Advertisement

Arrested: ಗಾಂಜಾ ಮತ್ತಿನಲ್ಲಿ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಪುಂಡರ ಬಂಧನ

11:57 AM Dec 31, 2023 | Team Udayavani |

ನೆಲಮಂಗಲ: ಕಾಲೇಜು ಬಿಟ್ಟ ಯುವಕರ ಗುಂಪು ಗಾಂಜಾ ಸೇವನೆ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ನಾಲ್ಕು ಪುಂಡರನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಅಂದ್ರಹಳ್ಳಿ ಕಾರ್ತಿಕ್‌(18), ದೊಂಬರಹಳ್ಳಿ ಮಂಜುನಾಥ್‌(19), ಅಂದ್ರಹಳ್ಳಿà ನವೀನ್‌(20), ಗಂಗೋಡನಹಳ್ಳಿ ಅನಿಲ್‌(21) ನಾಲ್ಕು ಯುವಕರು ಸ್ನೇಹಿತರಾಗಿದ್ದು ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ. ಉತ್ತರ ಭಾರತ ಮೂಲಕ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಪಡೆದು ಸೇವನೆ ಮಾಡಿ ವ್ಹೀಲಿಂಗ್‌ ಮಾಡುವ ಜತೆ ಒಂಟಿಯಾಗಿ ಕಾಣುವ ವ್ಯಕ್ತಿಗಳನ್ನು ಹೆದರಿಸಿ ದರೋಡೆ ಮಾಡುತ್ತಿದ್ದರು. ಈ ಪ್ರಕರಣ ವನ್ನು ಗಂಭೀರವಾಗಿ ತೆಗೆದುಕೊಂಡ ಗ್ರಾಮಾಂತರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ರಾಜೀವ್‌ ತಂಡ  ಪುಂಡರನ್ನು ವಶಕ್ಕೆ ಪಡೆದು ಅವರಿಂದ 1.200ಕೆ.ಜಿ ಗಾಂಜಾ, 2 ಬೈಕ್‌, ವಿವಿಧ ಕಂಪನಿಯ 17 ಮೊಬೈಲ್‌ಗ‌ಳನ್ನು ವಶಕ್ಕೆ ಪಡೆದುಕೊಂಡು ಖದೀಮರನ್ನು ಜೈಲಿಗೆ ಕಳುಹಿಸಿದ್ದಾರೆ.

ಶೋಕಿ, ಜೈಲುಪಾಲು: ಕಾಲೇಜಿಗೂ ಹೋಗದೆ, ಕೆಲಸಕ್ಕೂ ಹೋಗದೆ ಅಲೆದಾಡುತ್ತಿದ್ದ ಯುವಕರು ಬೈಕ್‌ ವ್ಹೀಲಿಂಗ್‌ ಮಾಡಿಕೊಂಡು ಶೋಕಿ ಮಾಡುತ್ತಿದ್ದರು. ಗಾಂಜಾ ಚಟಕ್ಕೆ ಬಿದ್ದು ದರೋಡೆಗೆ ಮುಂದಾಗಿದ್ದು ಈಗ ಜೈಲು ಪಾಲಾಗಿದ್ದಾರೆ.

ಅಭಿನಂದನೆ : ಪ್ರಕರಣದ ಆರೋಪಿಗಳನ್ನು ಬಂಧಿಸಿದ ಇನ್‌ಸ್ಪೆಕ್ಟರ್‌ ರಾಜೀವ್‌, ಸಬ್‌ಇನ್‌ಸ್ಪೆಕ್ಟರ್‌ ಚಿಕ್ಕನರಸಿಂಹಯ್ಯ, ಸಿಬ್ಬಂದಿಗಳಾದ ರಂಗನಾಥ್‌, ಹಣಮಂತ ಹಿಪ್ಪರಂಗಿ, ಲಕ್ಷ್ಮಣ್‌, ಸುನೀಲ್‌ರವರನ್ನು ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next