*
ಹೊಸ ಸೀರೆ ಪ್ಯಾಕ್ ಗಿಫ್ಟ್ ಬಂದಿರುತ್ತೆ ಅಂದೊRಳ್ಳಿ. ಪ್ಯಾಕೆಟ್‌ನ್ನು ಆತುರದಿಂದ ಬಿಚ್ಚಿ ಸೀರೆ ಡಿಸೈನ್ ನೋಡಿದಾಗಲೇ ಸಮಾಧಾನ. ಸಖತ್ತಾಗಿಯೋ, ಸುಮಾರಾಗಿಯೋ ಇರುವ ಸೀರೆ ನಿಮ್ಮ ಮೂಡ್ ಡಿಸೈಡ್ ಮಾಡಬಹುದು. ನೀವು ಹೇಗಿದ್ದೀರಿ, ನಿಮ್ಮ ನಿಲುವು ಹೇಗೆ, ಬಣ್ಣ ಯಾವುದು? ಮೊದಲಾದುದರ ಆಧಾರದಲ್ಲಿ ಸೀರೆ ನಿಮಗೆ ಒಪ್ಪುತ್ತೋ ಇಲ್ಲವೋ ಅನ್ನುವುದು ನಿರ್ಧಾರವಾಗುತ್ತೆ. ಅದನ್ನೆಲ್ಲ ಬಿಡಿ, ಯಾವತ್ತಾದ್ರೂ ಸೀರೆಯ ಒಳಭಾಗದಲ್ಲಿ ಇರುವ ರ್ಯಾಪರ್ ಬಗ್ಗೆ ಗಮನಹರಿಸಿದ್ದೀರಾ? ಬಹಳ ಮೃದುವಾಗಿ ಸ್ಪಾಂಜ್ ಪೀಸ್ ಥರ ಇರುವ ಆ ಮೆಟೀರಿಯಲ್‌ನ ಸರಿಯಾದ ಉಪಯೋಗ ಮಾಡಿದವರು ಬಹಳ ಕಡಿಮೆ. ಸೀರೆ ಪ್ಯಾಕಿಂಗ್ ಜತನವಾಗಿ ಇರುವವರೆಗೂ ಅದು ನೀಟಾಗಿ ಸೀರೆಯೊಳಗೆ ಅವಿತು ಕುಳಿತಿರುತ್ತದೆ, ಅದೇ ಒಮ್ಮೆ ಸೀರೆಗೆ ಪ್ಯಾಕಿಂಗ್‌ನಿಂದ ಹೊರಬರುವ ಅವಕಾಶ ಸಿಕ್ಕಿತು ಅಂದೊRಳ್ಳಿ, ರ್ಯಾಪರ್ ನೇರ ಡಸ್ಟ್‌ಬಿನ್ ಸೇರಿರುತ್ತೆ. ಕಸದ ಜೊತೆ ಕಸವಾಗಿ ಹೋಗುತ್ತದೆ. ರ್ಯಾಪರ್ ಬಗ್ಗೆ ಇಷ್ಟೆಲ್ಲ ಕೊರೆಯೋದಕ್ಕೂ ಕಾರಣ ಇದೆ.
Advertisement
ಚೆಂದ ಚೆಂದ ಸೀರೆಗಳನ್ನು ನೋಡಿದ್ದೀರಲ್ಲ, ಅವೆಲ್ಲ ಸ್ಟ್ರೆಚೆಬಲ್ ಸೀರೆಗಳು. ಲಿಕ್ರಾ ಮೆಟೀರಿಯಲ್‌ನಿಂದ ಮಾಡಿದ ಸೀರೆಗಳು. ಈ ಲಿಕ್ರಾ ಸೀರೆಗೂ ಸೀರೆಯನ್ನು ಮಡಚಿಡುವಾಗ ಒಳಗಿಡುವ ಸ್ಪಾಂಜ್‌ನಂಥ ಮೆಟೀರಿಯಲ್‌ಗೂ ಸಂಬಂಧ ಇದೆ. ಲಿಕ್ರಾ ಸೀರೆಗಳನ್ನು ಈ ಮೆಟೀರಿಯಲ್‌ಗಳನ್ನು ಬಳಸಿಕೊಂಡೇ ತಯಾರಿಸುತ್ತಾರೆ! ಇದಕ್ಕೆ ಇನ್ನೊಂದು ಹೆಸರು ಸ್ಪಾಂಡೆಕ್ಸ್.
