Advertisement

UV Fusion: ಪೌರಕಾರ್ಮಿಕರಿಗೆಲ್ಲಿದೆ ಬೆಲೆ?

11:24 AM Oct 03, 2023 | Team Udayavani |

ದೇಶಾದ್ಯಂತ ಸಾವಿರಾರು ಮಂದಿ ಕಾರ್ಮಿಕರಿದ್ದು, ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಪೈಕಿ ಪೌರಕಾರ್ಮಿಕ ಕೆಲಸ ನಮ್ಮೆಲ್ಲರ ಗಮನ ಸೆಳೆಯುವಂತಹದ್ದು ಎಂದರೆ ತಪ್ಪಾಗಲಾರದು. ಶ್ರಮ ಮೀರಿ ಬೀದಿ, ರಸ್ತೆ, ಸಮಾಜವನ್ನು ಶುಚಿಕೊಳಿಸುವ ಇವರನ್ನು ದೇಶದ ನಿಜವಾದ ಸ್ವಚ್ಛತಾ ರಾಯಭಾರಿಗಳು ಎಂದು ಕೆರೆದರೂ ತಪ್ಪಾಗದು.

Advertisement

ಪೌರಕಾರ್ಮಿಕರು ತನ್ನ ಕೆಲಸಗಳನ್ನು ಬೆಳಗ್ಗೆ 4 ಗಂಟೆಯಿಂದ ಪ್ರಾರಂಭಿಸುತ್ತಾರೆ. ಆದರೆ ಅವರ ಬಗ್ಗೆ ನಿಗಾ ವಹಿಸುವವರು ಯಾರು ಇಲ್ಲ. ಈ ಪೌರಕಾರ್ಮಿಕರು ಬಿಸಿಲು, ಮಳೆ, ಚಳಿ ಯಾವುದನ್ನೂ ಲೆಕ್ಕಿಸದೆ ದೇಶದ ಕೆಲಸದಲ್ಲಿ ತೊಡಗುತ್ತಾರೆ. ಯಾರೊಬ್ಬರೂ ಕೂಡ ಪೌರಕಾರ್ಮಿಕರ ಬಗ್ಗೆ ಲಕ್ಷ್ಯ ತೋರುವುದಿಲ್ಲ.

ಊಟ ಮಾಡಿದಿರ, ನೀರು ಬೇಕಾ ಅಥವಾ ಆರೋಗ್ಯ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ಕೇಳುವವರಿಲ್ಲ. ಅವರಿಗೆ ಸಹಾಯ ಮಾಡುವಂತಹ ಮನಸ್ಥಿತಿ ಯಾರಿಗೂ ಇಲ್ಲ. ಅದರ ಬದಲು ಅವರು ಸ್ವಚ್ಛ ಮಾಡಿದ ಸ್ಥಳದಲ್ಲೇ ಮತ್ತೆ ಮತ್ತೆ ಕಸವನ್ನು ಹಾಕಿ ಕೊಳಕು ಮಾಡುವುದೇ ಜನರ ಕೆಲಸವಾಗಿದೆ. ಪೌರಕಾರ್ಮಿಕರು ಕೂಡ ನಮ್ಮಂತೆಯೇ ಮನುಷ್ಯರೆಂದು ಕಾಣುವವರು ವಿರಳವಾಗಿದೆ. ಪೌರಕಾರ್ಮಿಕರು ಸ್ವಚ್ಛ ಮಾಡುತ್ತಾರೆ ಎನ್ನುವುದನ್ನು ಬಿಟ್ಟು ಅವರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವವರು ಯಾರೂ ಇಲ್ಲ.

ಪೌರಕಾರ್ಮಿಕರು ಕೂಡ ತಮ್ಮ ಆರೋಗ್ಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ. ಬರಿಗೈಯಲ್ಲಿ ಶುಚಿಗೊಳಿಸುವ ಕೆಲಸ ಮಾಡಿ ಕೈಕಾಲುಗಳನ್ನು ಸರಿಯಾಗಿ ತೊಳೆಯದಿರುವುದು, ಅದೇ ಕೈಯಲ್ಲಿ ಆಹಾರ ಸೇವಿಸುವುದನ್ನು ಬಿಡಬೇಕಾಗಿದೆ. ದೇಶ ಸ್ವತ್ಛವಾಗಿದೆ ಎಂದರೆ ಅದರಲ್ಲಿ ಎಷ್ಟು ಜನ ಪೌರಕಾರ್ಮಿಕರ ಶ್ರಮ ಇದೆ ಎನ್ನುವುದು ಯಾರಿಗೂ ತಿಳಿದಿರುವುದಿಲ್ಲ.

ಅಮೆರಿಕದಂತಹ ಬೆಳವಣಿಗೆ ಹೊಂದಿರುವ ದೇಶಗಳಲ್ಲಿ ಯಾರೊಬ್ಬರೂ ಕಸವನ್ನು ಎಲ್ಲಂದರಲ್ಲಿ ಹಾಕಿದರೆ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿಯ ಕಾನೂನುಗಳನ್ನು ಭಾರತದಲ್ಲೂ ಜಾರಿಗೆ ತರಬೇಕಾಗಿದೆ. ದಿನನಿತ್ಯದ ಬದುಕಿನಲ್ಲಿ ಪೌರಕಾರ್ಮಿಕರ ಶ್ರಮ ಕಾಣದಿದ್ದರೂ ಅವರಿಲ್ಲದೆ ಉಳಿಸಿಕೊಳ್ಳಲೂ ಸಾಧ್ಯವಿಲ್ಲ. ಅವರು ತಮ್ಮ ಕೆಲಸ ಮಾಡದಿದ್ದರೆ ಸಮಾಜದಲ್ಲಿ ಕಲುಷಿತಗೊಳ್ಳುವುದಂತು ಖಂಡಿತ. ಪ್ರಸ್ತುತ ಪರಿಸ್ಥಿತಿಯಲ್ಲಿ ಪೌರಕಾರ್ಮಿಕರಿಗೆ ಸಾಮಾಜಿಕವಾಗಿ ಗೌರವ, ಸೌಲಭ್ಯ ಹಾಗೂ ಸುರಕ್ಷತೆಯ ಅಗತ್ಯವಿದೆ. ಸರಕಾರ ಮತ್ತು ಜನರು ಅವರತ್ತ ಗಮನ ಹರಿಸಬೇಕಾಗಿದೆ.

Advertisement

-ಪೂರ್ವಿಕಾ

ಕುವೆಂಪು ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next