Advertisement

“ಚಲನಚಿತ್ರ ವೀಕ್ಷಣೆ ವಿಮರ್ಶಾತ್ಮಕವಾದಾಗ ರಸಗ್ರಹಣ ಸಾಧ್ಯ’

08:58 PM Apr 24, 2019 | Team Udayavani |

ಉಡುಪಿ: ಚಲನಚಿತ್ರಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಪ್ರಭಾವದ ಹಿನ್ನೆಲೆ ಇದೆ. ನಿರ್ದೇಶಕ ದೃಶ್ಯ, ಶ್ರಾವ್ಯ ಹಾಗೂ ತಾಂತ್ರಿಕತೆಯನ್ನು ಬಳಸಿಕೊಂಡು ತನ್ನ ಉದ್ದೇಶಕ್ಕೆ ತಕ್ಕನಾಗಿ ಚಿತ್ರೀಕರಿಸುತ್ತಾನೆ. ಆದರೆ ಪ್ರೇಕ್ಷಕ ಚಲನಚಿತ್ರಗಳನ್ನು ವೀಕ್ಷಿಸುವಾಗ ಸತ್ಯಾಸತ್ಯತೆಯ ಅರಿವಿನ ಪ್ರಜ್ಞೆಯಿಂದ ವೀಕ್ಷಿಸಬೇಕೇ ಹೊರತು ಭಾವುಕರಾಗಿ ಅಲ್ಲ. ಪ್ರೇಕ್ಷಕ ಗ್ರಾಹಕ ಬಯಕೆಗಳನ್ನು ಮೀರಿ, ಚಲನಚಿತ್ರಗಳನ್ನು ನೋಡುವುದಕ್ಕಿಂತ ವಿಮಶಾìತ್ಮಕವಾಗಿ ಕಾಣುವುದರ ಮೂಲಕ ಅರ್ಥೈಸಿಕೊಂಡಾಗ ‘ರಸಗ್ರಹಣ’ ಸಾಧ್ಯ ಎಂದು ಚಲನಚಿತ್ರ ವಿಮರ್ಶಕ ಪ್ರೊ| ಕೆ. ಫ‌ಣಿರಾಜ್‌ ಹೇಳಿದರು.

Advertisement

ಡಾ| ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ತೃತೀಯ ಸೆಮಿಸ್ಟರ್‌ ವಿದ್ಯಾರ್ಥಿ ಶಿಕ್ಷಕರಿಗಾಗಿ ನಡೆದ “ಚಲನಚಿತ್ರ ರಸಗ್ರಹಣ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಚಲನಚಿತ್ರ ತಾಂತ್ರಿಕತೆ ಮತ್ತು ಅದು ಜನಸಾಮಾನ್ಯರ ಮೇಲೆ ಬೀರುವ ಪರಿಣಾಮ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಕಾಲೇಜಿನ ಸಮನ್ವಯಾಧಿಕಾರಿ ಡಾ| ಮಹಾಬಲೇಶ್ವರ ರಾವ್‌ ಕಾರ್ಯಾಗಾರದ ಉದ್ದೇಶ ನಿರೂಪಿಸಿದರು. ಖ್ಯಾತ ಕತೆಗಾರ್ತಿ ವೈದೇಹಿ ಅವರ “ದಾಳಿ’ ಕಥಾಧಾರಿತ ಮೇದಿನಿ ಕೆಳಮನೆ ನಿರ್ದೇಶನದ ಕಿರುಚಿತ್ರದ ಬಗ್ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next