Advertisement

ಡಿಪೋ ಕಾರ್ಯಾರಂಭ ಯಾವಾಗ?

04:00 PM May 06, 2019 | Team Udayavani |

ಶಿರಹಟ್ಟಿ: ಪಟ್ಟಣವು ತಾಲೂಕಾ ಕೇಂದ್ರವಾಗಿದ್ದರೂ ಬಸ್‌ ಡಿಪೋ ಇರದೇ ಇರುವುದನ್ನು ತಾಲೂಕಿನ ಜನತೆ ಖಂಡಿಸುತ್ತಾ ಬಂದಿದ್ದಾರೆ. ಬಸ್‌ ಡಿಪೋಗಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಾ ಬರಲಾಗಿದೆ. ಕುಂದು ಕೊರತೆ ನಿವಾರಣಾ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಒಂದು ತಿಂಗಳು ನಿರಂತರವಾಗಿ ಹೋರಾಟ ಮಾಡಿದರೂ ನಿವೇಶನ ಖರೀದಿ ಹಾಗೂ ಕಾಂಪೌಂಡ್‌ ನಿರ್ಮಾಣ ಹಾಗೂ ಭದ್ರತಾ ಕೊಠಡಿ ನಿರ್ಮಾಣ ಮಾಡಿ ಕೈ ಬಿಡಲಾಗಿದೆ.

Advertisement

ಬಸ್‌ ಡಿಪೋ ನಿರ್ಮಾಣ ಮಾಡುವುದಾಗಿ ಇಲಾಖೆಯು ಮೂರು ವರ್ಷಗಳ ಹಿಂದೆ ನಿವೇಶನ ಖರೀದಿಸಿ, ಕಾಂಪೌಂಡ್‌ ಮತ್ತು ಭದ್ರತಾ ಕೊಠಡಿಯನ್ನು ನಿರ್ಮಿಸಿ ಕೈಬಿಟ್ಟಿದೆ. ಮುಂದಿನ ಯಾವುದೇ ಕಾಮಗಾರಿಗಳು ಜರುಗುತ್ತಿಲ್ಲ. ಡಿಪೋ ನಿರ್ಮಾಣ ನನೆಗುದಿಗೆ ಬಿದ್ದಂತಾಗಿದೆ. ಮುಂದಿನ ಕಾಮಗಾರಿಗಳು ಯಾವಾಗ ಆರಂಭಗೊಳ್ಳುತ್ತವೆ? ಯಾವಾಗ ಪೂರ್ಣಗೊಂಡು ಬಸ್‌ ಡಿಪೋ ಕಾರ್ಯ ಆರಂಭಿಸಲಾಗುತ್ತದ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಡಿಪೋ ನಿರ್ಮಾಣಕ್ಕಾಗಿ ಹೋರಾಟ ಸಮಿತಿ ಮತ್ತು ಕನ್ನಡಪರ ಹೋರಾಟ ಸಂಘಟನೆಗಳು ಸಾಕಷ್ಟು ಬಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಈ ಭಾಗದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ ಡಿಪೋ ಕಾಮಗಾರಿ ಆರಂಭಿಸಲು ಕ್ರಮಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next