Advertisement
“ಎಲ್ಲೆಲ್ಲಿಯೂ ಇದೆ’ ಎಂದು ಚಾಂಗ್ ತ್ಸು ಉತ್ತರಿಸಿದ. ಡಾಂಗೌಜಿಗೆ ಗಲಿಬಿಲಿಯಾಯಿತು. ಆದರೆ ತೋರಿಸಿಕೊಳ್ಳದೆ, ವಿಷಯವನ್ನು ಇನ್ನಷ್ಟು ಸ್ಪಷ್ಟಮಾಡಿಕೊಳ್ಳುವ ಉದ್ದೇಶದಿಂದ, “ಹೀಗೆಲ್ಲ ಉತ್ತರ ಕೊಟ್ಟರೆ ಆಗುವುದಿಲ್ಲ. ಸ್ಪಷ್ಟವಾಗಿ ಎಲ್ಲಿ ಅಂತ ಹೇಳು’ ಎಂದ. ಪಂಡಿತನಾದ ತನಗೆ ತಾವೋ ಬಗ್ಗೆ ಅರಿತುಕೊಳ್ಳುವುದು ಅಷ್ಟೇನೂ ಕಷ್ಟವಲ್ಲ ಎಂಬ ಭಾವ ಅವನ ಮುಖದಲ್ಲಿತ್ತು. “ನೋಡು ನಿನ್ನ ಕಾಲ ಕೆಳಗೆ ಇರುವೆಗಳಿವೆಯಲ್ಲ. ಅದು ತಾವೋ’ ಎಂದು ಚಾಂಗ್ ತ್ಸು ಹೇಳಿದ. “ಛೆ… ಅಷ್ಟು ಕೆಳಗಾ? ಯಾಕಷ್ಟು ಕೆಳಗೆ?’ ಡಾಂಗೌಜಿಗೆ ಇರುವೆ ನೋಡಿ ಕಿರಿಕಿರಿ ಆಯಿತು.
“ಥೋ… ಸುಟ್ಟ ಇಟ್ಟಿಗೆಯಲ್ಲ… ಇಟ್ಟಿಗೆಗೆ ಜೀವವೇ ಇಲ್ಲ ?’ ಚಾಂಗ್ ತ್ಸು , ಕಕ್ಕಸ್ಸು ಹಾಕುವ ಗೊಬ್ಬರ ಗುಂಡಿ ತೋರಿಸಿದ, “ನೋಡು, ಅದು ತಾವೊ’. ಡಾಂಗೌಜಿ ಸುಮ್ಮನಾದ. ಚಾಂಗ್ ತ್ಸು ಮತ್ತೆ ಹೇಳಿದ, “ತಾವೊ ಎಲ್ಲಿದೆ ಎಂದು ನಾನು ಹೇಳಬಲ್ಲೆ. ನೀನು ಎಲ್ಲಿಲ್ಲ ಎಂಬುದನ್ನು ಹೇಳಬಲ್ಲೆಯಾ?’ ಡಾಂಗೌಜಿ ಮೌನವನ್ನು ಮುಂದುವರಿಸಿದ.