Advertisement

Rajinikanth: ರಜಿನಿಕಾಂತ್‌ಗೆ ತೃತೀಯ ಲಿಂಗಿಯ ಪಾತ್ರ ಮಾಡುವ ಇಚ್ಛೆ ಇತ್ತಂತೆ

06:20 PM Jan 25, 2024 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಸಿನಿಮಾ ಬದುಕನ್ನು ಪ್ರತ್ಯೇಕವಾಗಿ ಪರಿಚಯಿಸುವ ಅಗತ್ಯವಿಲ್ಲ. ರಜಿನಿಕಾಂತ್‌ ತನ್ನ 48 ವರ್ಷಗಳ ವೃತ್ತಿ ಬದುಕಿನಲ್ಲಿ ನೂರಾರು ರೀತಿಯ ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

Advertisement

‌ವಯಸ್ಸು 73 ದಾಟಿದರೂ ರಜಿನಿಕಾಂತ್ ಇಂದಿಗೂ 20 ಹರೆಯದ ಯುವಕನಂತೆ ಬಿಗ್‌ ಸ್ಕ್ರೀನ್‌ ನಲ್ಲಿ ಅಬ್ಬರಿಸಿ, ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಇದ್ದಾರೆ. ಒಬ್ಬ ಕಲಾವಿದನಿಗೆ ಯಾವ ಪಾತ್ರ ಮಾಡಿದರೂ, ತಾನು ಹೊಸ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆ ಇರುತ್ತದೆ. ಅದರಂತೆ ರಜಿನಿಕಾಂತ್‌ ಅವರಿಗೂ ಒಂದು ಪಾತ್ರದಲ್ಲಿ ನಟಿಸುವ ಆಸೆಯಿತ್ತು. ಆದರೆ ಅದು ಇದುವರೆಗೆ ಈಡೇರಿಲ್ಲ.

ರಜಿನಿಕಾಂತ್‌ ಇದುವರೆಗೆ ವೈದ್ಯ, ಪೋಲೀಸ್ ಅಧಿಕಾರಿ, ಜೈಲರ್, ಕಾಲೇಜು ಪ್ರೊಫೆಸರ್ ಮುಂತಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಅಂದುಕೊಂಡಿರುವ ಒಂದು ಪಾತ್ರ ಇದುವರೆಗೆ ಅವರಿಂದ ಮಾಡಲು ಆಗಿಲ್ಲ.

“ನೀವು ನಟಿಸಲು ಇಷ್ಟಪಡುವ ಯಾವುದಾದರೂ ಪಾತ್ರ ಬಾಕಿ ಇದೆಯೇ?” ಎಂದು ಪತ್ರಕರ್ತರೊಬ್ಬರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ರಜಿನಿಕಾಂತ್‌ ಅವರ ಹಳೆಯ ವಿಡಿಯೋ  ಈಗ ವೈರಲ್‌ ಆಗಿದೆ.

ಇದಕೆ ರಜಿನಿಕಾಂತ್‌ “ತೃತೀಯ ಲಿಂಗಿಯ ಪಾತ್ರ” ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿದ ಎಲ್ಲರೂ ಒಮ್ಮೆ ಶಾಕ್‌ ಆಗಿದ್ದಾರೆ. ತೃತೀಯಲಿಂಗಿ ಪಾತ್ರದಲ್ಲಿ ನಟಿಸುವ ಇಚ್ಛೆಯಿದೆ. ಆದರೆ ಇದುವರೆಗೆ ಅಂಥ ಸ್ಕ್ರಿಪ್ಟ್‌ ಬಂದಿಲ್ಲ ಎಂದು ರಜಿನಿ ಹೇಳಿದ್ದಾರೆ.

Advertisement

ಇತ್ತೀಚೆಗೆ ಮಾಲಿವುಡ್‌ ಸೂಪರ್‌ ಸ್ಟಾರ್‌  ಮಮ್ಮುಟ್ಟಿ ಅವರು ʼಕಾತಲ್: ದಿ ಕೋರ್ʼ ಸಿನಿಮಾದಲ್ಲಿ ಸಲಿಂಗ ಕಾಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಮ್ಮುಟ್ಟಿ ಈ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next