ಕಲಬುರಗಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿ ಕಾರದಲ್ಲಿ ಇದ್ದಾಗಲೆಲ್ಲ ಭಾರತಕ್ಕೆ ಅನ್ಯಾಯವಾಗಿದೆ. ಹೀಗಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಮ್ಮಿಕೊಂಡಿರುವ “ಭಾರತ ನ್ಯಾಯ ಯಾತ್ರೆ’ ಬದಲು ಭಾರತಕ್ಕೆ ಮಾಡಿದ ಅನ್ಯಾಯಕ್ಕಾಗಿ ಮೊದಲು ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವದ ಅವಕಾಶ ಬಂದಿತ್ತು. ಅದನ್ನು ಕಾಂಗ್ರೆಸ್ ಏಕೆ ನಿರಾಕರಿಸಿತು ಎಂಬುದನ್ನು ಹೇಳಲಿ. ಸಿಯಾಚಿನ್ ಭಾಗವನ್ನು ಚೀನಾ ಆಕ್ರಮಣ ಮಾಡಿಕೊಂಡಾಗ ಆ ಜಾಗದಲ್ಲಿ ಹುಲ್ಲೂ ಸಹ ಬೆಳೆಯೋದಿಲ್ಲ ಅಂತ ಹೇಳಿದ್ದು ಕಾಂಗ್ರೆಸ್. ಒಟ್ಟಾರೆ ಅ ಧಿಕಾರದಲ್ಲಿ ಬಂದಾಗಲೆಲ್ಲ ದೇಶಕ್ಕೆ ಅನ್ಯಾಯ ಮಾಡಿದ್ದಾರೆ. ಈಗ ಕಾಂಗ್ರೆಸ್‌ನವರಿಗೆ ಇದ್ದಿದ್ದು ಪ್ರಾಯಶ್ಚಿತದ ಕಾಲ. ಕಾಂಗ್ರೆಸ್ ಈಗಲೂ ದೇಶದಲ್ಲಿ ಭಾಷೆ ಭಾಷೆಗಳ ಆಧಾರದ ಮೇಲೆ ಜನರನ್ನು ಎತ್ತಿ ಕಟ್ಟುತ್ತಿದೆ. ಉತ್ತರದ ವಿರುದ್ಧ ದಕ್ಷಿಣದವರನ್ನು, ದಕ್ಷಿಣದ ವಿರುದ್ಧ ಉತ್ತರದವರನ್ನು ಎತ್ತಿಕಟ್ಟುತ್ತಿದೆ. ಬ್ರಿಟಿಷರು ಹಿಂದೂ ಮುಸ್ಲಿಂ ಅಂತ ಅಷ್ಟೇ ಒಡೆದರೆ ಕಾಂಗ್ರೆಸ್ ಜಾತಿ-ಜಾತಿಗಳ ನಡುವೆ ಒಡೆದಾಳುತ್ತಿದೆ ಎಂದು ಕಿಡಿಕಾರಿದ್ದಾರೆ.
ದಾಖಲೆ ಬಹಿರಂಗಪಡಿಸಲು ಸವಾಲು
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವಧಿ ಯಲ್ಲಿ 40 ಸಾವಿರ ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಲಾಗುತ್ತಿದೆ. ಈಗ ಅ ಧಿಕಾರ ಕಾಂಗ್ರೆಸ್ ಕೈಯಲ್ಲಿದೆ. ಆರೋಪ- ಪ್ರತ್ಯಾರೋಪ ಮಾಡುವುದಕ್ಕಿಂತ ತನಿಖೆ ನಡೆಸಲಿ. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯಿಂದ ತನಿಖೆಯಾಗುತ್ತಿದೆ. ತನಿಖೆ ನಡೆಯಲಿ. ಅದರಲ್ಲಿ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸಿ.ಟಿ.ರವಿ ಸವಾಲು ಹಾಕಿದರು.