Advertisement

ನಾಲೆಗಳಿಗೆ ತಡೆಗೋಡೆ ನಿರ್ಮಾಣ ಯಾವಾಗ?

04:27 PM Nov 18, 2019 | Suhan S |

ಭಾರತೀನಗರ : ನಾಲೆಗೆ ಬಸ್‌ ಬಿದ್ದು ಅಮೂಲ್ಯ ಜೀವಗಳು ಬಲಿಯಾದಾಗ ಕಣ್ತೆರೆಯುವ ಆಡಳಿತ ಕೂಡಲೇ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದ್ದು, ಮತ್ತೂಂದು ಅವಘಡ ಸಂಭವಿಸಿದಾಗಲೇ ಎಚ್ಚರವಾಗುವುದು. ಇದು ಸರಣಿ ಅವಘಡಗಳ ಸಂದರ್ಭದಲ್ಲಿ ಕಂಡುಬರುವ ಸಂಗತಿ.

Advertisement

ಭಾರತೀನಗರ ಸುತ್ತಮುತ್ತಲು ಮಾತ್ರವಲ್ಲ ನೀರಾವರಿ ಪ್ರದೇಶದ ಬಹುತೇಕ ಎಲ್ಲ ಕಡೆ ರಸ್ತೆಗಳ ಪಕ್ಕದಲ್ಲಿರುವ ನಾಲೆಗಳು, ಕೆರೆಗಳು, ಹೊಂಡಗಳಿಗೆ ತಡೆಗೋಡೆಗಳಿಲ್ಲದೆ ಆಗಾಗ್ಗೆ ದುರ್ಘ‌ಟನೆಗಳು ಸಂಭವಿಸುತ್ತಲೇ ಇವೆ. ಒಂದು ದುರಂತ ಸಂಭವಿಸಿದಬಳಿಕ ಅಧಿಕಾರಿಗಳು ಕೂಡಲೇ ತಡೆಗೋಡೆ ನಿರ್ಮಿಸುವ ಆಶ್ವಾಸನೆ ನೀಡಿ ಘಟನೆ ಸ್ಥಳದಲ್ಲಿ ಮಾತ್ರ ಸುರಕ್ಷತೆ ಕ್ರಮ ಕೈಗೊಂಡು ಕೈತೊಳೆದುಕೊಳ್ಳುತ್ತಿದ್ದಾರೆ. ಆದರೆ, ರಸ್ತೆಗಳು ಎಂದ ಮೇಲೆ ವಾಹನ ಸಂಚಾರ ನಿರಂತರ. ದುರ್ಘ‌ಟನೆಗಳೂ ಸಾಮಾನ್ಯ. ಆದರೆ, ಅದು ಸಂಘವಿಸದಂತೆ ತಡೆಯಲು ಕೆಲವು ರಕ್ಷಣಾ ಕ್ರಮ ಕೈಗೊಳ್ಳಬೇಕು ಅದನ್ನು ಈ ನಾಘಲೆ ಬಳಿ ಕೈಗೊಳ್ಳದಿರುವ ಕಾರಣ ವಾಹನ ಸವಾರರು ಜೀವ ಕೈಯಲ್ಲಿಡಿದು ಸಾಗಬೇಕಾಗಿದೆ. ಮೂವತ್ತು ಮಂದಿ ಸಾವುದರೂ

ಎಚ್ಚರವಿಲ್ಲ: ಮೈಸೂರು ಬಳಿಯ ಉಂಡಬತ್ತಿಕೆರೆಗೆ ಟೆಂಪೋ ಉರುಳಿ ಬರೋಬ್ಬರಿ 30 ಮಂದಿ ಸಾವನ್ನಪ್ಪಿದರು. ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಮದುವೆ ಸಂಭ್ರಮದಲ್ಲಿದ್ದವರು ಉಂಡಬತ್ತಿಕೆರೆ ಬಳಿ ತಡೆಗೋಡೆಯಿಲ್ಲದೆ ಮೈಸೂರು-ಊಟಿ ಹೆದ್ದಾರಿಯಿಂದ ಉರುಳಿ ಕೆರೆಗೆ ಬಿದ್ದ ಪರಿಣಾಮ ಊರಿಗೆ ಊರೇ ಸ್ಮಶಾನ ಸದೃಶವಾಗಿದ್ದ ದುರಂತ ಕಣ್ಣಮುಂದಿದೆ. ಅದಾದ ಬಳಿಕ ಉಂಡಬತ್ತಿ ಕೆರೆ ಉದ್ದಕ್ಕೂ ತಡೆಗೋಡೆ ನಿರ್ಮಿಸಲಾಯಿತು. ಈ ಘಟನೆ ಮಸುಕಾದ ಹಲವು ದಿನಗಳ ನಂತರ ಮಂಡ್ಯ-ಶಿವಳ್ಳಿ-ಪಾಂಡವಪುರ ಮಾರ್ಗದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ವದೇಸಮುದ್ರ ಬಳಿ ನಾಲೆಗೆ ಉರುಳಿಬಿದ್ದು 34 ಮಂದಿ ವಿಸಿ ನಾಲೆ ನೀರಿನಲ್ಲಿ ಜೀವ ಬಿಡಬೇಕಾಯಿತು.

