Advertisement
ರಾಜ್ಯದಲ್ಲಿ 8ನೇ ತರಗತಿಯಲ್ಲಿ ಓದುವ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ವರ್ಷ ಶಿಕ್ಷಣ ಇಲಾಖೆ ಕರ್ನಾ ಟಕ ದರ್ಶನ ಪ್ರವಾಸವನ್ನು ಕೈಗೊಳ್ಳು ತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ 2020 ಹಾಗೂ 2021 ರಲ್ಲಿ ಕರ್ನಾಟಕ ದರ್ಶನ ಪ್ರವಾಸವನ್ನು ಸ್ಥಗಿತಗೊಳಿಸಿತ್ತು. ಕಳೆದ ವರ್ಷ 2022 ರಲ್ಲಿ ಕೊನೆ ಕ್ಷಣದಲ್ಲಿ ಪ್ರವಾಸಕ್ಕೆ ಅನುಮತಿ ನೀಡಿತ್ತು. 2023 ರಲ್ಲಿ ಕರ್ನಾಟಕ ದರ್ಶನ ಪ್ರವಾಸದ ಬಗ್ಗೆ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲೆಯಲ್ಲಿ 8 ನೇ ತರಗತಿ ಓದುತ್ತಿರುವ ಮಕ್ಕಳ ಪಟ್ಟಿ ಕಳುಹಿಸಿದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿದ್ಯಾರ್ಥಿ ಪೋಷಕರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Related Articles
Advertisement
ಕಳೆದ ವರ್ಷ ತರಾತುರಿಯಲ್ಲಿ ಪ್ರವಾಸ ಕಳುಹಿಸಿದ ಶಿಕ್ಷಣ ಇಲಾಖೆ!:
ಕಳೆದ ವರ್ಷ ಕರ್ನಾಟಕ ದರ್ಶನ ಪ್ರವಾಸವನ್ನು ಮಕ್ಕಳಿಗೆ ತರಾತುರಿಯಲ್ಲಿ ಕೈಗೊಂಡಿದ್ದು ಶಿಕ್ಷಕ ಹಾಗೂ ವಿದ್ಯಾರ್ಥಿ ಪೋಷಕರಿಂದ ಶಿಕ್ಷಣ ಇಲಾಖೆ ಸಾಕಷ್ಟು ವಿರೋಧ ಎದುರಿಸಿತು. ಶಿಕ್ಷಣ ಇಲಾಖೆ ಡಿಸೆಂಬರ್ ಒಳಗೆ ಪ್ರವಾಸ ಮುಗಿಸಬೇಕೆಂದು ಆದೇಶ ಹೊರಡಿಸುತ್ತದೆ. ಆದರೆ ಕರ್ನಾಟಕ ದರ್ಶನ ಪ್ರವಾಸವನ್ನು ಪರೀಕ್ಷೆಗಳ ಸಮೀಪ ಇರುವ ಫೆಬ್ರವರಿ ತಿಂಗಳಲ್ಲಿ ಏರ್ಪಡಿಸುವುದು ಎಷ್ಟು ಮಾತ್ರ ಸಮಂಜಸ ಎಂದು ಶಿಕ್ಷಕರೊಬ್ಬರು ಪ್ರಶ್ನಿಸಿದರು. ಕಳೆದ ಬಾರಿ ಕರ್ನಾಟಕ ದರ್ಶನವನ್ನು ಫೆಬ್ರವರಿಯಲ್ಲಿ ಹಮ್ಮಿಕೊಂಡಿದ್ದರಿಂದ ಪರೀಕ್ಷಾ ದಿನಗಳು ಹತ್ತಿರ ಇದ್ದಾಗ ಪ್ರವಾಸ ಕಳುಹಿಸಲು ಸಾಕಷ್ಟು ವಿದ್ಯಾರ್ಥಿ ಪೋಷಕರು ಹಿಂದೇಟು ಹಾಕಿದರು. ಪ್ರವಾಸ ಹೊರಡಲಿಕ್ಕೆ ಶಿಕ್ಷಕರಿಗೂ ಇಷ್ಟ ಇರಲಿಲ್ಲ. ಕೊನೆ ಕ್ಷಣದಲ್ಲಿ ಇಲಾಖೆ ಆದೇಶವನ್ನು ಪಾಲಿಸಬೇಕಿದ್ದರಿಂದ ಮಕ್ಕಳ ಮನವೊಲಿಸಿ ಕರ್ನಾಟಕ ದರ್ಶನ ಪ್ರವಾಸವನ್ನು ಒಲ್ಲದ ಮನಸ್ಸಿನಿಂದ ತರಾತುರಿಯಲ್ಲಿ ಕೈಗೊಳ್ಳಬೇಕಾಯಿತು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
ಆರು ತಾಲೂಕುಗಳಿಂದ 424 ಮಕ್ಕಳ ಪಟ್ಟಿ ಕಳುಹಿಸಿದರೂ ಅನುಮತಿ ಸಿಕ್ಕಿಲ್ಲ:
ಜಿಲ್ಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳನ್ನು ಮಾತ್ರ ಕರ್ನಾಟಕ ದರ್ಶನ ಪ್ರವಾಸಕ್ಕೆ ಕಳುಹಿಸಲಾಗುತ್ತದೆ. ಜಿಲ್ಲೆಯಲ್ಲಿ 8ನೇ ತರಗತಿಯಲ್ಲಿ ಓದುವ ಕ್ರಿಯಾಶೀಲ ಅದರಲ್ಲೂ ಪ್ರತಿಭೆ, ಕ್ರೀಡೆಗಳ ಬಗ್ಗೆ ಆಸಕ್ತಿ ಇರುವ ಮಕ್ಕಳನ್ನು ಮಾತ್ರ ಪ್ರವಾಸ ಕಳುಹಿಸಲಾಗುತ್ತದೆ. ಈಗಾಗಲೇ ಜಿಲ್ಲೆಯ 6 ತಾಲೂಕುಗಳಿಂದ 424 ಮಕ್ಕಳ ಪಟ್ಟಿಯನ್ನು ಇಲಾಖೆಗೆ ಕಳುಹಿಸಲಾಗಿದೆ. ಆದರೆ ಇನ್ನೂ ಪ್ರವಾಸ ಹೊರಡಲಿಕ್ಕೆ ಅನುಮತಿ ಸಿಕ್ಕಿಲ್ಲ. ಅನುಮತಿ ಸಿಕ್ಕಿ ಕೂಡಲೇ ಕರ್ನಾಟಕ ದರ್ಶನ ಪ್ರವಾಸ ಹಮ್ಮಿಕೊಳ್ಳಲಾಗುವುದೆಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-ಕಾಗತಿ ನಾಗರಾಜಪ್ಪ