Advertisement

ಹಕ್ಕಿಗಳು ಟ್ವೀಟ್‌ ಮಾಡುತ್ತಿದ್ದಾಗ ಹ್ಯಾರಿ ಪಾಟರ್‌ ಅನಾಮಿಕ: ಮೋದಿ

07:06 PM Jan 23, 2018 | Team Udayavani |

ದಾವೋಸ್‌ : 1997ರಲ್ಲಿ  ಭಾರತದ ಆಗಿನ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ದಾವೋಸ್‌ ಶೃಂಗಕ್ಕೆ ಬಂದಿದ್ದರು. ಆಗ ಜನರಿಗೆ ಹ್ಯಾರಿ ಪಾಟರ್‌ ಯಾರು ಎಂಬುದೇ ಗೊತ್ತಿರಲಿಲ್ಲ; ಆಗ ಹಕ್ಕಿಗಳು ಮಾತ್ರವೇ tweet ಮಾಡುತ್ತಿದ್ದವು; ಅಮೆಝಾನ್‌ ಎಂಬುದು ದಟ್ಟ ಅರಣ್ಯಗಳ ಪದವಾಗಿತ್ತು. ಕಳೆದ 20 ವರ್ಷಗಳಲ್ಲಿ ವಿಶ್ವದಲ್ಲಿನ ವಿಜ್ಞಾನ ತಂತ್ರಜ್ಞಾನ, ದೂರ ಸಂಪರ್ಕ ವ್ಯವಸ್ಥೆಯಲ್ಲಿ ಆಗಿರುವ ಬೆಳವಣಿಗೆಗಳು ಅಸಾಮಾನ್ಯ ಮತ್ತು ನಂಬಲಸಾಧ್ಯ ಎಂದು ನರೇಂದ್ರ ಮೋದಿ ಅವರು ಕಳೆದ 20 ವರ್ಷಗಳಲ್ಲಿ ದಾವೋಸ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿ ವಿಶ್ವ ಆರ್ಥಿಕ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ತನ್ನ ಚೊಚ್ಚಲ ಭಾಷಣ ಮಾಡುತ್ತ ಈ ಮಾತುಗಳನ್ನು ಹೇಳಿದರು.

Advertisement

ಮೋದಿ ಮುಂದುವರಿದು, 1997ರಲ್ಲಿ ಯೂರೋ ಇರಲಿಲ್ಲ; ಏಶ್ಯ ಹಣಕಾಸು ಬಿಕ್ಕಟ್ಟು ಇರಲಿಲ್ಲ; ಬ್ರೆಕ್ಸಿಟ್‌ ನ ಯಾವುದೇ ಸೂಚನೆಗಳು ಇರಲಿಲ್ಲ; ಕೆಲವೇ ಕೆಲವು ಮಂದಿ ಮಾತ್ರವೇ ಉಸಾಮಾ ಬಿನ್‌ ಲಾಡೆನ್‌ ನ ಹೆಸರು ಕೇಳಿದ್ದರು. ಹ್ಯಾರಿ ಪಾಟರ್‌ ಅಂತೂ ಯಾರಿಗೂ ಗೊತ್ತಿರಲಿಲ್ಲ ಎಂದು ಹೇಳಿದರು. 

ಇಪ್ಪತ್ತು ವರ್ಷಗಳ ಹಿಂದೆ ವಿಶ್ವವನ್ನೇ ಗೆದ್ದ ಚೆಸ್‌ ಆಟಗಾರರಿಗೆ ಕಂಪ್ಯೂಟರ್‌ ಎದುರು ಸೋಲುವ ಭೀತಿ ಇರಲಿಲ್ಲ. ಸೈಬರ್‌ ಸ್ಪೇಸ್‌ನಲ್ಲಿ ಗೂಗಲ್‌ ಇನ್ನೂ ಪ್ರವೇಶವನ್ನೇ ಪಡೆದಿರಲಿಲ್ಲ. 1997ರಲ್ಲಿ ನೀವು ಅಮೆಝಾನ್‌ ಗಾಗಿ ಪುಸ್ತಕಗಳಲ್ಲಿ ಮಾಹಿತಿ ಹುಡುಕಾಡಿದರೆ ನಿಮಗೆ ನದಿಗಳು ಮತ್ತು ದಟ್ಟಾರಣ್ಯಗಳ ವಿವರಗಳು ಸಿಗುತ್ತಿದ್ದವು, ಟ್ವೀಟಿಂಗ್‌ ಅನ್ನೋದು ಪಕ್ಷಿಗಳ ಜಾಯಮಾನವಾಗಿತ್ತೇ ಹೊರತು ಮನುಷ್ಯರದ್ದಾಗಿರಲಿಲ್ಲ  ಎಂದು ಮೋದಿ ಹೇಳಿದರು.

ಕಳೆದ 20 ವರ್ಷಗಳಲ್ಲಿ  ಜಗತ್ತು ಹೇಗೆ ಅಸಾಮಾನ್ಯ ಬೆಳವಣಿಗೆ, ಪ್ರಗತಿಯನ್ನು ಕಂಡಿದೆಯೋ ಹಾಗೆಯೇ ಭಾರತ ಕೂಡ ಅಸಾಮಾನ್ಯ ಬೆಳವಣಿಗೆ, ಪ್ರಗತಿಯನ್ನು ಸಾಧಿಸಿದೆ. ದೇವೇಗೌಡರು ದಾವೋಸ್‌ಗೆ ಬಂದಿದ್ದಾಗ ಭಾರತದ ಜಿಡಿಪಿ 400 ಶತಕೋಟಿ ಡಾಲರ್‌ಗಿಂದ ಸ್ವಲ್ಪವೇ ಜಾಸ್ತಿ ಇತ್ತು. ಇವತ್ತು ಅದು ಆರು ಪಟ್ಟು ಹೆಚ್ಚಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next