Advertisement

ಎಲ್ಲಿ ಹೋದರು ಮಡಿಕೆ ಮಾರುವವರು?

09:11 PM May 15, 2020 | Sriram |

ಮಣಿಪಾಲ: ಚಂದವಾಗಿ ಮಡಿಕೆಗಳನ್ನು ಬಿದಿರಿನ ಕೋಲಿಗೆ ಕಟ್ಟಿಕೊಂಡು ಮಾರಾಟ ಮಾಡಲು ಮನೆಮನೆಗೆ ಬರುತ್ತಿದ್ದರು. ಈಗ ಎಲ್ಲಿ ಹೋದರವರು? ನೋಡಿ ಅಕ್ಕಾ, ಎಷ್ಟು ಗಟ್ಟಿಯ ಮಡಕೆ, ಮೇಲೆ ನಿಂತುಕೊಳ್ಳಿ, ಏನೂ ಆಗಲ್ಲ. ಅಷ್ಟು ಗಟ್ಟಿ ಇದೆ. ಬಳೆ, ಸೀರೆಯ ಅನಂತರ ಹೆಂಗಳೆಯರು ಮಡಕೆ ಖರೀದಿಗಾಗಿ ವ್ಯಾಪಾರಿಯ ಸುತ್ತ ನಿಲ್ಲುವುದು ಬಾಲ್ಯದಿಂದಲೂ ನೋಡುತ್ತಾ ಬಂದಿರುತ್ತೇವೆ. ಈಗ ಆ ದಿನಗಳು ಮತ್ತೆ ಬರಲಾರದೇನೋ ಅನಿಸುತ್ತಿದೆ. ಮಡಕೆ ಎಂದರೆ ಬರೀ ಮಣ್ಣಿನ ಪಾತ್ರೆಯಲ್ಲ. ಅದೊಂದು ಸಾಂಸ್ಕೃತಿಕ ಪರಂಪರೆ. ಗ್ರಾಮೀಣರ ನಿತ್ಯ ಬಳಕೆಯ ಅಕ್ಷಯಪಾತ್ರೆ. ಆಹಾ, ಅದರಲ್ಲಿ ಮಾಡಿದ ಅಡುಗೆಯೂ ಅಷ್ಟೇ ರುಚಿಕಟ್ಟು.

Advertisement

ಬರಬೇಕಿತ್ತಲ್ಲ…ಎಲ್ಲಿ ಹೋದರು?
ಮಣ್ಣಿನ ಮಡಕೆ ಗ್ರಾಮೀಣರಿಗೆ ತಂಪು ನೀರನ್ನು ನೀಡುವ ಬಡವರ ರೆಫ್ರಿಜರೇಟರ್‌. ಮಣ್ಣಿನ ಮಡಿಕೆಯಲ್ಲಿ ತಯಾರಿಸಿದ ಆಹಾರವೂ ದೇಹವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಭೂಮಿಯು ಪೋಷಕಾಂಶಗಳು ಮತ್ತು ಖನಿಜಗಳ ನಿಧಿಯಾಗಿದೆ. ನಮ್ಮ ಪ್ರಾಚೀನರಿಗೆ ಅದರ ಪ್ರಯೋಜನಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸಿಕೊಳ್ಳಬೇಕೆಂದು ತಿಳಿದಿತ್ತು. ಅದಕ್ಕಾಗಿಯೇ ಅವರು ಮಣ್ಣಿನಿಂದ ರಚಿಸಲಾದ ಮಡಿಕೆಗಳು ಮತ್ತು ಹರಿವಾಣಗಳನ್ನು ವಿನ್ಯಾಸಗೊಳಿಸಿದರು. ಇಂದಿಗೂ, ಅನೇಕ ಭಾರತೀಯ ಕುಟುಂಬಗಳು ಮಣ್ಣಿನ ಮಡಕೆಯ ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸಲು ಆದ್ಯತೆ ನೀಡುತ್ತಿದ್ದಾರೆ.

ಈ ಮಣ್ಣಿನ ಮಡಕೆಗಳ ಯಾವುದೇ ಬಳಕೆದಾರರನ್ನು ಕೇಳಿ. ಅವರು ಖಂಡಿತವಾಗಿಯೂ ಪ್ರಶ್ನಿಸುತ್ತಾರೆ? ಈ ಪರಿಸರ ಸ್ನೇಹಿ ಮಡಕೆಗಳಿರುವಾಗ ರೆಫ್ರಿಜರೇಟರ್‌ ಅಗತ್ಯವಾದರೂ ಏನೆಂದು? ಸೆಕೆಯ ಕಾಲದಲ್ಲೂ ಅಷ್ಟು ತಂಪಿರುತ್ತದೆ ಮಡಕೆ ನೀರು. ಆದರೆ ಮನೆ ಬಾಗಿಲಿಗೆ ಬರುತ್ತಿದ್ದ ಮಡಕೆ ಮಾರುವವರು ಈಗ ಎಲ್ಲಿದ್ದಾರೆ? ಕೋವಿಡ್ ಒಂದು ಗುಡಿಕೈಗಾರಿಕೆಗೆ ಇಷ್ಟು ಮುನಿಸಿಕೊಂಡಿದ್ದಾದರೂ ಯಾಕೆ?