ಈ ದುರಂತ ಸಂಭವಿಸಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ನಾಲೆಗಳಿಗೆ ತಡೆಗೋಡೆ ನಿರ್ಮಿಸುವ ಕುರಿತು ನೀರಾವರಿ ಇಲಾಖೆಗೆ ಸೂಚನೆ ನೀಡಿ, ಸಾಕಷ್ಟು ಅನುದಾನವನ್ನೂ ಮಂಜೂರು ಮಾಡಿದ್ದರು. ಆ ಬಳಿಕ ಮಂಡ್ಯ ತಾಲೂಕಿನ ಮಂಗಲ, ಲೋಕಸರ ಬಳಿಯ ನಾಲೆಗೆ ತಾಯಿ ಮಗಳು ಹೋಗುತ್ತಿದ್ದಸ್ಕೂಟರ್‌ ಉರುಳಿ ಬಿದ್ದು ಮಾರನೆಯ ದಿನ ಇಬ್ಬರ ಶವಗಳನ್ನು ಪತ್ತೆ ಹಚ್ಚಲಾಗಿತ್ತು. ಇಂತಹ ಅನೇಕ ದುರಂತಗಳು ಸಂಭವಿಸುತ್ತಲೇ ಇವೆ.

ಕೆಲವು ದೊಡ್ಡ ಮಟ್ಟದಲ್ಲಿ ಸುದ್ದಿಯಾದರೆ, ಮತ್ತೆ ಕೆಲವು ಘಟನೆಗಳು ಸದ್ದಿಲ್ಲದೆ ಮುಚ್ಚಿಹೋಗುತ್ತಿವೆ. ನಿನ್ನೆ ತಾನೆ ಮಂಡ್ಯ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದು ಹನುಮಂತನಗರದ ಬಳಿ ರಸ್ತೆಪಕ್ಕದನಾಲೆಗೆ ಉರುಳಿಬಿದ್ದು, ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಕಾರು ಮಾತ್ರ ಸಂಪೂರ್ಣ ಜಖಂಗೊಂಡಿದೆ. ಆದ್ದರಿಂದ ಹೆಚ್ಚಿನ ವಾಹನ ಸಂಚಾರವಿರುವ ನಾಲೆಗಳ ಬದಿಯ ರಸ್ತೆಗಳಲ್ಲಿ ತಡೆಗೋಡೆಗಳನ್ನು ಹಾಕಿಅಪಾಯ ತಪ್ಪಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಕಣ್ಮುಚ್ಚಿ ಕುಳಿತ ಇಲಾಖೆ:  ನಮ್ಮ ಜಿಲ್ಲೆಯಲ್ಲಿ ಸಂಭವಿಸಿದ ದುರಂತಗಳು ಇಂದಿಗೂ ನಮ್ಮ ಕಣ್ಣಮುಂದಿದೆ. ಪಾಂಡವಪುರ ತಾಲೂಕಿನ ಕನಕನ ಮರಡಿ-ವದೇಸಮುದ್ರ ಬಳಿ ಸಂಭವಿಸಿದ ಖಾಸಗಿ ಬಸ್‌ ದುರಂತ ಎದೆನಡುಗಿಸುವಂತದ್ದು. ಆಗಲೇ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿಯವರು ಎಲ್ಲೆಲ್ಲಿ ನಾಲೆಗಳ ಪಕ್ಕದ ರಸ್ತೆಗಳಲ್ಲಿ ಹೆಚ್ಚಿನ ಸಂಚಾರವಿರುತ್ತದೋ ಅಲ್ಲಿ ತಡೆಗೋಡೆ ನಿರ್ಮಿಸಲು ಆದೇಶಿಸಿದ್ದರು. ಆದರೆ, ಯಾಕೆ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೋ ಗೊತ್ತಿಲ್ಲ. ಈ ಕೂಡಲೇ ನೀರಾವರಿಯಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ತಡೆ ಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಸಂಭವಿಸುವ ಘಟನೆಗಳಿಗೆ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

 

-ಅಣ್ಣೂರು ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next