Advertisement

ನೀರು ಹೀರಿಕೊಂಡ ಮಂಗಳ; ಆಕ್ಸ್‌ಫ‌ರ್ಡ್‌ ವಿವಿ ವಿಜ್ಞಾನಿಗಳ ಸಂಶೋಧನೆ

11:39 AM Dec 25, 2017 | Team Udayavani |

ಲಂಡನ್‌: ಕೆಂಪು ಗ್ರಹ ಮಂಗಳನ ಮೇಲೆ ಹಿಂದೊಮ್ಮೆ ನೀರು ಹರಿಯುತ್ತಿತ್ತು. ಆದರೆ ಆ ನೀರನ್ನು ಮೇಲ್ಪದರವು ಸ್ಪಾಂಜ್‌ ರೀತಿ ಹೀರಿಕೊಂಡು, ಈಗ ವಾಸಕ್ಕೆ ಯೋಗ್ಯವಲ್ಲದಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ಇಂಗ್ಲೆಂಡ್‌ನ‌ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.

Advertisement

ಈಗ ಮಂಗಳನ ಬಹುತೇಕ ಮೇಲ್ಮೆ„ಶುಷ್ಕ ಹಾಗೂ ಒಣಗಿದಂತಿದೆ. ಆದರೂ ಕೆಲವು ಕಡೆ ನೀರು ಈ ಹಿಂದೆ ಇದ್ದ ಸುಳಿವು ಲಭ್ಯವಾಗುತ್ತದೆ. ಆದರೆ ಈ ನೀರು ಕಾಲಸರಿದಂತೆ ಎಲ್ಲಿಹೋಯಿತು ಮತ್ತು ಏನಾ ಯಿತು ಎಂಬುದು ಇನ್ನೂ ಬಗೆಹರಿಯದ ಸಮಸ್ಯೆಯಾಗಿದೆ.

ಈ ಹಿಂದೆ ಸಂಶೋಧನೆಯಲ್ಲಿ ತಿಳಿದು  ಬಂದ ಪ್ರಕಾರ, ಮಂಗಳ ಅಯಸ್ಕಾಂತೀಯ ಶಕ್ತಿಯನ್ನು ಕಳೆದುಕೊಂಡಿದ್ದರಿಂದಾಗಿ, ನೀರೆಲ್ಲವೂ ಬಾಹ್ಯಾಕಾಶ ಸೆಳೆದುಕೊಂಡಿದೆ. ತೀವ್ರ ವೇಗದ ಗಾಳಿಯಿಂದಾಗಿ ನೀರು ಗ್ರಹದಾಚೆಗೆ ಸಾಗಿದೆ ಅಥವಾ ಹಿಮರೂಪಕ್ಕೆ ಪರಿವರ್ತನೆಯಾಗಿದೆ ಎನ್ನಲಾಗಿತ್ತು.

ಮಂಗಳ ನಲ್ಲಿನ ನೀರಿನ ವ್ಯವಸ್ಥೆಯನ್ನು ಅರಿಯಲು ಆಕ್ಸ್‌ಫ‌ರ್ಡ್‌ ವಿವಿ ವಿಜ್ಞಾನಿಗಳು ಮಾಡೆಲಿಂಗ್‌ ವಿಧಾನವನ್ನು ಬಳಸಿದ್ದಾರೆ. ಅಲ್ಲದೆ ಭೂಮಿಯ ಮೇಲಿರುವ ಕಲ್ಲಿನ ಮಾದರಿಗಳನ್ನು ಇಟ್ಟುಕೊಂಡು ಈ ಸಂಶೋಧನೆ ನಡೆಸಿದ್ದು, ಭೂಮಿಯ ಮೇಲಿರುವ ಕಲ್ಲುಗಳಿಗಿಂತ ಶೇ.25ರಷ್ಟು ಹೆಚ್ಚು ನೀರನ್ನು ಮಂಗಳನಲ್ಲಿರುವ ಕಲ್ಲುಗಳು ಹಿಂದೊಮ್ಮೆ ಹೊಂದಿದ್ದವು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next