Advertisement

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವೀಲ್ಚೇರ್‌ ವಿತರಣೆ

12:39 AM Jul 24, 2019 | sudhir |

ಶನಿವಾರಸಂತೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ತ್ಯಾಗರಾಜ ಕಾಲೊನಿಯ 75 ವರ್ಷದ ವಿಕಲಚೇತನ ವ್ಯಕ್ತಿ ಶ‌ಕುನಶೆಟ್ಟಿ ಇವರಿಗೆ ವೀಲ್ಚೇರ್‌ ವಿತರಿಸಲಾಯಿತು.

Advertisement

ಶನಿವಾರಸಂತೆ ರೋಟರಿ ಕ್ಲಬ್‌ ಮಾಜಿ ಕಾರ್ಯದರ್ಶಿ ಎ.ಡಿ.ಮೋಹನ್‌ಕುಮಾರ್‌ ವೀಲ್ಚೇರ್‌ ವಿತರಿಸಿ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆ ಜಾರಿಗೆ ಬಂದ ಅನಂತರ ರಾಜ್ಯಾದಂತ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಸರಕಾರಗಳು ಮಾಡ ಬೇಕಾಗಿದ್ದ ಕಾರ್ಯ ಕ್ರಮಗಳು ಸಂಸ್ಥೆ ಮೂಲಕ ನಡೆಯುತ್ತಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರು ಹಾಗೂ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಯೋಜನೆ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬದುಕಿಗೆ ದಾರಿದೀಪವಾಗಿದ್ದಾರೆ. ಇದೀಗ ಅವರು ಯೋಜನೆ ಮೂಲಕ ವಿಕಲಚೇತನರಿಗೆ ವೀಲ್ಚೇರ್‌, ವಾಟರ್‌ಬೆಡ್ಡ್ ಮುಂತಾದ ಅಗತ್ಯ ಸಲಕರಣೆಗಳನನ್ನು ವಿತರಣೆ ಮಾಡುತ್ತಿರುವ ಜತೆಯಲ್ಲಿ ವಿಕಲಚೇತನರಿಗೆ ಮಾಸಿಕ ಪಿಂಚಣಿ ನೀಡಿ ಅವರಿಗೆ ಆತ್ಮಬಲ ನೀಡುತ್ತಿರುವ ಕಾರ್ಯ ಶ್ಲಾಘನಿಯ ಎಂದರು.

ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ಕೆ.ರಮೇಶ್‌ ಮಾಹಿತಿ ನೀಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಮನೆ ಬಾಗಿಲಿಗೆ ಹೋಗಿ ಅಗತ್ಯ ಇರುವ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ ಮತ್ತು ಯೋಜನೆಯ ಉದ್ದೇಶವೂ ಸಹ ಸಮಾಜ ಸೇವೆಯದಾಗಿದೆ ಎಂದರು. ಸೇವಾ ಪ್ರತಿನಿಧಿ ಎಸ್‌.ಆರ್‌.ಶೋಭಾವತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next