Advertisement
ಇದು ಚೇಳೂರು ತಾಲೂಕಿನ ಪಾಳ್ಯಕೆರೆ ಗ್ರಾಪಂನ ಎ. ಅಂಗನವಾಡಿ ಕೇಂದ್ರದ ಚಿಂತಾಜನಕ ಕಥೆ. ತಾಲೂಕಿನಲ್ಲಿ ಪಾಳ್ಯಕೆರೆ ಗ್ರಾಪಂ ಪ್ರಮುಖ ಕೇಂದ್ರ ಸ್ಥಾನ. 50 ವರ್ಷಗಳಿಂದೆ ಪ್ರಯಾಣಿಕರ ಆಶ್ರಯಧಾಮಕ್ಕೆಂದು ಇದ್ದ ಕಲ್ಲು ಕಟ್ಟಡವನ್ನು ಸರ್ಕಾರಿ ಶಾಲೆಗೆ ನೀಡಲಾಯಿತು. ಕಾಲ ಕ್ರಮೇಣ ಶಾಲೆಯ ಕಲ್ಲು ಕಟ್ಟಡ ಶಿಥಿಲಾವಸ್ಥೆ ತಲುಪಿತು. 15 ವರ್ಷ ಅದು ಖಾಲಿಯಿತ್ತು. 36 ವರ್ಷದ ಹಿಂದೆ ಈ ಕಟ್ಟಡದಲ್ಲಿ ಪಾಳ್ಯಕೆರೆ ಎ. ಅಂಗನವಾಡಿ ಕೇಂದ್ರ ಪ್ರಾರಂಭಿಸಲಾಯಿತು. ಈಗ ಈ ಕಟ್ಟಡ ಶಿಥಿಲಾವಸ್ತೆ ತಲುಪಿದ್ದು, ಅವಘಡಕ್ಕೆ ಆಹ್ವಾನ ನೀಡುತ್ತಿದೆ.ಅವಘಡ ಸಂಭವಿಸುವ ಮುನ್ನ ತೆರವು ಮಾಡಿ ಸೂಕ್ತ ಕಟ್ಟಡ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Related Articles
ಬದಲಾಯಿಸಿ, ಇಲ್ಲಿ ಗ್ರಂಥಾಲಯ ನಿರ್ಮಿಸಬೇಕಾಗಿದೆ. ಈ ಬಗ್ಗೆ ಗ್ರಾಪಂ ಮತ್ತು ಎ. ಅಂಗನವಾಡಿ ಇಲಾಖಾಧಿಕಾರಿಗಳಿಗೆ ಹಲವು ಬಾರಿ ತಿಳಿಸಲಾಗಿದೆ. ಈಗ ಮಳೆಗಾಲ ಶುರುವಾಗಿದ್ದು, ಅವಘಡ ಸಂಭವಿಸಿದರೆ ಸರ್ಕಾರವೇ ನೇರ ಹೊಣೆ.
● ಪಿ.ವಿ.ವೆಂಕಟರೆಡ್ಡಿ, ಪಾಳ್ಯಕೆರೆ ಗ್ರಾಪಂ ಹಿರಿಯ ಮುಖಂಡ
Advertisement
ಖಾಲಿ ಜಾಗ ವ್ಯವಸ್ಥೆ ಮಾಡಿದರೆ ಎ. ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಸ್ಥಳ ನೀಡುವಂತೆ ಪಾಳ್ಯಕೆರೆ ಗ್ರಾಪಂನ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಟ್ಟಡ ಕುಸಿದರೆ ಪಂಚಾಯ್ತಿಯೇ ನೇರ ಹೊಣೆ.● ಈರಮ್ಮ ಸಿದ್ರಾಮಪ್ಪ ವಂದಾಲ, ಮೇಲ್ವಿಚಾರಕರು ಚೇಳೂರು ವೃತ್ತ