Advertisement

ಹೆಣ್ಣಿನ ಮೇಲೆ ದೌರ್ಜನ್ಯವಾದಾಗ ಅಸಹಾಯಕಳಾಗಿ ಅಳುತ್ತಿದ್ದೆ

11:54 AM Mar 12, 2017 | |

ಬೆಂಗಳೂರು: ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ನಾನೊಬ್ಬ ಒಂಟಿ ಮಹಿಳೆ, ಒಬ್ಬಳೇ ಏನು ಮಾಡಬಲ್ಲೆ ಎಂದು ಯೋಚಿಸಿ ಅಳು ಬರುತ್ತಿತ್ತು. ಜತೆಗೆ ರೋಷವೂ ಬರುತ್ತಿತ್ತು ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದರು. 

Advertisement

ಬಿಜೆಪಿ ಶಿವಾಜಿನಗರ ಮಂಡಲ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಧನೆ ಮಾಡುವ ಕೆಚ್ಚು, ಕಿಚ್ಚು ನಮ್ಮಲ್ಲಿದೆ. ಹಾಗಿದ್ದರೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಡೆದಾಗ ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ ಎನಿಸುತ್ತದೆ. ಮೇಲಾಗಿ ಇಂತಹ ದೌರ್ಜನ್ಯ ನಡೆದಾಗ ಆರೋಪಿಗಳ ವಿರುದ್ಧ ಪೊಲೀಸರು ಸರಿಯಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸದೆ ಅವರಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಕರುಣೆ ತೋರಿಸುವ ಪುರುಷರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಮಗೆ ಪುರುಷರ ಕರುಣೆ ಬೇಕಾಗಿಲ್ಲ. ನಾವು ಮಾಡುವ ಕೆಲಸಕ್ಕೆ ಪ್ರೋತ್ಸಾಹ ಬೇಕು. ಶಿಕ್ಷಣ, ಆರ್ಥಿಕ ಸದೃಢತೆ ಬೇಕು. ಅದಕ್ಕೆ ಪುರುಷರು ಸಹಕರಿಸಿದರೆ ಸಾಕು ಎಂದರು. ಸಂಸದ ಪಿ.ಸಿ.ಮೋಹನ್‌, ಬೆಂಗಳೂರು ಮಹಾನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾರದಾನಾಯಕ್‌ ಮತ್ತಿತರರು ಪಾಲ್ಗೊಂಡಿದ್ದರು.

ರುದ್ರೇಶ್‌ ಹತ್ಯೆಗೆ ಸೇಡು ತೀರಿಸಿಕೊಳ್ಳಬೇಕು: ರಾಜಕೀಯ ಕಾರಣಕ್ಕೆ ನಮ್ಮ ಅಣ್ಣನಂತಿದ್ದ ರುದ್ರೇಶ್‌ ಅವರನ್ನು ಕೊಲೆ ಮಾಡಲಾಯಿತು. ರುದ್ರೇಶ್‌ ಅವರ ಸಾವು ವ್ಯರ್ಥವಾಗಬಾರದು. ಇದಕ್ಕೆ ಸೇಡು ತೀರಿಸಿಕೊಳ್ಳಲೇಬೇಕು. ಅವರನ್ನು ರಾಜಕೀಯವಾಗಿ ಹತ್ಯೆ ಮಾಡಿದವರನ್ನು ಸಮ್ಮನೆ ಬಿಡಬಾರದು. ಆ ನಿಟ್ಟಿನಲ್ಲಿ ರುದ್ರೇಶ್‌ ಅವರ ಪತ್ನಿಗೆ ಶಕ್ತಿ ತುಂಬುವುರದ ಜತೆಗೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ನಮ್ಮವರನ್ನೇ ಆಯ್ಕೆ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next