Advertisement
ಹೆಬ್ಟಾಳದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಿರಿಧಾನ್ಯಗಳನ್ನು ಬೆಳೆಯುವ ಸಂಬಂಧ ಶಿಷ್ಟಾಚಾರವನ್ನು ರೂಪಿಸಿದ್ದಾರೆ. ಅದರಂತೆ “ಪ್ಯಾಕೇಜ್ ಆಫ್ ಪ್ರ್ಯಾಕ್ಟೀಸ್’ ಸಿದ್ಧಪಡಿಸಲಾಗಿದ್ದು, ವಲಯ ವಿಸ್ತರಣೆ ಮತ್ತು ಸಂಶೋಧನಾ ಕಾರ್ಯಾಗಾರದಲ್ಲಿ ಅನುಮೋದನೆಗೊಂಡು ಬರುವ ಮಾರ್ಚ್- ಏಪ್ರಿಲ್‌ನಲ್ಲಿ ವಿಶ್ವವಿದ್ಯಾಲಯದಿಂದ ಬಿಡುಗಡೆಗೊಳ್ಳಲಿದೆ.
Related Articles
Advertisement
ಕ್ರಮಬದ್ಧತೆ ಲಭ್ಯ:
“ಪಿಒಪಿ ಬಿಡುಗಡೆ ಮಾಡುವುದರಿಂದ ಸಿರಿಧಾನ್ಯಗಳ ಕೃಷಿಗೆ ಒಂದು ಕ್ರಮಬದ್ಧತೆ ಬರುತ್ತದೆ. ಉದಾಹರಣೆಗೆ ಕೊರಲೆ ಬೆಳೆಗೆ ಸಾಲುಗಳ ನಡುವೆ 40-45 ಸೆಂ.ಮೀ. ಅಂತರ ಇರಬೇಕು ಎಂದು ಹೇಳುವುದು, ಕೆಲವೊಮ್ಮೆ ಬೆಳೆಗಳಿಗೆ ತುಕ್ಕುರೋಗ ಬರುತ್ತದೆ. ಆಗ ಸಿಂಪಡಣೆ ಮಾಡಬೇಕಾದ ಔಷಧಿ ಯಾವುದು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಪಿಒಪಿಯಲ್ಲಿ ಶಿಫಾರಸು ಮಾಡಲಾಗುತ್ತದೆ. ಅದರಿಂದ ಬೆಳೆಗಳ ಇಳುವರಿ ಹೆಚ್ಚುವುದರ ಜತೆಗೆ ರೈತರಿಗೂ ಅಧಿಕ ಆದಾಯ ಬರುತ್ತದೆ. ಬಿಡುಗಡೆಯಾದ ನಂತರ ಇದನ್ನು ರೈತರಿಗೆ ತಲುಪಿಸುವ ಕೆಲಸ ಮಾಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
ಆರು ರಾಜ್ಯಗಳಲ್ಲಿ ಹೆಚ್ಚು :
ಸಿರಿಧಾನ್ಯಗಳಲ್ಲಿ ರಾಗಿ, ಜೋಳ, ಸಜ್ಜೆ ಸೇರಿ ಒಂಬತ್ತು ಪ್ರಕಾರಗಳು ಬರುತ್ತವೆ. ಪ್ರಮುಖವಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಡ ಒಳಗೊಂಡಂತೆ ಆರು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿ ಕರ್ನಾಟಕದಲ್ಲೇ ಅತಿಹೆಚ್ಚು ಅದರಲ್ಲೂ ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ಹಾವೇರಿ, ವಿಜಯಪುರ, ಬೆಳಗಾವಿಯಲ್ಲಿ ಬೆಳೆಯಲಾಗುತ್ತದೆ. ಇದರ ಸಂಸ್ಕರಣೆ ತುಂಬಾ ಕ್ಲಿಷ್ಟಕರವಾಗಿದ್ದು, ಇತ್ತೀಚೆಗೆ ರೈತ ಉತ್ಪಾದಕ ಸಂಘಗಳಿಂದ ಯಂತ್ರಗಳನ್ನು ಅಳವಡಿಸಿಕೊಂಡು ಸಂಸ್ಕರಣೆ ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಹೆಚ್ಚಾಗಿದೆ. ರಾಜ್ಯದಲ್ಲಿ ಇದರ ಮೌಲ್ಯವರ್ಧಿತ ಉತ್ಪನ್ನಗಳ ವಹಿವಾಟು ವಾರ್ಷಿಕ 250 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
– ವಿಜಯಕುಮಾರ ಚಂದರಗಿ