Advertisement
ಸದ್ಯ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳೇ ಅಭಿವೃದ್ಧಿ ಹೊಂದಿದ ದೇಶಗಳ ಮಾರುಕಟ್ಟೆಗಿಂತ ಅಪಾಯದಲ್ಲಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ‘ಹಾಂಕಾಂಗ್ ಮತ್ತು ಚೀನದ ಅರ್ಥ ವ್ಯವಸ್ಥೆ ಮುಂದಿನ 3 ವರ್ಷಗಳಲ್ಲಿ ಹಿಂಜರಿತಕ್ಕೆ ಒಳಗಾಗಲಿವೆ. ಎರಡೂ ದೇಶಗಳಲ್ಲಿ ದೇಶೀಯವಾಗಿ ಹಲವು ವಸ್ತುಗಳಿಗೆ ಬೇಡಿಕೆ ಕುಸಿಯಲಿದೆ. 1997-98ನೇ ವಿತ್ತೀಯ ವರ್ಷದಲ್ಲಿ ಏಷ್ಯಾದ ಹಣಕಾಸು ವ್ಯವಸ್ಥೆ ಅನುಭವಿಸಿದ್ದ ಪರಿಸ್ಥಿತಿಯನ್ನೇ ಅನುಭವಿಸಲಿದೆ’ ಎಂದು ನೋಮುರಾ ಸಂಸ್ಥೆಯ ಸುಬ್ಬರಾಮನ್ ಮತ್ತು ಮೈಕೆಲ್ ಲೂ ನಡೆಸಿದ ಅಧ್ಯಯದಲ್ಲಿ ಪ್ರಸ್ತಾವಿಸಿದ್ದಾರೆ. 1990ರ ಬಳಿಕ ಜಗತ್ತಿನ 30 ದೇಶಗಳ ಅರ್ಥ ವ್ಯವಸ್ಥೆ, ಅಭಿವೃದ್ಧಿಯಾಗುತ್ತಿರುವ ಅರ್ಥ ವ್ಯವಸ್ಥೆಗಳನ್ನು ಅಧ್ಯಯನ ನಡೆಸಿದ ಬ್ಯಾಂಕ್ ಫಾರ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್ಸ್ ನಡೆಸಿದ ಅಧ್ಯಯನವನ್ನು ಆಧರಿಸಿ ನೊಮುರಾದ ಆರ್ಥಿಕ ವಿಶ್ಲೇಷಕರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಥಾಯ್ಲೆಂಡ್, ಕೊಲಂಬಿಯಾ ಮತ್ತು ಫಿಲಿಪ್ಪೀನ್ಸ್ ಕ್ರಮವಾಗಿ 21, 20 ಮತ್ತು 19ನೇ ಸ್ಥಾನಗಳನ್ನು ಹೊಂದಿ ಹಣಕಾಸು ವಹಿವಾಟುಗಳಿಗೆ ತೃಪ್ತಿದಾಯಕ ವಲ್ಲದ ಸ್ಥಾನಗಳನ್ನು ಪಡೆದುಕೊಂಡಿವೆ. Advertisement
ಮೂರು ವರ್ಷಗಳಲ್ಲಿ ಚೀನಕ್ಕೆ ಆರ್ಥಿಕ ಹಿಂಜರಿತ; ಭಾರತಕ್ಕಿಲ್ಲ ಆತಂಕ
09:40 AM Jun 22, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.