Advertisement
ಸಿನಿಮಾದಲ್ಲಿ ಹೀರೋ ಅಂದ್ರೆ ಸಿಕ್ಸ್ ಪ್ಯಾಕ್ ಇರಬೇಕು, ಆತನಿಗೆ ಖಡಕ್ ಡೈಲಾಗ್ಸ್, ಭರ್ಜರಿ ಆ್ಯಕ್ಷನ್ಸ್ ಇರಬೇಕು, ಇನ್ನು ಹೀರೋಯಿನ್‌ಗೆ ಗ್ಲಾಮರಸ್ ಲುಕ್, ಸಿನಿಮಾದಲ್ಲಿ ಒಂದಾದ್ರೂ ಐಟಂ ಸಾಂಗ್, ಫಾರೀನ್ ಲೊಕೇಶನ್ ಇರಬೇಕು ಅನ್ನೋ ಸಿದ್ಧಸೂತ್ರಗಳನ್ನು ಬದಿಗಿಟ್ಟು ಮನರಂಜಿಸಲು ಬರುತ್ತಿರುವ “ವೀಲ್‌ಚೇರ್ ರೋಮಿಯೋ’ ಹೊಡಿ-ಬಡಿ ಸಿನಿಮಾಗಳ ಹಾವಳಿ ನಡುವೆ ನವಿರಾಗಿ ಸಿನಿಪ್ರೇಮಿಗಳ ಮನಮುಟ್ಟುವ ಸಿನಿಮಾ ಎಂಬುದು ಚಿತ್ರತಂಡದ ಮಾತು.
Related Articles
Advertisement
“ನಮ್ಮ ನಡುವೆಯೇ ನಡೆಯುವ ಸೂಕ್ಷ್ಮ ಮತ್ತು ಗಂಭೀರ ವಿಷಯ ವನ್ನು ಇಟ್ಟುಕೊಂಡು ಅದನ್ನು ಹ್ಯೂಮರಸ್ಸಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಕಣ್ಣು ಕಾಣದ ವೇಶ್ಯೆ ಮತ್ತು ಸದಾ ವೀಲ್ ಚೇರ್ ಮೇಲೆ ಕುಳಿತಿರುವ ಹುಡುಗನ ನಡುವಿನ ಪ್ರೀತಿಯ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ಜೊತೆಗೆ ತಂದೆ-ಮಗನ ಬಾಂಧವ್ಯದ ಭಾವನಾತ್ಮಕ ಎಳೆ ಸಿನಿಮಾದಲ್ಲಿದೆ. ಇದೊಂದು ಅಪ್ಪಟ ಲವ್‌ಸ್ಟೋರಿ ಸಿನಿಮಾ. ಹಾಗಂತ ಲವ್‌ಸ್ಟೋರಿ ಹೆಸರಿನಲ್ಲಿ ಬೇರೇನನ್ನೂ ಸಿನಿಮಾದಲ್ಲಿ ತೋರಿಸಿಲ್ಲ. ಇಡೀ ಕುಟುಂಬ ಕುಳಿತು ನೋಡುವಂತಹ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ನಟರಾಜ್.
ಇನ್ನು “ವೀಲ್‌ಚೇರ್ ರೋಮಿಯೋ’ ಸಿನಿಮಾದಲ್ಲಿ ನಾಯಕನಾಗಿ ರಾಮ್ ಚೇತನ್, ನಾಯಕಿಯಾಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಅಗಸ್ತ್ಯ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ವೆಂಕಟಾಚಲಯ್ಯ ನಿರ್ಮಿಸಿರುವ “ವೀಲ್‌ಚೇರ್ ರೋಮಿಯೋ’ ಸಿನಿಮಾದ ಹಾಡುಗಳಿಗೆ ಬಿ. ಜೆ ಭರತ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯವಿದ್ದು, ಗುರುಕಶ್ಯಪ್ ಸಂಭಾಷಣೆ ಬರೆದಿದ್ದಾರೆ.