Advertisement
ಕಳೆದ ವರ್ಷ ಆಲಮಟ್ಟಿ ಜಲಾಶಯದಿಂದ ನವೆಂಬರ್ ತಿಂಗಳವರೆಗೂ ಒಳ ಹರಿವಿತ್ತು. ಆದರೆ, 2021 ಅಕ್ಟೋಬರ್ ಮೊದಲ ವಾರದಲ್ಲಿಯೇ ಆಲಮಟ್ಟಿ ಜಲಾಶಯದಿಂದ ಒಳ ಹರಿವು ಸ್ಥಗಿತಗೊಂಡಿದೆ. ಹೀಗಾಗಿ ನೀರಿನ ಸಂಗ್ರಹ ಲಭ್ಯತೆ ಇಲ್ಲ. ಎಲ್ಲದಕ್ಕೂ ಸಲಹಾ ಸಮಿತಿ ಕೈಗೊಳ್ಳುವ ನಿರ್ಣಯವೇ ಅಂತಿಮ ಎಂದು ಕೆಬಿಜೆಎನ್ನೆಲ್ ಮೂಲಗಳಿಂದ ತಿಳಿದು ಬಂದಿದೆ.
Related Articles
Advertisement
ಈಗಾಗಲೇ ಮುಂಗಾರು ಭತ್ತ ಕಟಾವು ನಡೆದಿವೆ. ಹಿಂದಿನ ವರ್ಷದಂತೆ ನೀರು ಹರಿಸುತ್ತಾರೆಂಬ ನಂಬಿಕೆಯಿಂದ ಕೆಲ ರೈತರು ಹಿಂಗಾರು ಭತ್ತ ನಾಟಿಗಾಗಿ ಸಸಿ ಹಾಕಿದ್ದಾರೆ. ಜಲಾಶಯದಲ್ಲಿ ರೈತರಿಗೆ ಬೇಕಾದಷ್ಟು ನೀರು ಸಂಗ್ರಹ ಇದ್ದಾಗಲೂ ಕೃಷ್ಣಾ ನದಿಗೆ ಅನಗತ್ಯ ನೀರು ಹರಿಸಲಾಗಿದೆ ಎನ್ನುವುದು ರೈತರ ಆಕ್ರೋಶ.
ಅ.28, 2016ರಂದು ಹಿಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆ ಕರೆದು ಮಾಹಿತಿ ನೀಡಿತ್ತು. ಕಳೆದ ವರ್ಷವೂ ನ.18, 2019ರಂದು ಸಭೆ ನಡೆಸಿತ್ತು. ಆದರೆ ಇದೆಲ್ಲವೂ ನೋಡಿದಾಗ ವರ್ಷ ಗತಿಸಿದಂತೆ ಸಲಹಾ ಸಮಿತಿ ಸಭೆ ಮುಂದೂಡಿಕೊಂಡು ಬರುತ್ತಿರುವುದು ಆಶ್ಚರ್ಯ ಮೂಡಿಸಿದೆ. ಆದಾಗ್ಯೂ ಮುಂಚಿತವಾಗಿಯೇ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿಯೇ ನೀರು ಹರಿಸುವ ಮಾಹಿತಿ ರೈತರಿಗೆ ನೀಡಬೇಕಿತ್ತು. ಆದರೂ ರೈತರ ದುರ್ದೈವವೋ ಏನೋ? ಸಭೆ ನಡೆಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಈ ಬಾರಿ ಹಿಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ನಡೆಸುವ ಸಲಹಾ ಸಮಿತಿ ಸಭೆ ರೈತರಿಗೆ ವರವಾಗಲಿದೆಯೋ? ಇಲ್ಲವೋ ಶಾಪವಾಗಲಿದೆಯೋ? ಎನ್ನುವುದನ್ನು ಕಾದುನೋಡಬೇಕು.
ಸಾಕಷ್ಟು ನೀರಿದ್ದಾಗ ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಜಲಾಶಯ ಭರ್ತಿಗೊಂಡಾಗ ನದಿಗೆ ಹರಿಸಿದ್ದು ಏಕೆ?. ಇದೊಂದು ಹುನ್ನಾರ. ರೈತರಿಗೆ ಸಮರ್ಪಕ ನೀರು ಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. -ಮಲ್ಲಿಕಾರ್ಜುನ ಸತ್ಯಂಪೇಟಿ, ಕ.ರಾ.ರೈ. ಸಂಘ, ರಾಜ್ಯ ಉಪಾಧ್ಯಕ್ಷ
ಈ ಬಾರಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಕಳೆದ ವರ್ಷ ಒಳಹರಿವು ಇತ್ತು. ಅಕ್ಟೋಬರ್ ತಿಂಗಳಿಂದ ಈವರೆಗೂ ಸ್ಥಗಿತಗೊಂಡಿದೆ. ಕಡಿಮೆ ಅವಧಿ ಬೆಳೆ ಬೆಳೆದರೆ ಮಾತ್ರ ರೈತರಿಗೆ ವರದಾನ ಆಗಲಿದೆ. ನ.15ರಿಂದ 22ರೊಳಗಾಗಿ ಸಲಹಾ ಸಮಿತಿ ಸಭೆ ನಡೆಸಬಹುದು. -ಶಂಕರ ನಾಯ್ಕೋಡಿ, ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್, ನಾರಾಯಣಪುರ
-ಬಾಲಪ್ಪ.ಎಂ. ಕುಪ್ಪಿ