ಹೌದು, ಪ್ಯಾಕಿಂಗ್ ಮೆಟೀರಿಯಲ್‌ನಿಂದ ಸೀರೆ ಮಾಡ್ತಾರೆ ಅಂದ್ರೆ ಯಾರಿಗಾದ್ರೂ ಅನುಮಾನ ಬರದೇ ಇರುತ್ತಾ? ಡೌಟ್ ಇದ್ದೇ ಇರುತ್ತೆ. ಅಷ್ಟು ಡೆಲಿಕೇಟ್ ಆಗಿರುವ ಮೆಟೀರಿಯಲ್‌ನಿಂದ ತಯಾರಿಸಿರೋ ಸೀರೆ ಎಷ್ಟು ಬಾಳಿಕೆ ಬರಬಹುದು ಅನ್ನೋದು ಮೊದಲ ಡೌಟ್. ಈಗ ನಿಮ್ಮ ಮೊದಲ ಡೌಟ್ ಕ್ಲಿಯರ್ ಮಾಡೋಣ; ಲಿಕ್ರಾ ಸೀರೆಗಳಲ್ಲಿ ಕೇವಲ ಶೇ.20 ರಷ್ಟು ಮಾತ್ರ ಪ್ಯಾಕಿಂಗ್ ಮೆಟೀರಿಯಲ್ ಆದ ಸ್ಪಾಂಡೆಕ್ಸ್‌ನ್ನು ಬಳಸುತ್ತಾರೆ. ಉಳಿದ ಭಾಗವನ್ನು ರೇಷ್ಮೆಯಿಂದಲೋ ಅಥವಾ ಇತರ ಮೆಟೀರಿಯಲ್‌ಗಳಿಂದಲೋ ತುಂಬುತ್ತಾರೆ. ಕೆಲವೊಮ್ಮೆ ಈ ಮೆಟೀರಿಯಲ್‌ನ್ನೇ ಗಟ್ಟಿಗೊಳಿಸಿ ಹಾಗಾಗೇ ಬಳಸೋದಿದೆ. ಹೇಗೆ ಬಳಸಿದರೂ ಈ ಮೆಟೀರಿಯಲ್‌ನ ವಿಶೇಷತೆ ಎದ್ದು ಕಾಣುತ್ತೆ. ಅದು ಝಗಮಗ ಹೊಳಪು! ಈ ಹೊಳಪು ಇಡೀ ಸೀರೆಗೆ ಎಲಿಗೆಂಟ್ ಲುಕ್ ನೀಡುತ್ತೆ. ಲಿಕ್ರಾ ಸೀರೆ ಫ್ಯಾಶನೆಬಲ್ ಪಾರ್ಟಿವೇರ್ ಆಗಿರಲು ಬಹುಮುಖ್ಯ ಕಾರಣ ಈ ಹೊಳಪು. ಸ್ಟ್ರೆಚೆಬಲ್
ಸೀರೆ ಜಾಸ್ತಿ ಹಠ ಮಾಡಲ್ಲ, ಬಹಳ ವಿಧೇಯನಂತೆ ಹೇಳಿದ ಹಾಗೆ ಕೇಳುತ್ತೆ. ಮೈಯಿಂದ ಸರ್ರನೆ ಜಾರಲ್ಲ, ಉಟ್ಟಿರೋದು ಉಟ್ಟಹಾಗೆ, ಅತ್ತಿತ್ತ ಅಲ್ಲಾಡಲ್ಲ. ಇದು ಈ ಸೀರೆಯ ವಿಶೇಷ. ಇದು ಸ್ಟ್ರೆಚೆಬಲ್ ಸಾರಿ. ಎಳೆದಷ್ಟು ರಬ್ಬರ್‌ನಂತೆ ಹಿಗ್ಗುತ್ತೆ, ಸೆಟ್ ಮಾಡೋದು ಬಹಳ ಸುಲಭ.
Related Articles
ಬರೀ ಲಿಕ್ರಾಗಿಂತಲೂ ನೆಟ್‌ಗಳ ಹೆಣಿಗೆಯ ಜೊತೆ ಇದ್ದರೆ ಲಿಕ್ರಾ ಸೀರೆಗೆ ಭರ್ಜರಿ ಸೊಗಸು. ಮೈಯೆಲ್ಲ ಲಿಕ್ರಾ ಮೆಟೀರಿಯಲ್ ಆಗಿದ್ದು ಅಂಚಿಗೆ ಚೆಂದದ ಎಂಬ್ರಾಯಿಡರಿ ವರ್ಕ್ ಬಂದರೆ ಸಖತ್ತಾಗಿರುತ್ತೆ.
Advertisement
ಬಣ್ಣಗಳೆಷ್ಟು?ಬಹಳ ವೆರೈಟಿ ಇದೆ. ಈ ಮೆಟೀರಿಯಲ್‌ಗೆ ಹೇಳಿಮಾಡಿಸಿದಂಥ ಬಣ್ಣಗಳು. ಆಲಿವ್ ಮತ್ತು ಗೋಲ್ಡನ್ ಕಲರ್ ಮಿಕ್ಸ್ ಇರೋ ಕಾಂಬಿನೇಶನ್ ಅಂತೂ ಸಖತ್ ಚೆಂದ.
ನಿ¾ಮ ಫಿಗರುÅ, ಕಲರ್, ಎತ್ತರ, ಏನೇ ಇರಲಿ. ಇದು ನಿಮಗೆ ಸೆಟ್ ಆಗುತ್ತೆ, ಅದೇ ಇದರ ಸ್ಪೆಷಾಲಿಟಿ.