Advertisement

“ಮಹಿಳೆ ಬುದ್ಧಿವಂತೆ, ದೂರದರ್ಶಿ ಆದಾಗ ಮನೆ ಉದ್ಧಾರವಾಗುತ್ತದೆ ‘

09:05 PM Jun 10, 2019 | Team Udayavani |

ಉಪ್ಪುಂದ: ಮಹಿಳೆಯರು ಮನೆ ಮತ್ತು ಕುಟುಂಬದ ಪ್ರಧಾನ ಭಾಗ. ಮಹಿಳೆ ಬುದ್ಧಿವಂತಳೂ, ದೂರದರ್ಶಿಯೂ, ಹೊಣೆಗಾರಳೂ ಆದರೆ ಮನೆ ಉದ್ಧಾರವಾಗುತ್ತದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ತ್ರಾಸಿಯ ಕೊಂಕಣಿ ಖಾರ್ವಿ ಸಮುದಾಯ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಕೇಂದ್ರ ಒಕ್ಕೂಟದ ಪದಗ್ರಹಣ ಹಾಗೂ ವಿಶೇಷ ಚೇತನರಿಗೆ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ಕಾಲದಲ್ಲಿ ಕಿತ್ತುತಿನ್ನುವ ಬಡತನ ಅನುಭವಿಸುತ್ತಿದ್ದ ಬೈಂದೂರು ಪರಿಸರದ ಜನರು ಈಗ ಶಿಕ್ಷಣ ಪಡೆದು ಉದ್ಯೋಗ, ಸೊÌàದ್ಯೋಗ ನಡೆಸುತ್ತ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಇದಕ್ಕೆ ಸರಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡಿರುವುದು ಎಷ್ಟು ಕಾರಣವೋ, ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳೂ ಅಷ್ಟೇ ಮುಖ್ಯ ಕಾರಣ. ಯೋಜನೆಯ ಸ್ವಸಹಾಯ ಸಂಘಗಳು ಸುಖ, ಸಂಪತ್ತು ನೀಡಲಾರವು. ಅವು ಮಾಯ, ಮಂತ್ರ, ಪವಾಡಗಳಿಂದ ಬಾರವು. ತಾನು ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ಕಲಿಸುತ್ತವೆ ಎಂದರು.

ಪಡೆದಿರುವುದನ್ನು ಬಳಸಲು ತಿಳಿಯದಿದ್ದರೆ ಪಡೆದದ್ದೆಲ್ಲ ವ್ಯರ್ಥವಾಗುತ್ತವೆ. ಸಂಘಗಳು ಶಿಸ್ತು, ನಿಯತ್ತು, ವ್ಯವಹಾರ, ಉಳಿತಾಯ ಮತ್ತು ಹಣ ನಿರ್ವಹಣೆಯ ಕೌಶಲವನ್ನು ರೂಢಿಸುತ್ತವೆ. ಸಂಘಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಅಕ್ಷರ ಜ್ಞಾನ, ಸಂಖ್ಯಾ ಜ್ಞಾನ ಬಂದಿದೆ. ಇಲ್ಲಿನ ಜನರಲ್ಲಿ ಆಗಿರುವ ಪರಿವರ್ತನೆಗೆ ಇವೆಲ್ಲ ಕಾರಣ. ಯೋಜನೆಯನ್ನು ಇನ್ನಷ್ಟು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಕೊಂಕಣಿ ಖಾರ್ವಿ ಸಮುದಾಯ ಭವನದ ಅಧ್ಯಕ್ಷ ಕೆ. ಬಿ. ಖಾರ್ವಿ, ಕುಂದಾಪುರ ಐಡಿಬಿಐ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕಿ ಶ್ರೀಜಾ ಎಸ್‌. ಉಪಸ್ಥಿತರಿದ್ದರು.

Advertisement

ಕೇಂದ್ರ ಒಕ್ಕೂಟದ ನಿರ್ಗಮನ ಅಧ್ಯಕ್ಷ ಎಚ್‌.ಎಂ. ಕೃಷ್ಣ ಪೂಜಾರಿ ನೂತನ ಅಧ್ಯಕ್ಷ ರಘುರಾಮ ಕೆ. ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಯೋಜನೆಯ ಜನಮಂಗಲ ಕಾರ್ಯಕ್ರಮದಿಂದ 22 ಜನ ವಿಶೇಷ ಚೇತನರಿಗೆ ಅಗತ್ಯ ಸಲಕರಣೆಗಳನ್ನು ವಿತರಿಸಲಾಯಿತು.

ಅಕ್ಷತಾ ಪ್ರಾರ್ಥಿಸಿದರು. ಯೋಜನೆಯ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ| ಎಲ್‌ಎಚ್‌. ಮಂಜುನಾಥ ಸ್ವಾಗತಿಸಿದರು. ತಾಲೂಕು ಯೋಜನಾ ಧಿಕಾರಿ ಪಿ. ಶಶಿರೇಖಾ ವಂದಿಸಿದರು. ಬಿ. ಸುಂದರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next