ಚಿತ್ತಾಪುರ: ಪಟ್ಟಣದ ಕೆಲ ಯುವಕರು ಬೈಕ್‌ಗಳ ಸೈಲೆನ್ಸ್‌ರ್‌ಗಳನ್ನು ಮಾರ್ಪಾಟು ಮಾಡಿ ಕರ್ಕಶ ಶಬ್ದದೊಂದಿಗೆ ಶರವೇಗದಲ್ಲಿ ಚಾಲನೆ ಮಾಡುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಎನಿಸಿದೆ. ಟ್ರಾಫಿಕ್ ನಿಯಮಗಳ ಪ್ರಕಾರ ಹೀಗೆ ಕರ್ಕಶ ಶಬ್ದ ಹೊರಡಿಸುವುದು ನಿಷಿದ್ಧ. ಕರ್ಕಶ ಶಬ್ದ ಹೊರಡಿಸುವಬೈಕ್ ಅಥವಾ ವಾಹನಗಳಿಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಸೂಸುವವಾಹನಗಳ ಮಾಲೀಕರ ವಿರುದ್ಧ ಪೊಲೀಸ್‌ಇಲಾಖೆಹಾಗೂ ಆರ್‌ಟಿಒ ಪ್ರಕರಣ ದಾಖಲಿಸಬಹುದು.ದಂಡ ಹಾಕಲು ಕೂಡ ಅವಕಾಶವಿರುವ ಜತೆಗೆ ವಾಹನಗಳನ್ನೂ ವಶಪಡಿಸಿಕೊಳ್ಳಬಹುದು. ಇಲ್ಲವೇ ವಾಹನ ಮಾಲೀಕರ ನೋಂದಣಿಯನ್ನೇ ತಾತ್ಕಾಲಿಕವಾಗಿ ರದ್ದುಪಡಿಸಬಹುದಾಗಿದೆ.
ಬುಲೆಟ್, ಎನ್‌ಫಿಲ್ಡ್ ಹಾಗೂ ಇತರ ಹೆಚ್ಚು ಸಿಸಿ ಬೈಕ್‌ಗಳು ಇಂತಿಷ್ಟೇ ಶಬ್ದ ಹೊರಸೂಸಬೇಕುಎಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ. ಬೈಕ್ ಶಬ್ದದ ಪ್ರಮಾಣ ಕಂಡು ಹಿಡಿಯಲು ಸಂಬಂಧಪಟ್ಟ ಇಲಾಖೆಗಳ ಬಳಿ ಡೆಸಿಬಲ್ ಮೀಟರ್‌ಗಳಿವೆ.ಆದರೆ ಈ ಇಲಾಖೆಗಳು ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್‌ಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಬೇಕಿದೆ.
ಕ್ರೇಜ್‌ನಲ್ಲಿ ಬೈಕ್ ಖರೀದಿಸುವ ಯುವಕರು, ನಂತರ ತಮ್ಮದೇ ಸ್ಟೈಲ್‌ನಲ್ಲಿ ಬೈಕ್ ಮಾರ್ಪಾಟು ಮಾಡಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ವ್ಹೀಲಿಂಗ್ ಮಾಡುವವರು, ಬೈಕ್‌ನ ಸೈಲೆನ್ಸ್‌ರ್ ಹಾರ್ನ್ಮಾ ರ್ಪಾಟು ಮಾಡುತ್ತಿದ್ದಾರೆ. ಹೆಚ್ಚು ಸಿಸಿ ಬೈಕ್‌ಗಳ ಖರೀದಿದಾರರು ಸೈಲೆನ್ಸ್‌ರ್ ಬದಲಿಸುವ ಹವ್ಯಾಸಕ್ಕೆಬಿದ್ದಿದ್ದು, ಕರ್ಕಶ ಶಬ್ದ ಹೊರಡಿಸುತ್ತ ಓಡಾಡುತ್ತಿದ್ದಾರೆ. ಸೈಲೆನ್ಸ್‌ರ್ ಬದಲಿಸುವ ಹೆಚ್ಚು ಸಿಸಿ ಬೈಕ್‌ಗಳು ದಾರಿ ಹೋಕರ ಬಳಿ ಹಾಯ್ದು ಹೋದರೆ ಸಾಕು, ಒಮ್ಮೆಲೆ ಎದೆ ಜೋರಾಗಿ ಬಡಿದುಕೊಳ್ಳುತ್ತದೆ.
ಆದರೆ ಕಿಡಿಗೇಡಿ ಯುವಕರು ವಿಕೃತ ಸಂತೋಷ ಹೊಂದುತ್ತಿರುವುದಕ್ಕೆಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬುಧವಾರ ಸಂತೆ ದಿನವೂ ಸಹ ಮಾರುಕಟ್ಟೆಗೆ ಬರುವ ಬಂದು ಬ್ರುಮ್ ಬ್ರುಮ್ ಎಂದು ಶಬ್ಬ ಮಾಡುತ್ತಿರುವುದರಿಂದ ಅನೇಕರು ಭಯಪಟ್ಟು ರಸ್ತೆಮೇಲೆಯೇ ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಕೆಲ ಕಿಡಿಗೇಡಿಗಳು ಶಾಲೆ ಹಾಗೂ ಕಾಲೇಜುಗಳುಬಿಡುವಾಗ ಬೈಕ್‌ನ ಸೈಲೆನ್ಸ್‌ರ್ ಶಬ್ದ ಮಾಡುತ್ತಾ ನಾಲ್ಕೈದು ಸುತ್ತು ಹಾಕಿ ವಿಕೃತ ಸಂತೋಷ ಪಡುವುದು ಸಾಮಾನ್ಯವಾಗಿದೆ.
-ಎಂ.ಡಿ. ಮಶಾಖ