಲ್ಲ.
ನನ್ನ ಜೀವನದ “ಗೆಳೆತನ’ ಎಂಬ ದೋಣಿಯಲ್ಲಿ ಹಲವಾರು ಪ್ರಯಾಣಿಕರಿದ್ದರು. ಇವರಲ್ಲಿ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವೆನಿಸಿದವರು ನಾಲ್ಕು ಜನ. ವೈಷ್ಣವಿ, ಸಮೀಕ್ಷಾ , ವಿದ್ಯಾ ಮತ್ತು ಚಂದನಾ. ಅದೆಷ್ಟೋ ತುಂಟಾಟಗಳು, ಕೋಪ-ತಾಪಗಳು ನಮ್ಮ ನಡುವೆ ಇದ್ದರೂ ಒಬ್ಬರನ್ನು ಇನ್ನೊಬ್ಬರ ಮುಂದೆ ಬಿಟ್ಟುಕೊಡಲು ತಯಾರಾಗುತ್ತಿರಲಿಲ್ಲ. ಸ್ನೇಹವೆಂಬ ವಿಶಾಲವಾದ ಕಡಲಿನಲ್ಲಿ ಪ್ರಯಾಣಿಸಿದ ದಿನಗಳನ್ನು ನೆನಪಿಸಿಕೊಂಡರೆ ಇಂದು ಕಣ್ಣಂಚಿನಲ್ಲಿ ಹನಿಗಳು ಒಂದೊಂದಾಗಿ ಜಾರಿಹೋಗುತ್ತದೆ.
ಕಾಲೇಜ್ ಡೇ, ವಿಲೇಜ್ ವಿಸಿಟಿಂಗ್, ಕ್ಲಾಸ್ ಬಂಕ್ ಎಂಬುದು ಒಂದೊಂದು ದಿನಗಳು ಕೂಡ ಮರೆಯಲಾಗದ ಸವಿನೆನಪುಗಳ ರಾಶಿ. ಫ್ರೀ ಟೈಮ್‌ನಲ್ಲಿ ಲೈಬ್ರೆರಿಯ ಕಡೆ ಹೆಜ್ಜೆ ಹಾಕದೆ, ಕಾಲೇಜ್ ಕ್ಯಾಂಟೀನಿನತ್ತ ನಮ್ಮ ಪಯಣ ಸಾಗಿದರೆ ಅಲ್ಲಿ ಹರಟೆ ಹೊಡೆಯುತ್ತ ಕಾಲ ಕಳೆದರೆ ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ.
ಮಳೆಗಾಲದ ಮುಸ್ಸಂಜೆಯ ಹೊತ್ತಿನ ಚಳಿಯಲ್ಲಿ ನೆನಪಾಗುವುದು “ಸೋನು ಚಾಟ್ಸ್’. ಆ ಚಳಿಯ ನಡುವೆ ಹೊಟ್ಟೆಗೆ ಬೀಳುವ ಬಿಸಿ ಬಿಸಿ ಮಸಾಲೆಪುರಿ, ಶೇವ್‌ಪುರಿಯ ಸವಿಯೇ ಬೇರೆ. ಅಂತೂ ಚಾಟ್ಸ್ ತಿಂದದ್ದಾಯಿತು. ಇನ್ನು ಮನೆಗೆ ಹೋಗೋಣ ಎನ್ನುವಷ್ಟರಲ್ಲಿ “ಹೇ ರಿದಂ ಫ್ಯಾನ್ಸಿಗೆ ಹೋಗೋಣ’ ಎನ್ನುವ ಗೆಳತಿ ವಿದ್ಯಾಳ ಮಾತು. ಅವಳಿಗೆ ಫ್ಯಾನ್ಸಿಗೆ ಒಬ್ಬಳೇ ಹೋಗಲು ಭಯವೊ ಅಥವಾ ನಮ್ಮೊಂದಿಗೆ ಹೋಗಬೇಕೆಂಬ ಆಸೆಯೊ ಏನೋ? ಅಂತೂ ನಮ್ಮನ್ನು ಬಿಟ್ಟು ಹೋಗುತ್ತಿರಲಿಲ್ಲ.
ನಾನು ಮತ್ತು ಗೆಳತಿ ಸಮೀಕ್ಷಾ ಕ್ಲಾಸ್‌ನಲ್ಲಿ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದುದರಿಂದ ಅಲ್ಲಿ ಮೌನಕ್ಕೆ ಜಾಗವೇ ಇರಲಿಲ್ಲ. ದಿನದಲ್ಲಿ ಅದೆಷ್ಟು ಮಾತುಗಳು ನಮ್ಮಿಬ್ಬರ ನಡುವೆ ರವಾನೆಯಾಗುತ್ತಿತ್ತೂ ಲೆಕ್ಕವೇ ಇಲ್ಲ. ಕೆಲವೊಮ್ಮೆ ಅವಳು ಸಿಕ್ಕಿಬಿದ್ದರೆ ಮತ್ತೂಮ್ಮೆ ನಾನು. ಅಂತೂ ಇಬ್ಬರಲ್ಲಿ ಒಬ್ಬರಾದರೂ ಸಿಕ್ಕಿಬೀಳದೆ ಇರುತ್ತಿರಲಿಲ್ಲ.
ನಮ್ಮ ಐದು ಜನರ ಮನೆಯು ಕಾಲೇಜಿನ ಆಸುಪಾಸಿನಲ್ಲಿಯೇ ಇದ್ದುದರಿಂದ, ಸಂಜೆಯನ್ನು ಮಜವಾಗಿ ಕಳೆಯುತ್ತಿದ್ದೆವು. ಚಂದನಾಳ ದೊಡ್ಡಮ್ಮನ ಕೈರುಚಿಯ ಪುಳಿಯೋಗರೆ, ವೈಷ್ಣವಿಯ ತರೆಲ ಮಾತುಗಳು, ಸಮೀಕ್ಷಾಳ ಮುಗ್ಧತೆ, ವಿದ್ಯಾಳ ಸುಂದರ ನಗು ಯಾವುದನ್ನೂ ಮರೆಯಲು ಸಾಧ್ಯವಿಲ್ಲ.
ಜೀವನವೆಂಬ ದಾರಿಯಲ್ಲಿ ಪ್ರತಿಯೊಬ್ಬರೂ ಆಕಸ್ಮಿಕವಾಗಿ ಸಿಕ್ಕಿದವರು. ಆ ದಾರಿಯಲ್ಲಿ ಅವರೊಂದಿಗೆ ಸಾಗಿದ ದಿನಗಳನ್ನು ನೆನಪಿಸಿಕೊಂಡರೆ ಆ ದಿನಗಳು ಮತ್ತೆ ಬರಬಾರದೆ ಎಂದೆನಿಸುತ್ತದೆ. We are always 5 stars of our college. I miss you friends.. ಮತ್ತೂಮ್ಮೆ ಭೇಟಿಯಾಗೋಣ. ಹೊಸ ಕನಸನ್ನು ಹೊತ್ತು, ಮತ್ತದೇ ಪ್ರೀತಿ ವಿಶ್ವಾಸದೊಂದಿಗೆ.
– ನೀತಾ ಆರ್. ಕೆ.
ದ್ವಿತೀಯ ಪಿಯುಸಿ,
ವಿವೇಕಾನಂದ ಕಾಲೇಜ್, ಪುತ್ತೂರು