Advertisement

ನರೇಗಲ್ಲದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಎಂದು?

01:16 PM Nov 15, 2019 | Suhan S |

ನರೇಗಲ್ಲ: ಗಜೇಂದ್ರಗಡ ತಾಲೂಕಿನಲ್ಲಿಯೇ ದೊಡ್ಡ ಪಟ್ಟಣವಾಗಿರುವ ನರೇಗಲ್ಲದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.

Advertisement

ಇದಕ್ಕೆ ಹೊಂದಿಕೊಂಡಿರುವ ಮಜರೇ ಗ್ರಾಮಗಳಾದ ಕೊಚಲಾಪುರ, ದ್ಯಾಂಪುರ, ಮಲ್ಲಾಪುರ, ತೋಟಗಂಟಿ, ಕೋಡಿಕೊಪ್ಪ ಸೇರಿದಂತೆ ಐದು ಗ್ರಾಮಗಳು ಹಾಗೂ ಪಟ್ಟಣ ಸೇರಿದಂತೆ ತಾಲೂಕಿನಲ್ಲಿಯೇ ದೊಡ್ಡ ಪಟ್ಟಣ ಅಲ್ಲದೇ ವಾಣಿಜ್ಯ ವ್ಯಾಪಾರಿ ಕೇಂದ್ರವಾಗಿದೆ. ಇದು ದಿನದಿಂದ ಬೆಳೆಯುತ್ತಿರುವ ಪಟ್ಟಣವಾಗಿದೆ. ಇಂತಹ ಪಟ್ಟಣಕ್ಕೆ ರಸ್ತೆಗಳಲ್ಲಿ, ಶಾಲಾ ಕಾಲೇಜುಗಳ ಆವರಣದಲ್ಲಿ ಹಾಗೂ ಪಟ್ಟಣದ ಮುಖ್ಯ ವ್ಯಾಪಾರಿ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳ ಅವಶ್ಯಕತೆಯಿದೆ.

ಪಟ್ಟಣಕ್ಕೆ ನಿತ್ಯ ರೋಣ ತಾಲೂಕಿನ ಅಬ್ಬಿಗೇರಿ, ಯರೇಬೇಲೇರಿ, ಡ.ಸ.ಹಡಗಲಿ, ನಾಗರಾಳ, ಗುಜಮಾಗಡಿ ಹಾಗೂ ಗಜೇಂದ್ರಗಡ ತಾಲೂಕಿಗೆ ಬರುವ ನಿಡಗುಂದಿ, ಹಾಲಕೇರಿ, ನಿಡಗುಂದಿಕೊಪ್ಪ, ಕಳಕಾಪುರ ಮತ್ತು ಗದಗ ತಾಲೂಕಿಗೆ ಬರುವ ಕೋಟುಮಚಗಿ, ನಾರಾಯಣಪುರ, ಕಣಗಿನಹಾಳ ಮತ್ತು ಯಲಬುರ್ಗಾ ತಾಲೂಕಿನ ದ್ಯಾಮಪುರ, ತೊಂಡಿಹಾಳ, ಬಂಡಿಹಾಳ, ಚಿಕ್ಕೇನಕೊಪ್ಪ, ಯರೇಹಂಚಿನಾಳ ಸೇರಿದಂತೆ ವಿವಿಧ ಗ್ರಾಮಗಳ ಜನತೆ ನಿತ್ಯ ನರೇಗಲ್ಲ ಪಟ್ಟಣಕ್ಕೆ ಸಂತೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಂದು ಹೋಗುವುದರಿಂದ ಇದೊಂದು ವ್ಯಾಪಾರಿ ಕೇಂದ್ರವಾಗಿದೆ.  ಇಂತಹ ಪಟ್ಟಣದಲ್ಲಿ ಒಂದು ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಸಿದೆ.

ಎಲ್ಲೆಲ್ಲಿ ಬೇಕು ಸಿಸಿ ಕ್ಯಾಮರಾ: ಪಟ್ಟಣದ ಹಳೆಯ ಬಸ್‌ ನಿಲ್ದಾಣ, ಸಂತೆ ಬಜಾರ, ಹೊಸ ಬಸ್‌ ನಿಲ್ದಾಣ ಹತ್ತಿರ, ಅನ್ನದಾನೇಶ್ವರ ಕಾಲೇಜು ರಸ್ತೆ, ಕೋಟುಮಚಗಿ ರಸ್ತೆ, ಜಕ್ಕಲಿ ರಸ್ತೆ, ವೀರಪ್ಪಜ್ಜನ ಮಠದ ರಸ್ತೆ, ಪೋಸ್ಟ್‌ ಆಫೀಸ್‌ ಹತ್ತಿರ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಸೇರಿದಂತೆ ಪಟ್ಟಣದ ವಿವಿಧ ಕಡೆಗಳಲ್ಲಿ ಸೇರಿದಂತೆ ಪಟ್ಟಣದಲ್ಲಿ ಜನತೆ ಸೇರುವ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯು ಅವಶ್ಯವಾಗಿದೆ ಎಂದು ಪಟ್ಟಣದ ಜನತೆಯ ಒತ್ತಾಯವಾಗಿದೆ.

ಕಾಳಜಿ ಬೇಕು: ಪಟ್ಟಣದಲ್ಲಿ ಸಾಕಷ್ಟು ಜನರು ಸೇರುವ ಪ್ರದೇಶಗಳಲ್ಲಿ ಮೊಬೈಲ್‌ ಹಾಗೂ ಹಣ ಕಳ್ಳತನವಾಗಿದೆ. ಆದರೆ ಯಾರು ಪೊಲೀಸ್‌ ಠಾಣಿಗೆ ಹೋಗಿ ಪ್ರಕರಣ ದಾಖಲಿಸಿಲ್ಲ. ಕಾರಣ ಇಂತಹ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೇ ಕಳ್ಳರನ್ನು ಪತ್ತೆ ಹಚ್ಚುವುದು ಸುಲಭ. ಆದರೆ, ಸಿಸಿ ಕ್ಯಾಮರಾ ಇಲ್ಲದಿರುವುದು ಇಂತಹ ಕೃತ್ಯಗಳಿಗೆ ಸಹಾಯವಾಗಿದೆ.

Advertisement

ಪಟ್ಟಣದಲ್ಲಿ ಇತ್ತೀಚೆಗೆ ಯಾವುದೇ ಕಳ್ಳತನವಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಇಲ್ಲಿನ ಪ್ರಮುಖ ರಸ್ತೆ ಹಾಗೂ ಓಣಿಗಳಲ್ಲಿ ಮುನ್ನೆಚ್ಚರಿಕೆಯಾಗಿ ಸಿಸಿ ಕ್ಯಾಮರಾ ಅಳವಡಿಸುವುದು ಅವಶ್ಯಕವಾಗಿದೆ. ಇದರಿಂದ ಪಟ್ಟಣದಲ್ಲಿ ನಡೆಯುವ ಟ್ರಾಫಿಕ್‌ ಹಾಗೂ ಸಣ್ಣ ಪುಟ್ಟ ಕಳ್ಳರನ್ನು ಹಿಡಿಯುವುದಕ್ಕೆ ಅನುಕೂಲವಾಗುತ್ತದೆ. ರಾಜೇಶ ಬಟಗುರ್ಕಿ, ಪಿಎಸ್‌ಐ.

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next