ಗುಡಿ ಕೈಗಾರಿಕೆಗಳ ಮೇಲೆ ಕೋವಿಡ್ ಮುನಿಸು
ಮಡಕೆ ತಯಾರಿಕೆ ಒಂದೇ ಅಲ್ಲ. ಬಳೆ ತಯಾರಿ, ಅಗರ್‌ಬತ್ತಿ ತಯಾರಿ, ಕ್ಯಾಂಡಲ್‌ ತಯಾರಿ, ಪರಿಮಳ ದ್ರವ್ಯ ತಯಾರಿಯಂತಹ ಸಾವಿರಾರು ಗುಡಿ ಕೈಗಾರಿಕೆಗಳು ನಮ್ಮ ಸುತ್ತ ಕೋವಿಡ್ ಶಾಪಗ್ರಸ್ತವಾಗಿ ಕುಳಿತಿದೆ. ಉತ್ಪಾದನೆಯ ಉದ್ದೇಶವೇ ಮಾರಾಟ. ಸಾಲ ಪಡೆದು ಮಾಡಿದ್ದು ಮನೆಯಲ್ಲೇ ಕೊಳೆತರೆ ಸಾಲ ಕಟ್ಟುವುದು ಹೇಗೆ? ದಿನ ಹೊಟ್ಟೆ ಹೊರೆಯುವುದು ಹೇಗೆ?.

ಸರಕಾರ ನೆರವು ಘೋಷಣೆ
ಅನೇಕ ಬೀದಿ ಬದಿಯ ವ್ಯಾಪಾರಿಗಳು ಹಾಗೂ ಮನೆಮನೆಗೆ ಮಾರಾಟ ಮಾಡುವ ವ್ಯಾಪಾರಿಗಳು ತುಂಬಾ ತೊಂದರೆಗೊಳ ಗಾಗಿದ್ದರು. ಅವರೆಲ್ಲರಿಗೂ ಈಗ ನೆಮ್ಮದಿ ಹಾಗೂ ಮತ್ತೆ ತಮ್ಮ ಕಸುಬನ್ನು ಪುನಃ ಆರಂಭ ಮಾಡುವ ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಿದೆ. ಅದಕ್ಕಾಗಿ 5,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೂಲಕ, ದೇಶಾ ದ್ಯಂತ ಇರುವ ಸುಮಾರು 50 ಲಕ್ಷ ವ್ಯಾಪಾರಿಗಳಿಗೆ ಈ ಮೂಲಕ ಸಾಲಸೌಲಭ್ಯ ನೀಡಿ ಅವರ ಬದುಕನ್ನು ಹಸನುಗೊಳಿಸಲಾಗುತ್ತದೆ. ಆರಂಭಿಕವಾಗಿ 10,000 ರೂ. ಸಾಲ ನೀಡಲಾಗುತ್ತದೆ. ಅಂತರ್ಜಾಲದ ಮೂಲಕ ಪಾವತಿ ಮಾಡಿಸಿಕೊಳ್ಳುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಹಾಗೆಯೇ ಸಾಲ ಮರು ಮರುಪಾವತಿಯನ್ನು ಸರಿಯಾಗಿ ಮಾಡಿದರೆ, ಹೆಚ್ಚಿನ ಸಾಲ ನೀಡಲಾಗುತ್ತದೆ.

Advertisement

“ನಾವು ಮೂಲತಃ ರಾಜಸ್ಥಾನದವರು ಮತ್ತು ಕೆಲವು ಸಮಯದಿಂದ ಮೈಸೂರಿನಲ್ಲಿ ನೆಲೆಸಿದ್ದೇವೆ. ನಮ್ಮ ಕುಟುಂಬವು ಮಣ್ಣಿನ ಮಡಕೆಗಳನ್ನು ಮಾರಾಟ ಮಾಡುತ್ತೇವೆ. ನಾನು ಮಡಕೆಗಳನ್ನು ಹೊಳಪು ಮಾಡುವುದನ್ನು ಕಲಿತಿದ್ದೇನೆ ಮತ್ತು ಅದನ್ನು ಕರಗತ ಮಾಡಿಕೊಂಡಿದ್ದೇನೆ. ಈಗ ಲಾಕ್‌ಡೌನ್‌ನಿಂದಾಗಿ ಮಾರಾಟ ಮಾಡುವುದು ಅಸಾಧ್ಯವಾಗಿದೆ. ಹುಟ್ಟೂರಿಗೆ ಹೋಗಲೂ ಸಾಧ್ಯವಿಲ್ಲ. ಮಡಿಕೆ ಮಾರಾಟ ಮಾಡಬೇಕೆಂದರೆ ಬೀದಿಗಿಲಿಯಲೇ ಬೇಕು. ಆದರೆ ಕೋವಿಡ್ ಭೀತಿ ಇರುವುದರಿಂದ ಜನರೂ ಮನೆಯಿಂದ ಹೊರಗೆ ಬಂದು ಮಡಿಕೆ ಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಸರಕಾರದ ನೆರವು ಶೀಘ್ರ ಕೈಗೆ ಸಿಕ್ಕರೆ ಒಳಿತಾಗಿತೆಂದು ಎಂದು ಬಲರಾಮ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next